ಧೋನಿಯನ್ನೂ ಮೀರಿಸುವಂತೆ ರನೌಟ್ ಮಾಡಿದ ಆದಿಲ್ ರಶೀದ್: ವಿಡಿಯೋ ವೈರಲ್

26ನೇ ಓವರ್​ವರೆಗೂ ಪಾಕ್ ತಂಡ ಸುಸ್ಥಿತಿಯಲ್ಲೇ ಇತ್ತು. 27ನೇ ಓವರ್​ ಎಸೆಯಲು ಬಂದ ಆದಿಲ್ ರಶೀದ್ ಓವರ್​ನ ಕೊನೆಯ ಬಾಲ್​ನಲ್ಲಿ ಸರ್ಫರಾಜ್ ಅಹ್ಮದ್ ರನ್ ಕದಿಯುವ ಪ್ರಯತ್ನ ಮಾಡಿದ್ದರು.

zahir | news18
Updated:May 20, 2019, 2:57 PM IST
ಧೋನಿಯನ್ನೂ ಮೀರಿಸುವಂತೆ ರನೌಟ್ ಮಾಡಿದ ಆದಿಲ್ ರಶೀದ್: ವಿಡಿಯೋ ವೈರಲ್
@India.com
  • News18
  • Last Updated: May 20, 2019, 2:57 PM IST
  • Share this:
ಪಾಕ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ಇಂಗ್ಲೆಂಡ್ ಗೆದ್ದುಕೊಂಡಿದೆ. ಭಾನುವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 351 ರನ್​ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕ್ 297 ರನ್​ಗಳಿಗೆ ಆಲೌಟ್​ ಆಗಿ ಸೋಲೊಪ್ಪಿಕೊಂಡಿತು.

ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್​ ಕೊನೆಯ ಪಂದ್ಯದಲ್ಲಿ ಬೌಲಿಂಗ್​ನಲ್ಲೂ ಮಿಂಚಿ ಗಮನ ಸೆಳೆಯಿತು. ಅದರಲ್ಲೂ ಇಂಗ್ಲೆಂಡ್ ಬೌಲರ್ ಆದಿಲ್ ರಶೀದ್ ಮಾಡಿದ ಅದ್ಭುತ ರನೌಟ್​ವೊಂದು ಎಲ್ಲರನ್ನು ನಿಬ್ಬೆರಗಾಗಿಸಿತು.

26ನೇ ಓವರ್​ವರೆಗೂ ಪಾಕ್ ತಂಡ ಸುಸ್ಥಿತಿಯಲ್ಲೇ ಇತ್ತು. 27ನೇ ಓವರ್​ ಎಸೆಯಲು ಬಂದ ಆದಿಲ್ ರಶೀದ್ ಓವರ್​ನ ಕೊನೆಯ ಬಾಲ್​ನಲ್ಲಿ ಸರ್ಫರಾಜ್ ಅಹ್ಮದ್ ರನ್ ಕದಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಕೀಪರ್ ಜೋಸ್ ಬಟ್ಲರ್ ನೇರವಾಗಿ ಚೆಂಡನ್ನು ಬೌಲಿಂಗ್ ತುದಿಯಲ್ಲಿದ್ದ ಆದಿಲ್ ರಶೀದ್​ಗೆ ಕೈಗಿತ್ತರು. ಅದಾಗಲೇ ನಾನ್​ ಸ್ಟ್ರೈಕ್​ನಲ್ಲಿದ್ದ ಬಾಬರ್ ಆಝಂ (80) ಕ್ರೀಸ್ ಬಿಟ್ಟಿದ್ದರು. ವಿಕೆಟ್​ನಿಂದ ತುಸು ದೂರದದಿಂದಲೇ ಚೆಂಡನ್ನು ರಶೀದ್ ಹಿಂತಿರುಗಿ ಅದ್ಭುತ ಕೈಚಳಕದ ಮೂಲಕ ವಿಕೆಟ್​ಗೆ ಎಸೆದಿದ್ದರು. ಆದಿಲ್ ರಶೀದ್​ ಅವರ ಈ ಅದ್ಭುತ ರನೌಟ್​ಗೆ ಬಾಬರ್ ಆಝಂ ಹೊರ ನಡೆಯಬೇಕಾಯಿತು.ಈ ರನೌಟ್​ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಆದಿಲ್ ರಶೀದ್​ ಅವರ ಅದ್ಭುತ ಫೀಲ್ಡಿಂಗ್​ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಇದೇ ರೀತಿಯಲ್ಲಿ ನ್ಯೂಜಿಲೆಂಡ್​ನ ರಾಸ್ ಟೇಲರ್​ ಅನ್ನು ಔಟ್ ಮಾಡಿದ್ದರು. ಇದೀಗ ಧೋನಿ ರನೌಟ್​ಗೆ ಆದಿಲ್ ರಶೀದ್​ರ ಕೈಚಳಕವನ್ನು ಹೋಲಿಸಲಾಗುತ್ತಿದೆ.ಹಾಗೆಯೇ ಇದೇ ಪಂದ್ಯದಲ್ಲಿ ಆದಿಲ್ ರಶೀದ್ ಶೊಯೆಬ್ ಮಲ್ಲಿಕ್ ಅವರನ್ನು ಡೈವಿಂಗ್​ ಕ್ಯಾಚ್ ಮೂಲಕ ಹೊರಗಟ್ಟಿದ್ದರು. ಈ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.ಒಟ್ಟಿನಲ್ಲಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್​ ತಂಡ ಸಮತೋಲನದ ಪ್ರದರ್ಶನ ನೀಡುತ್ತಿದ್ದು, ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ಗೆಲ್ಲುವುದು ಇತರೆ ತಂಡಗಳಿಗೆ ಕಠಿಣವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ
First published:May 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ