ತೆಲುಗು ಸ್ಟಾರ್ ಜೂ. ಎನ್​ಟಿಆರ್ ಜೊತೆ ಕೈಜೋಡಿಸಲಿದ್ದಾರೆ ವಿರಾಟ್ ಕೊಹ್ಲಿ!

ವಿರಾಟ್​ ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸಿದರೆ, ಎನ್​ಟಿಆರ್​ ಸಿನಿಮಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಈಗ ಇಬ್ಬರೂ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

Rajesh Duggumane | news18
Updated:June 21, 2019, 4:34 PM IST
ತೆಲುಗು ಸ್ಟಾರ್ ಜೂ. ಎನ್​ಟಿಆರ್ ಜೊತೆ ಕೈಜೋಡಿಸಲಿದ್ದಾರೆ ವಿರಾಟ್ ಕೊಹ್ಲಿ!
ಕೊಹ್ಲಿ-ಜೂ.ಎನ್​ಟಿಆರ್​
  • News18
  • Last Updated: June 21, 2019, 4:34 PM IST
  • Share this:
ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​  ಕೊಹ್ಲಿ ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದಲ್ಲಿ ಬ್ಯುಸಿಯಾಗಿರುವ ತೆಲುಗು ಸ್ಟಾರ್​ ನಟ ಜೂ.ಎನ್​ಟಿಆರ್​ ಚಿತ್ರರಂಗದಲ್ಲಿ ಮನರಂಜನೆ ನೀಡುತ್ತಿದ್ದಾರೆ. ಇವರಿಬ್ಬರೂ ಈಗ ಒಂದಾಗುತ್ತಿದ್ದಾರೆ.  ಹಾಗಾದರೆ ವಿರಾಟ್​ ಟಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರಾ? ಖಂಡಿತವಾಗಿಯೂ ಇಲ್ಲ. ನಾವು ಹೇಳುತ್ತಿರುವ ವಿಚಾರ ಸಿನಿಮಾ ಬಗ್ಗೆ ಅಲ್ಲ.

ಮೂಲಗಳ ಪ್ರಕಾರ ಎನ್​ಟಿಆರ್​ ಹಾಗೂ ಎನ್​ಟಿಆರ್​ ಜಾಗೃತಿ ಕಾರ್ಯಕ್ರಮವೊಂದಕ್ಕಾಗಿ ಒಂದಾಗುತ್ತಿದ್ದಾರೆ. ಹೌದು, ಖಾಸಗಿ ಮಾಧ್ಯಮವೊಂದು ‘ರಸ್ತೆ ಹಾಗೂ ಆಲ್ಕೋಹಾಲ್​ ಜಾಗೃತಿ ಕಾರ್ಯಕ್ರಮ’ ನಡೆಸುತ್ತಿದೆ. ಈ ಮೂಲಕ ರಸ್ತೆ ಅಪಘಾತ, ಕುಡಿದು ಕಾರು ಚಲಾಯಿಸುವುದರಿಂದ ಆಗುವ ಅಪಘಾತ ಹಾಗೂ ಇದರಿಂದ ಕುಟುಂಬದವರಿಗೆ ಆಗುವ ತೊಂದರೆಗಳ ಈ ಜಾಗೃತಿ ಕಾರ್ಯಕ್ರಮ ಬೆಳಕು ಚೆಲ್ಲಲಿದೆ.

ಈ ಕಾರ್ಯಕ್ರಮಕ್ಕೆ ಎನ್​ಟಿಆರ್​ ಹಾಗೂ ಕೊಹ್ಲಿ ಒಂದಾಗುತ್ತಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಏಳು ಪ್ರಮುಖ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲಿದ್ದಾರೆ. ಹೆಚ್ಚು ಖ್ಯಾತಿ ಹೊಂದಿರುವವರನ್ನು ಈ ಕಾರ್ಯಕ್ರಮದ ರಾಯಭಾರಿಯಾಗಿ ನೇಮಕ ಮಾಡಿಕೊಂಡರೆ ಹೆಚ್ಚು ಪ್ರಚಾರ ಪಡೆದುಕೊಳ್ಳುವ ಆಲೋಚನೆ ಅವರದ್ದು.

First published:June 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading