• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಸದ್ದು ಮಾಡುತ್ತಿದೆ ಅಂಡರ್-19 ವಿಶ್ವಕಪ್​ನಲ್ಲಾದ ಮಂಕಡ್ ರನೌಟ್; ಅಂಪೈರ್ ಏನಂದ್ರು ಗೊತ್ತಾ?

ಸದ್ದು ಮಾಡುತ್ತಿದೆ ಅಂಡರ್-19 ವಿಶ್ವಕಪ್​ನಲ್ಲಾದ ಮಂಕಡ್ ರನೌಟ್; ಅಂಪೈರ್ ಏನಂದ್ರು ಗೊತ್ತಾ?

ಮಂಕಡ್ ರನೌಟ್

ಮಂಕಡ್ ರನೌಟ್

ಈ ಗೆಲುವಿನಿಂದಿಗೆ ಪಾಕ್ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಸೆಮೀಸ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿ ಆಗಲಿದ್ದು, ಫೆಬ್ರವರಿ 4 ರಂದು ನಡೆಯಲಿದೆ.

  • Share this:

ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್​ ಅಂತಿಮ ಹಂತದತ್ತ ಸಾಗುತ್ತಿದೆ. ನಿನ್ನೆ 4ನೇ ಕ್ವಾರ್ಟರ್ ಫೈನಲ್​ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸೆಮಿ ಫೈನಲ್​ಗೆ ಪಾಕ್ ಲಗ್ಗೆಯಿಟ್ಟಿದ್ದು ಭಾರತ ವಿರುದ್ಧ ಸೆಣೆಸಾಡಲಿದೆ.


ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಣ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಭಾರೀ ಸದ್ದು ಮಾಡಿದ್ದು ಮಂಕಡ್ ರನೌಟ್.


ಮೊದಲು ಬ್ಯಾಟ್ ಮಾಡಿದ ಅಫ್ಘಾನ್ 49.1 ಓವರ್​ನಲ್ಲಿ ಕೇವಲ 189 ರನ್​ಗೆ ಆಲೌಟ್ ಆಯಿತು. ನಾಯಕ ಫರ್ಹನ್ ಝಕಿಲ್ 40 ರನ್ ಗಳಿಸಿದರೆ, ಅಬ್ದುಲ್ ರೆಹ್ಮಾನ್ 30 ರನ್ ಕಲೆಹಾಕಿದರು. ಪಾಕ್ ಪರ ಅಮೀರ್ ಖಾನ್ 3 ವಿಕೆಟ್ ಕಿತ್ತರು.


ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?


ಇತ್ತ 190 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತು. ಮೊಹಮ್ಮದ್ ಹುರೈರಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಕ್ರೀಸ್ ಕಚ್ಚಿ ಆಡುತ್ತಿದ್ದ ಹುರೈರಾ ಅವರನ್ನು ಪೆವಿಲಿಯನ್​ಗೆ ಅಟ್ಟಲು ಅಫ್ಘಾನ್ ಬೌಲರ್ ಮಂಕಡ್ ಅಸ್ತ್ರವನ್ನು ಉಪಯೋಗಿಸಿಕೊಂಡರು.NZ vs IND: ಸೂಪರ್ ಓವರ್​​ನಲ್ಲಿ ಕೊಹ್ಲಿಗೆ ಓಪನರ್ ಆಗಿ ಕಣಕ್ಕಿಳಿಯಲು ಹೇಳಿದ್ದು ಕನ್ನಡಿಗ; ಅಷ್ಟಕ್ಕು ಯಾಕೆ ಗೊತ್ತಾ?


28ನೇ ಓವರ್ ಬೌಲಿಂಗ್ ಮಾಡಲು ಬಂದ ನೂರ್ ಅಹ್ಮದ್ ತಮ್ಮ 4ನೇ ಎಸೆತದಲ್ಲಿ ಹುರೈರಾ ಅವರನ್ನು ಮಂಕಡ್ ಮಾಡಿದರು. ಈ ಸಂದರ್ಭ ಅಂಪೈರ್ ಒಂದು ಕ್ಷಣ ಯೋಚಿಸಿ ಬಳಿಕ ಥರ್ಡ್​ ಅಂಪೈರ್​ ನಿರ್ಧಾರದ ಮೊರೆ ಹೋದರು. ಮೂರನೇ ಅಂಪೈರ್ ಔಟ್ ಕೊಟ್ಟ ಪರಿಣಾಮ 76 ಎಸೆತಗಳಲ್ಲಿ 64 ರನ್ ಗಳಿಸಿದ್ದ ಮೊಹಮ್ಮದ್ ಹುರೈರಾ ನಿರ್ಗಮಿಸಬೇಕಾಯಿತು.


ಬಳಿಕ ಖಾಸಿಂ(25*) ಹಾಗೂ ಮೊಹಮ್ಮದ್ ಹ್ಯಾರಿಸ್(29*) ಎಚ್ಚರಿಕೆಯಿಂದ ಬ್ಯಾಟ್ ಬೀಸಿ ತಂಡಕ್ಕೆ ಗೆಲುವು ತಂದಿಟ್ಟರು. ಪಾಕಿಸ್ತಾನ 41.1 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿತು.IND vs NZ: ಬುಲೆಟ್ ವೇಗದಲ್ಲಿ ಕೊಹ್ಲಿ ಮಾಡಿದ ರನೌಟ್ ನೋಡಲು ಮಿಸ್ ಆಯ್ತಾ?; ಇಲ್ಲಿದೆ ನೋಡಿ ವಿಡಿಯೋ


ಈ ಗೆಲುವಿನಿಂದಿಗೆ ಪಾಕ್ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಸೆಮೀಸ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿ ಆಗಲಿದ್ದು, ಫೆಬ್ರವರಿ 4 ರಂದು ನಡೆಯಲಿದೆ.


Published by:Vinay Bhat
First published: