Afghanistan Vs West Indies: ಹೆಟ್ಮೆಯರ್ ಆಕರ್ಷಕ ಅರ್ಧಶತಕ: ಅಫ್ಘಾನ್​ಗೆ ಕಠಿಣ ಗುರಿಯಿತ್ತ ಕೆರಿಬಿಯನ್ ಪಡೆ

Afghanistan Vs West Indies: ರಶೀದ್ ಖಾನ್, ಮೊಹಮ್ಮದ್ ನಬಿಯಂತಹ ಆಟಗಾರರಿದ್ದರೂ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ನೀಡದೇ ನಿರಾಸೆ ಮೂಡಿಸಿದೆ.

zahir | news18
Updated:July 4, 2019, 7:10 PM IST
Afghanistan Vs West Indies: ಹೆಟ್ಮೆಯರ್ ಆಕರ್ಷಕ ಅರ್ಧಶತಕ: ಅಫ್ಘಾನ್​ಗೆ ಕಠಿಣ ಗುರಿಯಿತ್ತ ಕೆರಿಬಿಯನ್ ಪಡೆ
.
  • News18
  • Last Updated: July 4, 2019, 7:10 PM IST
  • Share this:
ವಿಶ್ವಕಪ್​ನಲ್ಲಿ ನಡೆದ 42 ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ವೆಸ್ಟ್​ ಇಂಡೀಸ್ 311 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಇದಕ್ಕೂ ಮುನ್ನ ಟಾಸ್​ ಗೆದ್ದ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ನಾಯಕನ ನಿರ್ಧಾರದಂತೆ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಹಾಗೂ ಲೆವಿಸ್ ಜೋಡಿಯನ್ನು ಬೇರ್ಪಡಿಸಲು ಅಫ್ಘಾನ್ ಬೌಲರುಗಳು ಯಶಸ್ವಿಯಾದರು. 5ನೇ ಓವರ್​ನಲ್ಲಿ ದಾಳಿಗಿಳಿದ ಜರ್ದಾನ್, ಗೇಲ್​ರನ್ನು ಔಟ್ ಮಾಡುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ ಲೆವಿಸ್ ಹಾಗೂ ಹೋಪ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅಂತೆಯೇ ನಿಧಾನಗತಿಯಲ್ಲಿ ರನ್​ ಪೇರಿಸಿದ ಈ ಜೋಡಿ ವಿಂಡೀಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ವೇಳೆ ಅರ್ಧಶತಕ ಪೂರೈಸಿದ ಲೆವಿಸ್ (58) ರಶೀದ್ ಖಾನ್ ಎಸೆತದಲ್ಲಿ ನಬಿಗೆ ಕ್ಯಾಚ್​ ನೀಡಿ ಹೊರ ನಡೆದರು. 2ನೇ ವಿಕೆಟ್ ಪತನ ಬಳಿಕ ಕ್ರೀಸ್​ಗೆ ಆಗಮಿಸಿದ ಶಿಮ್ರೋನ್ ಹೆಟ್ಮೆಯರ್ ಹೋಪ್​ಗೆ ಸಾಥ್ ನೀಡಿದರು. ಪರಿಣಾಮ ಕಲಾತ್ಮಕ ಆಟದೊಂದಿಗೆ ಎವಿನ್ ಹೋಪ್ ತಮ್ಮ ಹಾಫ್ ಸೆಂಚುರಿ ಪೂರೈಸಿದರು.

ಭರ್ಜರಿ ಇನಿಂಗ್ಸ್​ ಕಟ್ಟುವ ನಿರೀಕ್ಷೆಯಲ್ಲಿದ್ದ  ಹೆಟ್ಮೆಯರ್ 37 ರನ್​ಗಳಿಸಿ ಔಟಾದರೆ, ವೈಯುಕ್ತಿಕ ಮೊತ್ತ 77 ಆಗಿದ್ದಾಗ ನಬಿ ಎಸೆತವನ್ನು ಸಿಕ್ಸರ್​ಗಟ್ಟಲು ಹೋಗಿ ಹೋಪ್ ಸಹ ಹೊರ ನಡೆದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಜೇಸನ್ ಹೋಲ್ಡರ್ ಹಾಗೂ ಪೂರನ್ ಅಫ್ಘಾನ್ ಬೌಲರುಗಳ ಬೆಂಡತ್ತಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿದ ಯುವ ಆಟಗಾರ ಪೂರನ್ 43 ಎಸೆತಗಳಲ್ಲಿ 58 ರನ್ ಬಾರಿಸಿದರು. ಇದೇ ವೇಳೆ ನಾಯಕನ ಜವಾಬ್ದಾರಿಗೆ ತಕ್ಕಂತೆ ಬ್ಯಾಟ್ ಬೀಸಿದ ಭರ್ಜರಿ 4 ಸಿಕ್ಸರ್​ಗಳನ್ನು ಸಿಡಿಸಿ 34 ಎಸೆತಗಳಲ್ಲಿ 45 ರನ್ ಗಳಿಸಿದರು. 49 ಓವರ್​ವರೆಗೂ ವಿಕೆಟ್ ಬಿಟ್ಟುಕೊಡದ ಈ ಜೋಡಿ ರನ್​ಗಳಿಕೆಯನ್ನು ಹೆಚ್ಚಿಸಿದರು. ಆದರೆ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಪೂರನ್​ ರನೌಟ್​ಗೆ ಬಲಿಯಾದರೆ, ನಂತರದ ಎಸೆತದಲ್ಲೇ ಹೋಲ್ಡರ್ ಕೂಡ ಕ್ಯಾಚ್​ ನೀಡಿ ನಿರ್ಗಮಿಸಿದರು.

ಅಂತಿಮ ನಾಲ್ಕು ಎಸೆತಗಳಲ್ಲಿ 14 ರನ್ ಬಾರಿಸಿದ ಬ್ರಾಥ್​ವೇಟ್ ಕೊನೆಗೂ ವಿಂಡೀಸ್ ಮೊತ್ತವನ್ನು 300ರ ಗಡಿದಾಟುವಂತೆ ನೋಡಿಕೊಂಡರು. ಅಂತೆಯೇ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ವೆಸ್ಟ್​ ಇಂಡೀಸ್ 311 ರನ್​ಗೆ ತಮ್ಮ ಇನಿಂಗ್ಸ್ ಕೊನೆಗೊಳಿಸಿತು. ಇನ್ನು ಅಫ್ಘಾನ್ ಪರ ಜರ್ದಾನ್ 2 ವಿಕೆಟ್ ಕಬಳಿಸಿ ಮಿಂಚಿದರೆ, ರಶೀದ್ ಖಾನ್ 1 ವಿಕೆಟ್ ಕಿತ್ತು ಗಮನ ಸೆಳೆದರು.
First published: July 4, 2019, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading