Cricket World Cup 2019, AFG vs SL: 187 ಟಾರ್ಗೆಟ್; ಸೋಲಿನ ಭೀತಿಯಲ್ಲಿ ಅಫ್ಘಾನಿಸ್ತಾನ

ICC Cricket World Cup 2019: ಸೋಲಿನ ಮೂಲಕ ವಿಶ್ವಕಪ್​ ಅಭಿಯಾನ ಆರಂಭಿಸಿದ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

Vinay Bhat | news18
Updated:June 4, 2019, 10:18 PM IST
Cricket World Cup 2019, AFG vs SL: 187 ಟಾರ್ಗೆಟ್; ಸೋಲಿನ ಭೀತಿಯಲ್ಲಿ ಅಫ್ಘಾನಿಸ್ತಾನ
ಶ್ರೀಲಂಕಾ ತಂಡ
  • News18
  • Last Updated: June 4, 2019, 10:18 PM IST
  • Share this:
ಬೆಂಗಳೂರು (ಜೂ. 04): ಕಾರ್ಡಿಫ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಏಳನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಸೋಲಿನ ಸುಳಿಗೆ ಸಿಲುಕಿದೆ.

ಶ್ರೀಲಂಕಾ ತಂಡ 201 ರನ್​ಗೆ ಆಲೌಟ್ ಆಗಿದ್ದು, ಮಳೆಯ ಕಾರಣ ಡಕ್ವರ್ತ್​​​ ನಿಯಮದ ಪ್ರಕಾರ ಅಫ್ಘಾನಿಸ್ತಾನ ತಂಡಕ್ಕೆ 41 ಓವರ್ ಅನ್ನು ನಿಗದಿ ಪಡಿಸಲಾಗಿದೆ, 187 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಈ ಗುರಿ ಬೆನ್ನಟ್ಟಿರು ಅಫ್ಘಾನ್ನರು 100 ರನ್​​ಗೂ ಮುನ್ನವೇ ಪ್ರುಮುಖ 5 ವಿಕೆಟ್ ಕಳೆದುಕೊಂಡಿದೆ. ಓಪನರ್​ಗಳಾದ ಮೊಹಮ್ಮದ್ ಶಹ್ಜಾದ್ ಕೇವಲ 7 ರನ್​ಗೆ ಔಟ್ ಆದರೆ, ಹಜ್ರತುಲ್ಲ ಹೋರಾಟ 30 ರನ್​ಗೆ ನಿಂತಿತು. ರೆಹ್ಮಾತ್ ಶಾ(2), ಹಶ್ಮತುಲ್ಲ(4) ಹಾಗೂ ಮೊಹಮ್ಮದ್ ನಬಿ(11) ಬಂದ ಬೆನ್ನಲ್ಲೆ ಪೆವಿಲಿಯನ್ ಹಾದಿ ಹಿಡಿದರು. ಸದ್ಯ ನಾಯಕ ಗುಲ್ಬನ್ ನಬಿ ಹಾಗೂ ನಜಿಬುಲ್ಲ ಕ್ರೀಸ್​ನಲ್ಲಿದ್ದು ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದಾರೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಗುಲ್ಬದಿನ್ ನೈಬ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ಓಪನರ್​ಗಳಾದ ನಾಯಕ ದಿಮಿತ್ ಕರುಣರತ್ನೆ ಹಾಗೂ ಕುಸಲ್ ಪೆರೇರಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.

ಕಳೆದ ಪಂದ್ಯದಂತೆ ಬಿರುಸಿನ ಆಟಕ್ಕೆ ಮೊರೆಹೋಗದ ಈ ಜೋಡಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಮೊದಲ ಇವರ ಖಾತೆಯಿಂದ 92 ರನ್​ಗಳ ಕಾಣಿಕೆ ಮೂಡಿಬಂತು. ಚೆನ್ನಾಗಿಯೆ ಆಡುತ್ತಿದ್ದ ನಾಯಕ ಕರುಣರತ್ನೆ 30 ರನ್ ಗಳಿಸಿರುವಾಗ ಕೆಟ್ಟ ಹೊಡೆತಕ್ಕೆ ಮಾರುಹೋಗಿ ಮೊಹಮ್ಮದ್ ನಬಿ ಬೌಲಿಂಗ್​ನಲ್ಲಿ ಔಟ್ ಆದರು.

ನಾಯಕನ ನಿರ್ಗಮನದ ಬೆನ್ನಲ್ಲೆ ಸ್ವಲ್ಪ ಸಮಯ ಬ್ಯಾಟ್ ಬೀಸಿದ ಲಹಿರು ತಿರುಮನೆ 25 ರನ್​ಗೆ​ ಬೌಲ್ಡ್​ ಆದರೆ, ಬಂದ ಬೆನ್ನಲ್ಲೆ ಕುಸಲ್ ಮೆಂಡಿಸ್(2), ಆ್ಯಂಜಲೊ ಮ್ಯಾಥ್ಯುಸ್(0) ಹಾಗೂ ಧನಂಜಯ್ ಡಿ ಸಿಲ್ವಾ(0) ಪೆವಿಲಿಯನ್ ಹಾದಿ ಹಿಡಿದರು. ತಂಡಕ್ಕೆ ಆಸರೆಯಾಗ ಭೇಕಿದ್ದ ತಿಸಾರ ಪೆರೇರ ಕೂಡ ರನೌಟ್​ಗೆ ಬಲಿಯಾದರೆ, ಇಸ್ರು ಉದಾನ 10 ರನ್​​ಗೆ ಬ್ಯಾಟ್ ಕೆಳಗಿಟ್ಟರು.

ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಲಂಕಾಕ್ಕೆ ಅರ್ಧಶತಕ ಗಳಿಸಿ ಕುಸಲ್ ಪೆರೇರ  ಆಸರೆಯಾಗಿದ್ದರು. ಆದರೆ 78 ರನ್ ಗಳಿಸಿ ಪೆರೇರಾ ಕೂಡ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು. ಇದೇ ಸಂದರ್ಭ ಜೋರಾಗಿ ಮಳೆ ಸುರಿದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಈ ಸಂದರ್ಭ ಲಂಕಾದ ಸ್ಕೋರ್ 33 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು.ಮಳೆ ನಿತ್ತ ನಂತರ ಮತ್ತೆ ಬ್ಯಾಟಿಂಗ್​​ಗೆ ಇಳಿದ ಲಂಕಾನ್ನರು 19 ರನ್​ಗಳಿಸಿ ಆಲೌಟ್ ಆಯಿತು.  36.5 ಓವರ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತಷ್ಟೆ. ಅಫ್ಘಾನ್ ಪರ ಮೊಹಮ್ಮದ್ ನಬಿ 4 ವಿಕೆಟ್ ಕಿತ್ತು ಮಿಂಚಿದರೆ, ದವ್ಲತ್ ಜರ್ದನ್ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.

ಮಳೆ ಬಂದ ಕಾರಣ ಡಕ್ವರ್ತ್​​ ನಿಯಮದ ಪ್ರಕಾರ ಅಫ್ಘಾನಿಸ್ತಾನಕ್ಕೆ 41 ಓವರ್ ಅನ್ನು ನಿಗದಿ ಪಡಿಸಲಾಗಿದ್ದು, 187 ರನ್​ಗಳ ಟಾರ್ಗೆಟ್ ನೀಡಲಾಗಿದೆ.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ನಾಯಕ), ಕುಸಾಲ್ ಪೆರೇರಾ, ಲಹಿರು ತಿರುಮನೆ, ಕುಸಲ್ ಮೆಂಡಿಸ್, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ತಿಸಾರ ಪರೇರಾ, ಸುರಂಗ ಲಕ್ಮಲ್, ನುವನ್ ಪ್ರದೀಪ್, ಇಸ್ರು ಉದನಾ, ಲಸಿತ್ ಮಲಿಂಗಾ.

ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ಶಹ್ಜಾದ್, ಹಜ್ರತುಲ್ಲ ಜಜಾಯ್, ರೆಹ್ಮತ್ ಷಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್ (ನಾಯಕ), ನಜಿಬುಲ್ಲ ಜರ್ದನ್, ರಶೀದ್ ಖಾನ್, ದವ್ಲತ್ ಜರ್ದನ್, ಮುಜೀಬ್ ಉರ್ ರೆಹ್ಮಾನ್, ಹಮೀದ್ ಹಸ್ಸನ್.
First published:June 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ