ಅಫ್ಘಾನ್ ಆಟಗಾರರ ಭರ್ಜರಿ ಆಟ; ಬಾಂಗ್ಲಾ ಹುಲಿಗಳಿಗೂ ಮಣ್ಣು ಮುಕ್ಕಿಸಿದ ಕ್ರಿಕೆಟ್ ಶಿಶುಗಳು

25 ರನ್​ಗಳ ಗೆಲುವಿನೊಂದಿಗೆ ಅಫ್ಘಾನಿಸ್ತಾನ 8 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ 4 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

Vinay Bhat | news18-kannada
Updated:September 15, 2019, 10:39 PM IST
ಅಫ್ಘಾನ್ ಆಟಗಾರರ ಭರ್ಜರಿ ಆಟ; ಬಾಂಗ್ಲಾ ಹುಲಿಗಳಿಗೂ ಮಣ್ಣು ಮುಕ್ಕಿಸಿದ ಕ್ರಿಕೆಟ್ ಶಿಶುಗಳು
ಮೊಹಮ್ಮದ್ ನಬಿ ಬ್ಯಾಟಿಂಗ್ ವೈಖರಿ
  • Share this:
ಬೆಂಗಳೂರು (ಸೆ. 15): ಬಾಂಗ್ಲಾದೇಶದಲ್ಲಿ ಸಾಗುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ನಿನ್ನೆಯಷ್ಟೆ ಜಿಂಬಾಬ್ಭೆ ವಿರುದ್ಧ ಗೆದ್ದು ಬೀಗಿದ್ದ ಕ್ರಿಕೆಟ್ ಶಿಶುಗಳು ಇಂದು ಬಾಂಗ್ಲಾ ಹುಲಿಗಳಿಗೆ ಮಣ್ಣು ಮುಕ್ಕಿಸಿ 25 ರನ್​ಗಳಿಂದ ಜಯ ಸಾಧಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 40 ರನ್ ಆಗುವ ಹೊತ್ತಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ಅಸ್ಗರ್ ಅಫ್ಘನ್ ಹಾಗೂ ಮೊಹಮ್ಮದ್ ನಬಿ ಭರ್ಜರಿ ಆಟ ಪ್ರದರ್ಶಿಸಿದರು.

ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರಿಬ್ಬರು ತಂಡದ ಮೊತ್ತವನ್ನು ಏರಿಸಿದರು. ಈ ಜೋಡಿ 5 ವಿಕೆಟ್​ಗೆ 79 ರನ್​ಗಳ ಕಾಣಿಕೆ ನೀಡಿದರು. ಅಸ್ಗರ್ 37 ಎಸೆತಗಳಲ್ಲಿ 40 ರನ್ ಬಾರಿಸಿ ಔಟ್ ಆದರು. ಅಂತಿಮ ಹಂತದಲ್ಲಿ ಸಿಡಿದ ನಬಿ ಬೌಂಡರಿ, ಸಿಕ್ಸರ್​​​ಗಳ ಮಳೆ ಸುರಿಸಿದರು.

ಪರಿಣಾಮ ಅಫ್ಘಾನ್ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿತು. ನಬಿ 54 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಅಮೋಘ ಸಿಕ್ಸ್​ನೊಂದಿಗೆ ಅಜೇಯ 84 ರನ್ ಸಿಡಿಸಿದರು. ಬಾಂಗ್ಲಾ ಪರ ಮೊಹಮ್ಮದ್ ಶೈಫುದ್ದಿನ್ 4 ವಿಕೆಟ್ ಕಿತ್ತರು.

Ashes 2019: ರೋಚಕ ಘಟ್ಟದತ್ತ ಆ್ಯಶಸ್ ಟೆಸ್ಟ್​ ಸರಣಿ; ಗೆಲುವಿಗಾಗಿ ಆಸೀಸ್-ಆಂಗ್ಲರ ಹೋರಾಟ!

 165 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಪರ ಮೊಹಮ್ಮದುಲ್ಲ ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ ಮಿಂಚಲಿಲ್ಲ. 39 ಎಸೆತಗಳಲ್ಲಿ 44 ರನ್ ಮೊಹಮ್ಮದುಲ್ಲ ಬಾರಿಸಿದರು. ಬಳಿಕ ಸಬೀರ್ ರೆಹ್ಮಾನ್ 24 ರನ್ ಗಳಿಸಿದ್ದೆ ಹೆಚ್ಚು.

ಅಂತಿಮವಾಗಿ ಬಾಂಗ್ಲಾ 19.5 ಓವರ್​ನಲ್ಲಿ 139 ರನ್​ಗೆ ಸರ್ವಪತನ ಕಂಡಿತು. ಅಫ್ಘಾನ್ ಪರ ಮುಜೀದ್ ಉರ್ ರೆಹ್ಮಾನ್ 4 ವಿಕೆಟ್, ಫರೀದ್ ಮಲಿಕ್, ರಶೀದ್ ಖಾನ್ ಹಾಗೂ ಗುಲ್ಬದಿನ್ ನಬಿ ತಲಾ 2 ವಿಕೆಟ್ ಪಡೆದರು.

25 ರನ್​ಗಳ ಗೆಲುವಿನೊಂದಿಗೆ ಅಫ್ಘಾನಿಸ್ತಾನ 8 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ 4 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

First published: September 15, 2019, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading