Afghanistan Vs West Indies: ಟಾರ್ಗೆಟ್​ 312: ಆರು ವಿಕೆಟ್ ಪತನ: ಗೆಲುವಿಗಾಗಿ ಅಫ್ಘಾನ್ನರ ತೀವ್ರ ಹೋರಾಟ

ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ವೆಸ್ಟ್​ ಇಂಡೀಸ್ 311 ರನ್​ಗೆ ತಮ್ಮ ಇನಿಂಗ್ಸ್ ಕೊನೆಗೊಳಿಸಿತು. ಇನ್ನು ಅಫ್ಘಾನ್ ಪರ ಜರ್ದಾನ್ 2 ವಿಕೆಟ್ ಕಬಳಿಸಿ ಮಿಂಚಿದರೆ, ರಶೀದ್ ಖಾನ್ 1 ವಿಕೆಟ್ ಕಿತ್ತು ಗಮನ ಸೆಳೆದರು.

zahir | news18
Updated:July 4, 2019, 10:12 PM IST
Afghanistan Vs West Indies: ಟಾರ್ಗೆಟ್​ 312: ಆರು ವಿಕೆಟ್ ಪತನ: ಗೆಲುವಿಗಾಗಿ ಅಫ್ಘಾನ್ನರ ತೀವ್ರ ಹೋರಾಟ
.
  • News18
  • Last Updated: July 4, 2019, 10:12 PM IST
  • Share this:
ವಿಶ್ವಕಪ್​ನಲ್ಲಿ ಇಂದು ನಡೆಯುತ್ತಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್  311 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಕಠಿಣ ಸವಾಲನ್ನು ಬೆನ್ನತ್ತುವ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಅಫ್ಘಾನ್ ಸಂಕಷ್ಟಕ್ಕೆ ಸಿಲುಕಿತು.

ಕೆಮರ್ ರೋಚ್​ ಅವರ 2ನೇ ಓವರ್​ನಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಗುಲ್ಬದ್ದೀನ್ ನೈಬ್ ( 5) ಕ್ಯಾಚಿತ್ತು ಹೊರ ನಡೆದರು. ಈ ಬಳಿಕ ಜತೆಯಾದ ಇಕ್ರಂ ಹಾಗೂ ರೆಹಮತ್ ಶಾ ಶತಕದ ಜೊತೆಯಾಟದೊಂದಿಗೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅತ್ಯುತ್ತಮವಾಗಿ ರನ್​ ಕಲೆ ಹಾಕಿದ ಈ ಜೋಡಿ ಕೆಲ ಆಕರ್ಷಕ ಹೊಡೆತಗಳೊಂದಿಗೆ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು.

ಆದರೆ ತಂಡದ ಮೊತ್ತ 138 ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೆಹಮತ್ ಶಾ ಗೇಲ್​ಗೆ ಕ್ಯಾಚ್​ ನೀಡಿದರು. 78 ಎಸೆತಗಳನ್ನು ಎದುರಿಸಿ ಶಾ 10 ಭರ್ಜರಿ ಬೌಂಡರಿಗಳನ್ನು ಒಳಗೊಂಡ 62 ರನ್​ಗಳಿಸಿ ವಿಶ್ವಕಪ್ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಇನ್ನೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ  ಇಕ್ರಂ ಅಲಿ ಖಾನ್ 8 ಬೌಂಡರಿಗಳೊಂದಿಗೆ 86 ರನ್​ ಬಾರಿಸಿದರು. ಈ ವೇಳೆ ಗೇಲ್​ ಎಸೆತವನ್ನು ಗುರುತಿಸುವಲ್ಲಿ ಎಡವಿ ಎಲ್​ಬಿಡಬ್ಲ್ಯೂಗೆ 18 ರ ಹರೆಯದ ಇಕ್ರಂ ಔಟಾದರು. ಇನ್ನು ಇಕ್ರಂ ಬೆನ್ನಲ್ಲೇ ನಜೀಬುಲ್ಲಾ(31) ರನೌಟ್​ಗೆ ಬಲಿಯಾದರೆ, ನಂತರ ಬಂದ ಮೊಹಮ್ಮದ್ ನಬಿ (2)  ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.

ಇತ್ತೀಚಿನ ವರದಿ ಬಂದಾಗ ಅಫ್ಘಾನ್ 41.4 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 227 ರನ್​ಗಳಿಸಿದೆ.

ಇದಕ್ಕೂ ಮುನ್ನ ಟಾಸ್​ ಗೆದ್ದ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರದಂತೆ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಹಾಗೂ ಲೆವಿಸ್ ಜೋಡಿಯನ್ನು ಬೇರ್ಪಡಿಸಲು ಅಫ್ಘಾನ್ ಬೌಲರುಗಳು ಯಶಸ್ವಿಯಾದರು. 5ನೇ ಓವರ್​ನಲ್ಲಿ ದಾಳಿಗಿಳಿದ ಜರ್ದಾನ್, ಗೇಲ್​ರನ್ನು ಔಟ್ ಮಾಡುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ ಲೆವಿಸ್ ಹಾಗೂ ಹೋಪ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅಂತೆಯೇ ನಿಧಾನಗತಿಯಲ್ಲಿ ರನ್​ ಪೇರಿಸಿದ ಈ ಜೋಡಿ ವಿಂಡೀಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.ಈ ವೇಳೆ ಅರ್ಧಶತಕ ಪೂರೈಸಿದ ಲೆವಿಸ್ (58) ರಶೀದ್ ಖಾನ್ ಎಸೆತದಲ್ಲಿ ನಬಿಗೆ ಕ್ಯಾಚ್​ ನೀಡಿ ಹೊರ ನಡೆದರು. 2ನೇ ವಿಕೆಟ್ ಪತನ ಬಳಿಕ ಕ್ರೀಸ್​ಗೆ ಆಗಮಿಸಿದ ಶಿಮ್ರೋನ್ ಹೆಟ್ಮೆಯರ್ ಹೋಪ್​ಗೆ ಸಾಥ್ ನೀಡಿದರು. ಪರಿಣಾಮ ಕಲಾತ್ಮಕ ಆಟದೊಂದಿಗೆ ಎವಿನ್ ಹೋಪ್ ತಮ್ಮ ಹಾಫ್ ಸೆಂಚುರಿ ಪೂರೈಸಿದರು.

ಭರ್ಜರಿ ಇನಿಂಗ್ಸ್​ ಕಟ್ಟುವ ನಿರೀಕ್ಷೆಯಲ್ಲಿದ್ದ  ಹೆಟ್ಮೆಯರ್ 37 ರನ್​ಗಳಿಸಿ ಔಟಾದರೆ, ವೈಯುಕ್ತಿಕ ಮೊತ್ತ 77 ಆಗಿದ್ದಾಗ ನಬಿ ಎಸೆತವನ್ನು ಸಿಕ್ಸರ್​ಗಟ್ಟಲು ಹೋಗಿ ಹೋಪ್ ಸಹ ಹೊರ ನಡೆದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಜೇಸನ್ ಹೋಲ್ಡರ್ ಹಾಗೂ ಪೂರನ್ ಅಫ್ಘಾನ್ ಬೌಲರುಗಳ ಬೆಂಡತ್ತಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿದ ಯುವ ಆಟಗಾರ ಪೂರನ್ 43 ಎಸೆತಗಳಲ್ಲಿ 58 ರನ್ ಬಾರಿಸಿದರು. ಇದೇ ವೇಳೆ ನಾಯಕನ ಜವಾಬ್ದಾರಿಗೆ ತಕ್ಕಂತೆ ಬ್ಯಾಟ್ ಬೀಸಿದ ಭರ್ಜರಿ 4 ಸಿಕ್ಸರ್​ಗಳನ್ನು ಸಿಡಿಸಿ 34 ಎಸೆತಗಳಲ್ಲಿ 45 ರನ್ ಗಳಿಸಿದರು. 49 ಓವರ್​ವರೆಗೂ ವಿಕೆಟ್ ಬಿಟ್ಟುಕೊಡದ ಈ ಜೋಡಿ ರನ್​ಗಳಿಕೆಯನ್ನು ಹೆಚ್ಚಿಸಿದರು. ಆದರೆ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಪೂರನ್​ ರನೌಟ್​ಗೆ ಬಲಿಯಾದರೆ, ನಂತರದ ಎಸೆತದಲ್ಲೇ ಹೋಲ್ಡರ್ ಕೂಡ ಕ್ಯಾಚ್​ ನೀಡಿ ನಿರ್ಗಮಿಸಿದರು.

ಅಂತಿಮ ನಾಲ್ಕು ಎಸೆತಗಳಲ್ಲಿ 14 ರನ್ ಬಾರಿಸಿದ ಬ್ರಾಥ್​ವೇಟ್ ಕೊನೆಗೂ ವಿಂಡೀಸ್ ಮೊತ್ತವನ್ನು 300ರ ಗಡಿದಾಟುವಂತೆ ನೋಡಿಕೊಂಡರು. ಅಂತೆಯೇ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ವೆಸ್ಟ್​ ಇಂಡೀಸ್ 311 ರನ್​ಗೆ ತಮ್ಮ ಇನಿಂಗ್ಸ್ ಕೊನೆಗೊಳಿಸಿತು. ಇನ್ನು ಅಫ್ಘಾನ್ ಪರ ಜರ್ದಾನ್ 2 ವಿಕೆಟ್ ಕಬಳಿಸಿ ಮಿಂಚಿದರೆ, ರಶೀದ್ ಖಾನ್ 1 ವಿಕೆಟ್ ಕಿತ್ತು ಗಮನ ಸೆಳೆದರು.

First published: July 4, 2019, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading