ಯಾರು ಈ ಸುಂದರಿ? ಭಾರತದ ಟಿ20 ವಿಶ್ವಕಪ್ ತಂಡ ಪ್ರಕಟ ಬಳಿಕ ಹೆಚ್ಚಾಯ್ತು ಈಕೆ ಬಗ್ಗೆ ಹುಡುಕಾಟ

Ishan Ishan’s rumoured girlfriend- ಭಾರತದ ಯುವ ಕ್ರಿಕೆಟ್ ಆಟಗಾರ ಇಶಾನ್ ಕಿಶನ್ ಅವರ ಗರ್ಲ್ ಫ್ರೆಂಡ್ ಎನ್ನಲಾದ ಮಾಡೆಲ್ ಬಗ್ಗೆ ಜನರು ಮತ್ತೆ ಸರ್ಚ್ ಮಾಡಲು ಆರಂಭಿಸಿದ್ಧಾರೆ.

ಅದಿತಿ ಹುಂಡಿಯಾ

ಅದಿತಿ ಹುಂಡಿಯಾ

 • News18
 • Last Updated :
 • Share this:
  ಸಿನಿಮಾ, ಫ್ಯಾಷನ್ ಲೋಕ ಬಿಟ್ಟರೆ ಭಾರತದಲ್ಲಿ ಸೆಲಬ್ರಿಟಿಗಳು ಹೆಚ್ಚಿರುವುದು ಮತ್ತು ಗ್ಲಾಮರ್ ಇರುವುದು ಕ್ರಿಕೆಟ್ ಕ್ಷೇತ್ರದಲ್ಲಿ. ಕ್ರಿಕೆಟ್ ಆಟಗಾರರ ಸಂಪರ್ಕದಲ್ಲಿರುವುದು ಸೆಲಬ್ರಿಟಿ ಹುಡುಗಿಯರಿಗೆ ಹೆಮ್ಮೆಯ ವಿಷಯ. ಹೀಗಾಗಿ, ಧೋನಿಯನ್ನೂ ಒಳಗೊಂಡಂತೆ ಅನೇಕ ಕ್ರಿಕೆಟಿಗರ ಸುತ್ತ ಇದ್ದ, ಇರುವ ಗರ್ಲ್ ಫ್ರೆಂಡ್ ಬಗೆಗಿನ ರೂಮರ್​ಗಳನ್ನ ಕೇಳುತ್ತಲೇ ಬಂದಿದ್ದೇವೆ. ಇದಕ್ಕೆ ಭಾರತದ ಯುವ ಬ್ಯಾಟ್ಸ್​ಮನ್ ಹಾಗೂ ಭಾರತ ಅಂಡರ್-19 ತಂಡದ ಮಾಜಿ ಕ್ಯಾಪ್ಟನ್ ಇಶಾನ್ ಕಿಶನ್ ಕೂಡ ಹೊರತಲ್ಲ. ಬ್ಯಾಟಿಂಗ್ ಜೀನಿಯಸ್ ಎಂದು ಕರೆಯಲಾಗುವ ಇಶಾನ್ ಕಿಶನ್ ಅವರು ಈ ಬಾರಿಯ ಟಿ20 ವಿಶ್ವಕಪ್​ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ತಂಡ ಪ್ರಕಟವಾಗುತ್ತಿದ್ದಂತೆಯೇ ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಹೆಸರೂ ಮುನ್ನೆಲೆಗೆ ಬಂದಿತ್ತು. ರಾಜಸ್ಥಾನ ಮೂಲದ ಫ್ಯಾಷನ್ ಲೋಕದ ಸುಂದರಿ ಅದಿತಿ ಹುಂಡಿಯಾ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಕುತೂಹಲದ ಕಣ್ಣು ಹರಿದಿತ್ತು. ಈಕೆ ಈಗಲೂ ಇಶಾನ್ ಕಿಶನ್ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದಾಳಾ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

  2017ರ ಫೆಮೀನಾ ಮಿಸ್ ರಾಜಸ್ಥಾನ್ ಆಗಿದ್ದ ಅದಿತಿ ಹುಂಡಿಯಾ ಭಾರತದ ಗ್ಲಾಮರ್ ಜಗತ್ತಿನಲ್ಲಿ ತುಸು ಚಿರಪರಿಚಿತ. ಅಪ್ರತಿಮ ಚೆಲುವೆಯಾದ ಈಕೆ ಇಶಾನ್ ಕಿಶನ್ ಜೊತೆ ಡೇಟಿಂಗ್ ನಡೆಸುತ್ತಿರಬಹುದು ಎಂಬ ರೂಮರ್ ಅಂತೂ ಎರಡು ವರ್ಷಗಳಿಂದಲೂ ದಟ್ಟವಾಗಿದೆ. ಅದಕ್ಕೆ ಕಾರಣವೂ ಇದೆ. 2019ರ ಐಪಿಎಲ್ ಟೂರ್ನಿ ವೇಳೆ ಅದಿತಿ ಹುಂಡಿಯಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾಗೂ ವೈಯಕ್ತಿಕವಾಗಿ ಇಶಾನ್ ಕಿಶನ್ ಅವರಿಗೆ ಚಿಯರ್ ಮಾಡುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದವು. ಫೈನಲ್​ನಲ್ಲಿ ಮುಂಬೈ ತಂಡ ಸಿಎಸ್​ಕೆಯನ್ನ ಸೋಲಿಸಿ ಚಾಂಪಿಯನ್ ಆದ ಬಳಿಕ ಈಕೆ ಚಿಯರ್ ಮಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ಗೂಗಲ್ ಟ್ರೆಂಡಿಂಗ್​ನಲ್ಲಿ ಈಕೆಯ ಹೆಸರು ಪ್ರಧಾನವಾಗಿ ಕಾಣಿಸಿಕೊಂಡಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರು ಈಕೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡಿದ್ದರು.
  View this post on Instagram


  A post shared by Aditi Hundia (@aditihundia)

  ಮಾಡೆಲ್ ಆಗಿರುವ ಅದಿತಿ ಹುಂಡಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ಇನ್ಸ್​ಟಾಗ್ರಾಮ್​ನಲ್ಲಿ ಬಹಳ ಆ್ಯಕ್ಟಿವ್ ಇದ್ದಾರೆ. ಈಕೆಯ ಅನೇಕ ಪೋಸ್ಟ್​ಗಳಿಗೆ ಇಶಾನ್ ಕಿಶಾನ್ ಲೈಕ್ ಬಟನ್ ಒತ್ತಿರುವುದುಂಟು. ಹೀಗಾಗಿ, ಈಕೆಯನ್ನ ಈಗಲೂ ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಎಂದೇ ಪರಿಗಣಿಸಲಾಗಿದೆ. ಇಶಾನ್ ಕಿಶನ್ ಜೊತೆ ಈಕೆ ಇರುವ ಕೆಲ ಫೋಟೋಗಳು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತವೆ.

  ಇದನ್ನೂ ಓದಿ: ಅವರಿವರಿಂದ ಶೂ ಪಡೆದು ಬೌಲಿಂಗ್ ಮಾಡುತ್ತಿದ್ದೆ: ಕಷ್ಟದ ದಿನಗಳನ್ನ ನೆನೆದ ಭಾರತದ ಆಲ್​ರೌಂಡರ್

  23 ವರ್ಷದ ಇಶಾನ್ ಕಿಶನ್ ಬಿಹಾರಿಗರಾದರೂ ಜಾರ್ಖಂಡ್ ರಾಜ್ಯ ತಂಡದ ಕ್ರಿಕೆಟಿಗರಾಗಿದ್ದಾರೆ. ವಿಕೆಟ್ ಕೀಪಿಂಗ್ ಬ್ಯಾಟ್ಸ್​ಮನ್ ಆಗಿರುವ ಇಶಾನ್ ಕಿಶನ್ ಭವಿಷ್ಯದ ನಾಯಕ ಎಂದೇ ಗಣಿತವಾಗಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ನಾಲ್ಕೈದು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಐಪಿಎಲ್​ನಲ್ಲೂ ಇವರು ಭರ್ಜರಿ ಪ್ರದರ್ಶನ ನೀಡಿದ್ಧಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 37 ಹಾಗೂ ದೇಶೀಯ ಟಿ20 ಕ್ರಿಕೆಟ್​ನಲ್ಲಿ 28 ರನ್ ಸರಾಸರಿ ಹೊಂದಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
  Published by:Vijayasarthy SN
  First published: