ಭಾರತದ ವಿರುದ್ಧ ಪಾಕ್ ಆಟಗಾರನ ವಿಶ್ವ ದಾಖಲೆ ಮುರಿದ 14 ವರ್ಷದ ಅಫ್ಘಾನ್ ಸ್ಪಿನ್ನರ್..!

chinaman Noor Ahmad: ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು 124 ರನ್​ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಗೆಲುವಿಗಾಗಿ ತುಸು ಹೆಚ್ಚೇ ಬೆವರಿಲಿಸಬೇಕಾಯಿತು.

zahir | news18-kannada
Updated:September 11, 2019, 8:37 PM IST
ಭಾರತದ ವಿರುದ್ಧ ಪಾಕ್ ಆಟಗಾರನ ವಿಶ್ವ ದಾಖಲೆ ಮುರಿದ 14 ವರ್ಷದ ಅಫ್ಘಾನ್ ಸ್ಪಿನ್ನರ್..!
Noor Ahmad
  • Share this:
ಕೊಲಂಬೊದಲ್ಲಿ ನಡೆಯುತ್ತಿರುವ ಅಂಡರ್ -19 ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ್ ತಂಡದ ಯುವ ಆಟಗಾರ ನೂರ್ ಅಹ್ಮದ್ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾರತದ ವಿರುದ್ಧ ನಡೆದ ಈ ಪಂದ್ಯದಲ್ಲಿ ಅಫ್ಘಾನ್ ಸೋತರೂ ಚೀನಾಮೆನ್ ಸ್ಪಿನ್ ದಾಳಿಯ ಮೂಲಕ ನೂರ್ ಎಲ್ಲರ ಗಮನ ಸೆಳೆದರು.

14 ವರ್ಷದ ಕಿರಿ ಆಟಗಾರ ನೂರ್ ಬಲಿಷ್ಠ ಭಾರತದ ತಂಡದ ಆಟಗಾರರಾದ ನಾಯಕ ಧ್ರುವ್ ಜುರೆಲ್, ಸಲೀಲ್ ಅರೋರಾ, ತಿಲಕ್ ವರ್ಮಾ ಮತ್ತು ಅಥರ್ವ ಅಂಕೋಲೆಕರ್ ಅವರನ್ನು ತಮ್ಮ ಸ್ಪಿನ್ ಮೋಡಿ ಮೂಲಕ ಕೆಡವಿದರು. ಇದರೊಂದಿಗೆ ಅತೀ ಕಿರಿಯ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್​ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಪಾಕಿಸ್ತಾನ ತಂಡದ ಆಲ್​ರೌಂಡರ್ ಶೊಯೇಬ್ ಮಲ್ಲಿಕ್ 23 ವರ್ಷಗಳ ಹಿಂದೆ 38 ರನ್​ಗಳಿಗೆ ನಾಲ್ಕು ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಮಲ್ಲಿಕ್ 15ನೇ ವಯಸ್ಸಿನಲ್ಲಿ ನಿರ್ಮಿಸಿದ್ದ ಈ ರೆಕಾರ್ಡ್​ನ್ನು ನೂರ್ 14 ವರ್ಷ 249 ದಿನಗಳಲ್ಲಿ ಧೂಳೀಪಟಗೈದಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಡುವ ಸೂಚನೆ ಕೊಟ್ಟಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು 124 ರನ್​ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಗೆಲುವಿಗಾಗಿ ತುಸು ಹೆಚ್ಚೇ ಬೆವರಿಲಿಸಬೇಕಾಯಿತು. 38.4 ಓವರ್​ ಎದುರಿಸಿದ ಭಾರತದ ಯುವ ಆಟಗಾರರು 7 ವಿಕೆಟ್ ನಷ್ಟಕ್ಕೆ ಕೊನೆಗೂ ಗುರಿ ಮುಟ್ಟಿದರು.

ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ