Cricket World Cup 2019, AFG vs AUS: ಆಸೀಸ್​ಗೆ 208 ರನ್​ಗಳ ಟಾರ್ಗೆಟ್ ನೀಡಿದ ಅಫ್ಘಾನ್

ICC Cricket World Cup 2019: 209 ರನ್​ಗಳ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ಬೊಂಬಾಟ್ ಆಟ ಪ್ರದರ್ಶಿಸಿದ್ದು, ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬ್ಯಾಟ್ ಬೀಸುತ್ತಿದ್ದಾರೆ.

Vinay Bhat | news18
Updated:June 1, 2019, 10:15 PM IST
Cricket World Cup 2019, AFG vs AUS: ಆಸೀಸ್​ಗೆ 208 ರನ್​ಗಳ ಟಾರ್ಗೆಟ್ ನೀಡಿದ ಅಫ್ಘಾನ್
ಆಸ್ಟ್ರೇಲಿಯಾ ಆಟಗಾರರು
  • News18
  • Last Updated: June 1, 2019, 10:15 PM IST
  • Share this:
ಬೆಂಗಳೂರು (ಜೂ. 01): ಬ್ರಿಸ್ಟಾಲ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ನ ಇಂದಿನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಕಾಂಗರೂಗಳಿಗೆ ಗೆಲ್ಲಲು 208 ರನ್​ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದ್ದು, ಈಗಾಗಲೇ ಫಿಂಚ್ ಪಡೆ ಭರ್ಜರಿ ಆರಂಭ ಪಡೆದಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್ ನಾಯಕನ ತೀರ್ಮಾನವನ್ನು ಆರಂಭದಲ್ಲೇ ಬ್ಯಾಟ್ಸ್​ಮನ್​ಗಳು ತಲೆಕೆಳಗಾಗಿಸಿದರು. ಓಪನರ್​ಗಳಾದ ಮೊಹಮ್ಮದ್ ಶಹ್ಜಾದ್ ಹಾಗೂ ಹಜ್ರತುಲ್ಲಾ ಜಜಾಯ್ ಶೂನ್ಯಕ್ಕೆ ನಿರ್ಗಮಿಸಿದರು. ರೆಹ್ಮತುಲ್ಲಾ(43) ಒಂದು ಕಡೆ ಉತ್ತಮ ರನ್ ಕಲೆಹಾಕಿದರೆ, ಇತ್ತ ಶಾಹಿದಿ(18) ಹಾಗೂ ಮೊಹಮ್ಮದ್ ನಬಿ(7) ಸಾತ್ ನೀಡದೆ ಬೇಗನೆ ಔಟ್ ಆಗಿ ಆಘಾತ ನೀಡಿದರು.

ಈ ಸಂದರ್ಭ ತಂಡಕ್ಕೆ ಆಸರೆಯಾದ ನಾಯಕ ಗುಲ್ಬದಿನ್ ನೈಬ್ ಹಾಗೂ ನಜಿಬುಲ್ಲ ಜರ್ದನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕುಸಿದ ತಂಡವನ್ನು ಮೇಲಕ್ಕೆತ್ತು ಪ್ರಯತ್ನ ನಡೆಸಿದರು. ಅದರಂತೆ ಈ ಜೋಡಿಯ ಖಾತೆಯಿಂದ 83 ರನ್​ಗಳ ಕಾಣಿಕೆ ಮೂಡಿಬಂತು. ಉತ್ತಮವಾಗಿ ಆಡುತ್ತಿದ್ದ ನೈಬ್ 31 ರನ್ ಗಳಿಸಿರುವಾಗ ಸ್ಟಾಯಿನಿಸ್ ಬೌಲಿಂಗ್​ನಲ್ಲಿ ಬಲಿಯಾದರು. ಇದರ ಬೆನ್ನಲ್ಲೆ ಅರ್ಧಶತಕ ಬಾರಿಸಿದ್ದ ನಜಿಬುಲ್ಲ ಕೂಡ ಬ್ಯಾಟ್ ಕೆಳಗಿಟ್ಟರು. ರಶೀದ್ 11 ಎಸೆತಗಳಲ್ಲಿ 27 ರನ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 38.2 ಓವರ್​ಗಳಲ್ಲಿ 207 ರನ್​ಗೆ ಆಲೌಟ್ ಆಯಿತು.

ಇದನ್ನೂ ಓದಿ: Cricket World Cup 2019, NZ vs SL: ನ್ಯೂಜಿಲೆಂಡ್​ಗೆ 10 ವಿಕೆಟ್​ಗಳ ಅಮೋಘ ಜಯ

ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್​ ಹಾಗೂ ಆ್ಯಡಂ ಜಂಪಾ ತಲಾ 3 ವಿಕೆಟ್ ಕಿತ್ತರೆ, ಸ್ಟಾಯಿನಿಸ್ 2 ಹಾಗೂ ಮಿಚೆಲ್ ಸ್ಟಾರ್ಕ್​ 1 ವಿಕೆಟ್ ಪಡೆದರು.

ಸದ್ಯ 209 ರನ್​ಗಳ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ಬೊಂಬಾಟ್ ಆಟ ಪ್ರದರ್ಶಿಸಿದ್ದು, ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬ್ಯಾಟ್ ಬೀಸುತ್ತಿದ್ದಾರೆ.
First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ