T20 World Cup 2020: ವರ್ಲ್ಡ್ ಕಪ್ ನಿಂದ ಹೊರ ಬೀಳುತ್ತಾ ಅಫ್ಘಾನಿಸ್ತಾನ್ ತಂಡ? ತಾಲಿಬಾನ್ ಧ್ವಜದಡಿಯಲ್ಲಿ ಆಡಲ್ವಾ?

ಒಂದು ವೇಳೆ ಅಫ್ಘಾನಿಸ್ತಾನ ತಂಡ ತಾಲಿಬಾನಿಗಳ ಧ್ವಜ ಪ್ರದರ್ಶಿಸಿ ಆಟಕ್ಕೆ ಮುಂದಾದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ.

ಅಫ್ಘಾನಿಸ್ತಾನ್​ ತಂಡ

ಅಫ್ಘಾನಿಸ್ತಾನ್​ ತಂಡ

  • Share this:
ಅಕ್ಟೋಬರ್ ನಲ್ಲಿ ನಡೆಯುವ ಟಿ-20 ವರ್ಲ್ಡ್ ಕಪ್ (T20 World Cup 2020)ನಿಂದ ಅಫ್ಘಾನಿಸ್ತಾನ ತಂಡ ಹೊರ ಬೀಳುತ್ತಾ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಅಥವಾ ಪ್ರಕಟನೆ ಹೊರ ಬೀಳದ ಕಾರಣ ಈ ವಿಷಯ ಸಸ್ಪೆನ್ಸ್ ಆಗಿಯೇ ಉಳಿದಿದೆ. ಸದ್ಯ ಅಫ್ಘಾನಿಸ್ತಾನ ತಾಲಿಬಾನಿಗಳ ವಶದಲ್ಲಿದೆ. ತಾಲಿಬಾನಿಗಳು ಇಡೀ  ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನದ ಕ್ರಿಕೆಟ್ ಬೋರ್ಡ್ (Afghanistan Cricket Board) ಸದಸ್ಯರನ್ನು ತೆಗೆದುಹಾಕಿದೆ. ಜೊತೆಗೆ ಮಹಿಳಾ ಕ್ರಿಕೆಟ್ ಮೇಲೆ ನಿಷೇಧ ಹೇರಿದೆ

ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ನ ಕಾರ್ಯಕಾರಿ ನಿರ್ದೇಶಕ ಹಮಿದ್ ಶಿನ್ವಾನಿ ಜಾಗಕ್ಕೆ ನಸಿಬುಲ್ಲಾಹ ಹಕ್ಕನಿಯನ್ನು ತರಲಾಗಿದೆ. ಒಂದು ವೇಳೆ ಅಫ್ಘಾನಿಸ್ತಾನ ತಂಡ ತಾಲಿಬಾನಿಗಳ ಧ್ವಜ ಪ್ರದರ್ಶಿಸಿ ಆಟಕ್ಕೆ ಮುಂದಾದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ.

ಟಿ20 ವರ್ಲ್ಡ್ ಕಪ್ ನಲ್ಲಿ ಅಫ್ಘಾನಿಸ್ತಾನ ಆಡುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಯಾವುದೇ ನಿರ್ಧಾರಗಳಾಗಿಲ್ಲ. ಅವಸರದಲ್ಲಿ ಮಂಡಳಿ ಸಹ ಯಾವುದೇ ತೀರ್ಮಾನ ಮಾಡಲ್ಲ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾಮಾನ್ಯವಾಗಿ ಐಸಿಸಿ ಯಾವುದೇ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡಿದ್ರೆ, ಅದು ಆ ಟೀಂನ ಆಟಗಾರರ ಮೇಲೆ ಪರಿಣಾಮ ಬೀರಲ್ಲ. ಇದರಲ್ಲಿ ಆಟಗಾರರದ್ದು ಯಾವುದೇ ತಪ್ಪಿರಲ್ಲ ಎಂದು ಐಸಿಸಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಐಸಿಸಿ ನಿಯಮ ಏನು ಹೇಳುತ್ತೆ?

ಐಸಿಸಿ (International Cricket Council) ​ನಿಯಮಗಳ ಪ್ರಕಾರ, ಆಟಗಾರರು ಯಾವ ಬಾವುಟದ ಅಡಿಯಲ್ಲಿ ಆಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಆಟಗಾರರು ತಾಲಿಬಾನಿಗಳ ಧ್ವಜದಡಿಯಲ್ಲಿಯೇ ಆಡಲು ಇಚ್ಛಿಸಿದ್ರೆ ಬೇರೆ ದೇಶಗಳಿಂದ ವಿರೋಧ ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಮಾತ್ರ ತಾಲಿಬಾನಿಗಳನ್ನು ಒಪ್ಪಿಕೊಳ್ಳಬಹುದು. ಹಾಗಾಗಿ ಐಸಿಸಿ ಅಫ್ಘಾನಿಸ್ತಾನದ ಮೇಲೆ ನಿರ್ಬಂಧ ಹೇರಬಹುದು ಅಥವಾ 8 ಕ್ರಿಕೆಟ್ ರಾಷ್ಟ್ರಗಳ ಪಟ್ಟಿಯಿಂದಲೂ ಕೈ ಬಿಡಬಹುದು.

ಇದನ್ನೂ ಓದಿ: IPL 2021| ಐಪಿಎಲ್​ನಲ್ಲಿ ಆಡುತ್ತಿರುವ ಕರ್ನಾಟಕದ ಕ್ರಿಕೆಟರ್​ಗಳ ಬಗ್ಗೆ ತಿಳಿದುಕೊಳ್ಳಿ!

ಟಿ-20 ವರ್ಲ್ಡ್ ಕಪ್ ಅಕ್ಟೋಬರ್ 17ರಿಂದ ಯುಎಇ ಮತ್ತು ಒಮನ್ ನಲ್ಲಿ ಆರಂಭವಾಗಲಿವೆ. ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ. ಈ ಬಾರಿಯ ಪಂದ್ಯಗಳು ಭಾರತದಲ್ಲಿಯೇ ನಡೆಯಬೇಕಿತ್ತು. ಆದ್ರೆ ಕೊರೊನಾ ಹಿನ್ನೆಲೆ ಸ್ಥಳದ ಬದಲಾವಣೆಯಾಗಿದೆ. ಆದ್ರೆ ಯುಎಇ ಮತ್ತು ಒಮನ್ ನಲ್ಲಿ ನಡೆಯುವ ಪಂದ್ಯಗಳು ಬಿಸಿಸಿಐ ಬ್ಯಾನರ್ ಅಡಿಯಲ್ಲಿಯೇ ನಡೆಯಲಿವೆ. ಅಫ್ಘಾನಿಸ್ತಾನ, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಸೌಥ್ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು 8 ರಾಷ್ಟ್ರಗಳ ಪಟ್ಟಿಯಲ್ಲಿವೆ. ಅಫ್ಘಾನಿಸ್ತಾನ ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಜೊತೆ ಆಡಲಿದೆ.

ಐಸಿಸಿ ನಿಯಮ ಉಲ್ಲಂಘಿಸಿದ ತಾಲಿಬಾನ್:

ಮಹಿಳಾ ಕ್ರಿಕೆಟ್ ಮೇಲೆ ನಿರ್ಬಂಧ ಹೇರುವ ಮೂಲಕ ತಾಲಿಬಾನಿಗಳು ಐಸಿಸಿಯ ನಿಯಮ ಉಲ್ಲಂಘಿಸಿದ್ದಾರೆ. ಐಸಿಸಿ ನಿಯಮದ ಪ್ರಕಾರ ಸದಸ್ಯ ರಾಷ್ಟ್ರಗಳು ಪುರುಷ ಮತ್ತು ಮಹಿಳಾ ತಂಡವನ್ನು ಹೊಂದಿರಬೇಕು. ತಾಲಿಬಾನಿಗಳು ಮಹಿಳಾ ಕ್ರಿಕೆಟ್ ತಂಡದ ಮೇಲೆ ನಿಷೇಧ ಹೇರಿದ್ದರಿಂದ ಇನ್ನುಳಿದ ದೇಶಗಳು ಅಫ್ಘಾನಿಸ್ತಾನ ತಂಡವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸುತ್ತಿವೆ. ಈ ವರ್ಷ ಅಫ್ಘಾನಿಸ್ತಾನ ವಿರುದ್ಧ ನಡೆಯಬೇಕಿರುವ ಟೆಸ್ಟ್ ಸರಣಿಯನ್ನು ರದ್ದುಗೊಳಿಸುವ ಬಗ್ಗೆ ಆಸ್ಟ್ರೇಲಿಯಾ ಎಚ್ಚರಿಕೆ ನೀಡಿದೆ.

ವರದಿ: ಮೊಹ್ಮದ್​​ ರಫೀಕ್​ ಕೆ. 
Published by:Kavya V
First published: