ವಿಶ್ವಕ್ರಿಕೆಟ್ನಲ್ಲಿ ನಿಧಾನವಾಗಿ ಕಾಲೂರುತ್ತಿರುವ ಅಫ್ಘಾನಿಸ್ತಾನ ತಂಡದಲ್ಲಿ ಫಿಕ್ಸಿಂಗ್ ವ್ಯೂಹಕ್ಕೆ ಆಟಗಾರನೊಬ್ಬ ಬರೋಬ್ಬರಿ ಆರು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದಾನೆ. ಅಫ್ಘಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶಫೀಕುಲ್ಲಾ ಶಫಕ್ ಸದ್ಯ ಬ್ಯಾನ್ ಆಗಿರುವ ಆಟಗಾರ. 2018ರಲ್ಲಿ ನಡೆದ ಅಪ್ಘಾನಿಸ್ತಾನ ಪ್ರೀಮಿಯರ್ ಲೀಗ್(ಎಪಿಎಲ್)ನಲ್ಲಿ ಶಫಕ್ ಫಿಕ್ಸಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಎಪಿಎಲ್ನಲ್ಲಿ ಶಫಕ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವುದಲ್ಲದೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಸಹ ಆಟಗಾರನನ್ನು ಫಿಕ್ಸಿಂಗ್ನಲ್ಲಿ ಶಾಮೀಲಾಗಲು ಪ್ರೇರೇಪಿಸಿದ್ದ ಎನ್ನುವ ವಿಚಾರ ತಿಳಿದು ಬಂದಿದೆ.
![Afghanistan's Shafiqullah banned for six years]()
ಅಫ್ಘಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶಫೀಕುಲ್ಲಾ ಶಫಕ್.
ಸಿನಿಮಾವೊಂದರಲ್ಲಿ ನಟಿಸಲು ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಆಫರ್ ನೀಡಿದ ಪುರಿ ಜಗನ್ನಾಥ್!
ರಾಷ್ಟ್ರೀಯ ತಂಡದ ಆಟಗಾರನ ಈ ನಡೆಗೆ ಅಪ್ಘನ್ ಕ್ರಿಕೆಟ್ ಬೋರ್ಡ್ ಸದ್ಯ ಆರು ವರ್ಷದ ನಿಷೇಧ ಹೇರಿದೆ. ವಿಚಾರಣೆ ವೇಳೆ ಶಫಕ್ ತಾನು ಮಾಡಿರುವ ತಪ್ಪನ್ನೆಲ್ಲ ಒಪ್ಪಿಕೊಂಡ ಪರಿಣಾಮ ಬೋರ್ಡ್ ದೀರ್ಘಾವಧಿಯ ನಿಷೇಧವನ್ನು ಆರು ವರ್ಷಕ್ಕೆ ಇಳಿಸಿದೆ.
Virat Kohli: ಬದಲಾದ ವಿರಾಟ್ ಕೊಹ್ಲಿ ಟ್ವಿಟ್ಟರ್ ಡಿಪಿ; ಏನಿದೆ ಗೊತ್ತಾ?
ಆರು ವರ್ಷದ ಈ ನಿಷೇಧ ಉಳಿದ ಎಲ್ಲ ಆಟಗಾರರಿಗೂ ಎಚ್ಚರಿಕೆಯ ಸಂದೇಶ ಎಂದಿರುವ ಬೋರ್ಡ್, ಮುಂದಿನ ದಿನದಲ್ಲಿ ಯಾರೂ ಸಹ ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳಬಾರದು ಎಂದಿದೆ.
ಶಫಕ್ ನಿಷೇಧದ ಬಗ್ಗೆ ಅಪ್ಘಬ್ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟರ್ ಖಾತೆಯನ್ನು ಮಾಹಿತಿ ನೀಡಿದೆ. ವಾರದ ಹಿಂದೆ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಸಹ ಇದೇ ಫಿಕ್ಸಿಂಗ್ ವಿಚಾರದಲ್ಲಿ ಮೂರು ವರ್ಷ ನಿಷೇಧಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ