ರಾಹುಲ್ ದ್ರಾವಿಡ್ ಭಯಂಕರ ‘ಮುಖ’; ಸೋಷಿಯಲ್ ಮೀಡಿಯಾದಲ್ಲಿ ಇಂದಿರಾನಗರ ಗೂಂಡಾ ಹವಾ

ನಿಜ ಜೀವನದಲ್ಲಿ ಇಂದಿರಾನಗರದ ನಿವಾಸಿಯಾಗಿರುವ ದಿ ವಾಲ್ ರಾಹುಲ್ ದ್ರಾವಿಡ್, ರೀಲ್ನಲ್ಲಿ ಇಂದಿರಾ ನಗರ್ ಕಾ ಗೂಂಡಾ ಆಗಿರುವುದು ಹಲವರಿಗೆ ಸೋಜಿಗವೆನಿಸಿದೆ. ವಿರಾಟ್ ಕೊಹ್ಲಿ ಕೂಡ ಇದನ್ನು ಕಂಡು ಸ್ತಬ್ಧರಾಗಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ದ್ರಾವಿಡ್ ನಟಿಸಿರುವ ಕ್ರೆಡ್ ಜಾಹೀರಾತು

ರಾಹುಲ್ ದ್ರಾವಿಡ್ ನಟಿಸಿರುವ ಕ್ರೆಡ್ ಜಾಹೀರಾತು

 • News18
 • Last Updated :
 • Share this:
  ಬೆಂಗಳೂರು: ಇತ್ತೀಚೆಗೆ ನೀವು ರಾಹುಲ್ ದ್ರಾವಿಡ್ ನಟಿಸಿರುವ ಒಂದು ಜಾಹೀರಾತನ್ನು ಗಮನಿಸಿರಬಹುದು. ಕ್ರೆಡ್ ಎಂಬ ಕ್ರೆಡಿಟ್ ಕಾರ್ಡ್ ಬಿಲ್ ನಿರ್ವಹಣೆಯ ಅಪ್ಲಿಕೇಶನ್​ನ ಆ್ಯಡ್ ಇದು. ನಿಜ ಜೀವನದಲ್ಲಿ ಸದಾ ಕೂಲ್ ಅಂಡ್ ಕೂಲ್ ಆಗಿರುವ ರಾಹುಲ್ ದ್ರಾವಿಡ್ ಈ ಆ್ಯಡ್​ನಲ್ಲಿ ಬೇರೆಯೇ ಮುಖವನ್ನ ಪ್ರದರ್ಶಿಸುತ್ತಾರೆ. ಬೆಂಗಳೂರಿನ ಅತೀವ ಕಿರಿಕಿರಿಯ ಟ್ರಾಫಿಕ್​ನಲ್ಲಿ ತಾಳ್ಮೆಗೆಟ್ಟು ಹುಚ್ಚಾಟಗಳನ್ನ ಆಡುವ ದೃಶ್ಯಗಳಿವೆ. ತನ್ನ ಕಾರಿನ ಬಳಿ ಇದ್ದ ಬೇರೊಂದು ಕಾರಿಗೆ ಪಾನೀಯ ಎರಚಿ ವಾರ್ನಿಂಗ್ ಕೊಡುತ್ತಾರೆ. ಬ್ಯಾಟಿಂದ ಬೇರೆ ಕಾರಿಗೆ ಚಚ್ಚುತ್ತಾರೆ. ಮನಬಂದಂತೆ ಹಾರ್ನ್ ಮಾಡುತ್ತಾರೆ. ಹೊಡೆದಾಕಿ ಬಿಡ್ತೀನಿ ಅಂತ ಬೇರೆಯವರಿಗೆ ಎಚ್ಚರಿಕೆ ಕೊಡುತ್ತಾರೆ. ಕೈಯಲ್ಲಿ ಬ್ಯಾಟ್ ಹಿಡಿದು ಕಾರಿನ ಮೇಲೆ ನಿಂತು ನಾನು ಇಂದಿರಾ ನಗರದ ಗೂಂಡಾ ಎಂದು ಅರಚುತ್ತಾರೆ. ರಾಹುಲ್ ದ್ರಾವಿಡ್ ಅವರ ಈ ಕ್ರೆಡ್ ಜಾಹೀರಾತಿಗೆ ಬೆರಗಾದವರೇ ಇಲ್ಲ.

  ಭಾರತದ ಯಾವೊಬ್ಬ ಕ್ರೀಡಾಪಟುವೂ ಈ ರೀತಿ ಅಭಿನಯಿಸಿದ್ದನ್ನು ಬಹುಶಃ ನಾವು ನೋಡಿರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ತಾಜಾ ಆಗಿದೆ, ಫನ್ನಿ ಆಗಿದೆ ಈ ಆ್ಯಡ್. ನಿಜ ಜೀವನದಲ್ಲಿ ಇಂದಿರಾನಗರದ ನಿವಾಸಿಯಾಗಿರುವ ದಿ ವಾಲ್ ರಾಹುಲ್ ದ್ರಾವಿಡ್, ರೀಲ್​ನಲ್ಲಿ ಇಂದಿರಾ ನಗರ್ ಕಾ ಗೂಂಡಾ ಆಗಿರುವುದು ಹಲವರಿಗೆ ಸೋಜಿಗವೆನಿಸಿದೆ. ವಿರಾಟ್ ಕೊಹ್ಲಿ ಕೂಡ ಇದನ್ನು ಕಂಡು ಸ್ತಬ್ಧರಾಗಿ ಟ್ವೀಟ್ ಮಾಡಿದ್ದಾರೆ.


  ಭಾರತ ಕಂಡ ಅತ್ಯಂತ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆನಿಸಿದ ರಾಹುಲ್ ದ್ರಾವಿಡ್ ಅವರ ಈ ಫನ್ನಿ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಹಲವು ಮೀಮ್​ಗಳಿಗೆ ಎಡೆ ಮಾಡಿದೆ. ಇನ್ನೂ ಮಜಾ ಅಂದರೆ, ಕ್ರೆಡ್​ನ ಈ ಜಾಹೀರಾತಿಗೆ ಪ್ರತಿಯಾಗಿ ಬೇರೆ ಬೇರೆ ದೊಡ್ಡದೊಡ್ಡ ಬ್ರಾಂಡ್​ಗಳು ಕಮೆಂಟ್ ಮಾಡಿ ಪ್ರಚಾರ ಮಾಡಿಕೊಳ್ಳುತ್ತಿವೆ. ಪೀಜ್ಜಾ ಹಟ್, Cars24, OYO, ಮಿಂತ್ರಾ(Myntra), ಫ್ರೆಶ್​ಮೆನು, ಪೇಟಿಎಂ ಮೊದಲಾದ ಕಂಪನಿಗಳು ರಾಹುಲ್ ದ್ರಾವಿಡ್ ಅವ​ರಿಂದ ಬಾಧಿತರಾದವರಿಗೆ ಸಹಾಯ ಹಸ್ತ ಚಾಚಿದಂತೆ ತಮಾಷೆ ಮಾಡಿ ಟ್ವೀಟ್ ಮಾಡಿವೆ.


  ಇಂದಿರಾ ನಗರದಲ್ಲಿ ಸಿಕ್ಕಿಕೊಂಡಿದ್ದೀರಾ? ಬನ್ನಿ ನಮ್ಮೆಡೆಗೆ ಎಂದು ಹೋಟೆಲ್ ರೂಮ್ ಬುಕಿಂಗ್ ಸಂಸ್ಥೆ OYO ಟ್ವೀಟ್ ಮಾಡಿದೆ. ರಸ್ತೆಯಲ್ಲಿ ಗೂಂಡಾ ಕಿತಾಪತಿಯಿಂದಾಗಿ ಇಂದಿರಾನಗರದಲ್ಲಿ ಫೂಡ್ ಡೆಲಿವರಿ ಲೇಟ್ ಆಗುತ್ತೆ ಎಂದು ಜೊಮಾಟೋ ಹೇಳಿದೆ. ಗೂಂಡಾಗಿರಿಯಲ್ಲಿ ಹಾನಿಯಾದ ಕಾರಿಗೆ ಉಚಿತವಾಗಿ ದುರಸ್ತಿ ಮಾಡುವುದಾಗಿ Cars24 ಹೇಳಿದೆ. ಬೆಂಗಳೂರು ಎಫ್​ಸಿ ತಂಡದವರಂತೂ, ಇಂದಿರಾನಗರ್ ಕಾ ಗೂಂಡಾ ಬರುವವರೆಗೂ ಬೇರೆಯವರ ಹವಾ ಎಂದು ಬರೆದಿದೆ.
  Published by:Vijayasarthy SN
  First published: