ಬೆಂಗಳೂರು: ಮುಂಬರುವ ಅಬುಧಾಬಿ ಟಿ10 ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕದ ಇಬ್ಬರು ಕ್ರಿಕೆಟಿಗರು ಸೇರಿ ಭಾರತದ ನಾಲ್ವರು ಕ್ರಿಕೆಟಿಗರು ಆಡುತ್ತಿದ್ದಾರೆ. ಐದನೇ ಸೀಸನ್ಗೆ ಕಾಲಿಟ್ಟಿರುವ ಟಿ10 ಲೀಗ್ ನವೆಂಬರ್ 19ರಿಂದ ಡಿಸೆಂಬರ್ 4ರವರೆಗೆ ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು ಆರು ತಂಡಗಳು ಇದರಲ್ಲಿವೆ. ನಿಕೋಲಾಸ್ ಪೂರನ್, ಫೇಬಿಯನ್ ಅಲನ್, ಫ್ಯಾಫ್ ಡುಪ್ಲೆಸಿ, ಶಾಹಿದ್ ಅಫ್ರಿದಿ, ಮೊಹಮ್ಮದ್ ಅಮಿರ್, ಫಾಕ್ನರ್, ಜೇಸನ್ ರಾಯ್, ಇಯಾನ್ ಮಾರ್ಗನ್, ಡ್ವೇನ್ ಬ್ರಾವೋ, ಲಿಯಾಮ್ ಲಿವಿಂಗ್ಸ್ಟೋನ್, ಕ್ರಿಸ್ ಗೇಲ್, ಕ್ರಿಸ್ ಜೋರ್ಡಾನ್, ಆಂಡ್ರೆ ರಸೆಲ್, ಎವಿನ್ ಲೆವಿಸ್ ಮೊದಲಾದ ಸ್ಟಾರ್ ಆಟಗಾರರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.
ಭಾರತದಿಂದ ಯೂಸುಫ್ ಪಠಾಣ್, ಅಭಿಮನ್ಯು ಮಿಥುನ್, ಕೋನೇನ್ ಅಬ್ಬಾಸ್ ಮತ್ತು ನವ್ ಪಬ್ರೇಜಾ ಅವರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಯೂಸುಫ್ ಪಠಾಣ್ ಮತ್ತು ಅಭಿಮನ್ಯು ಮಿಥುನ್ ಅಂತರರಾಷ್ಟ್ರೀಯ ಕ್ರಿಕೆಟಿಗರೆನಿಸಿದ್ದಾರೆ. ಪಠಾಣ್ ಟೀಮ್ ಇಂಡಿಯಾ ಪರ ಹಲವು ಪಂದ್ಯಗಳನ್ನ ಆಡಿದ್ಧಾರೆ. ಕೋನೇನ್ ಅಬ್ಬಾಸ್ ಅವರು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಹೆಸರು ಮಾಡಿದವರು. ಇನ್ನು, ನವ್ ಪಬ್ರೇಜಾ ಅವರು ದಿಲ್ಲಿಯ ಕ್ರಿಕೆಟಿಗರಾಗಿದ್ದಾರೆ. ಅಭಿಮನ್ಯು ಮಿಥುನ್ ಮತ್ತು ಕೋನೇನ್ ಅಬ್ಬಾಸ್ ಅವರಿಬ್ಬರೂ ನಾರ್ಥರ್ನ್ ವಾರಿಯರ್ಸ್ ತಂಡದಲ್ಲಿದ್ದಾರೆ. ಯೂಸುಪ್ ಪಠಾಣ್ ಅವರು ಮರಾಠ ಅರೇಬಿಯನ್ಸ್ ತಂಡದ ಪಾಲಾಗಿದ್ದಾರೆ.
ಈ ಹಿಂದೆ ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಪ್ರವೀಣ್ ತಾಂಬೆ ಮೊದಲಾದ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಹಾಲಿ ಸಕ್ರಿಯವಾಗಿರುವ ಕ್ರಿಕೆಟಿಗರಿಗೆ ವಿದೇಶಗಳಲ್ಲಿ ಆಡಲು ಹೆಚ್ಚು ಅವಕಾಶ ಇಲ್ಲವಾದ್ದರಿಂದ ನಿವೃತ್ತಗೊಂಡ ಭಾರತೀಯ ಕ್ರಿಕೆಟಿಗರು ಅಥವಾ ಬಿಸಿಸಿಐನಿಂದ ಅಗತ್ಯ ಒಪ್ಪಿಗೆ ಪಡೆದ ಕ್ರಿಕೆಟಿಗರಷ್ಟೇ ಇಂಥ ಕ್ರಿಕೆಟ್ ಲೀಗ್ಗಳಲ್ಲಿ ಆಡಬಹುದು. ಯೂಸುಫ್ ಪಠಾಣ್, ಅಭಿಮನ್ಯು ಮಿಥುನ್ ಅವರು ಈಗಾಗಲೇ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ.
ಇದನ್ನೂ ಓದಿ: T20 World Cup- ವಿಶ್ವಕಪ್ ಗೆದ್ದವರಿಗೆ ಸಿಗೋ ಹಣ, ಸೋತ ತಂಡಗಳಿಗೆ ಸಿಗೋ ಹಣ ಎಷ್ಟು ಗೊತ್ತಾ?
ಐಸಿಸಿಯಿಂದ ಮಾನ್ಯತೆ ಪಡೆದ ಏಕೈಕ ಟಿ10 ಕ್ರಿಕೆಟ್ ಲೀಗ್ ಇದಾಗಿದೆ. ಟಿ20 ಕ್ರಿಕೆಟ್ನಲ್ಲಿ ಒಂದು ಇನ್ನಿಂಗ್ಸಲ್ಲಿ 20 ಓವರ್ ಇದ್ದರೆ ಈ ಟಿ10 ಕ್ರಿಕೆಟ್ನಲ್ಲಿ ಒಂದು ಇನಿಂಗ್ಸಲ್ಲಿ 10 ಓವರ್ ಇರುತ್ತದೆ. 90 ನಿಮಿಷ, ಅಂದರೆ ಒಂದೂವರೆ ಗಂಟೆ ಕಾಲಾವಧಿ ಇರುತ್ತದೆ. ಕ್ರಿಕೆಟ್ನ ಜನಪ್ರಿಯತೆ ಹೆಚ್ಚಿಸಲು ಹಾಗೂ ಹೆಚ್ಚೆಚ್ಚು ಜನರನ್ನ ಮತ್ತು ದೇಶಗಳನ್ನ ತಲುಪಲು ಕ್ರಿಕೆಟ್ನಲ್ಲಿ ನಡೆಸಲಾಗುತ್ತಿರುವ ವಿವಿಧ ಪ್ರಯೋಗಗಳಲ್ಲಿ ಟಿ10 ಕ್ರಿಕೆಟ್ ಕೂಡ ಒಂದು.
ಆರು ತಂಡಗಳು ಹಾಗೂ ಆಟಗಾರರ ಪಟ್ಟಿ:
ಮರಾಠ ಅರೇಬಿಯನ್ಸ್: ನಿಕೋಲಾಸ್ ಪೂರನ್ (ಐಕಾನ್ ಪ್ಲೇಯರ್), ಯೂಸುಫ್ ಪಠಾಣ್, ಫೇಬಿಯನ್ ಅಲನ್, ದುಷ್ಮಂತ ಚಮೀರ, ವಹಾಬ್ ರಿಯಾಜ್, ಅಜಂ ಖಾನ್, ಮಹೇಶ್ ತೀಕ್ಷಣ, ಡರೆನ್ ಬ್ರಾವೋ, ಧನಂಜಯ ಲಕ್ಷಣ್, ಮಿಗಾಯಿಲ್ ಪ್ರಿಟೋರಿಯಸ್, ಮುಹಮ್ಮದ್ ವಾಸೀಮ್, ಜುನೇದ್ ಸಿದ್ಧಿಕಿ, ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಚಮಿಕಾ ಕರುಣಾರತ್ನೆ, ಟಿಯೋನ್ ವೆಬ್ಸ್ಟರ್.
ಬಾಂಗ್ಲಾ ಟೈಗರ್ಸ್: ಫ್ಯಾಫ್ ಡುಪ್ಲೆಸಿ (ಐಕಾನ್ ಪ್ಲೇಯರ್), ಶಾಹಿದ್ ಅಫ್ರಿದಿ, ಮೊಹಮ್ಮದ್ ಅಮೀರ್, ಜೇಮ್ಸ್ ಫಾಕ್ನರ್, ಬೆನ್ನಿ ಹೋವೆಲ್, ಜಾನ್ಸನ್ ಚಾರ್ಲ್ಸ್, ಹಜರತುಲ್ಲಾ ಝಜಾಯ್, ವಿಲ್ ಜ್ಯಾಕ್ಸ್, ಆಂಡ್ರೆ ಫ್ಲೆಚರ್, ಖಾಯಿಸ್ ಅಹ್ಮದ್, ಇಸುರು ಉಡಾನ, ಸಬೀರ್ ರಾವ್, ಹಸನ್ ಖಾಲಿದ್, ಮಥೀಶ ಪದಿರಾನ, ವಿಲಿಯಮ್ ಸ್ಮೀಡ್, ಅಡಮ್ ಲೈತ್, ಮೊಹಮ್ಮದ್ ಸೈಫುದ್ದೀನ್.
ಡೆಲ್ಲಿ ಬುಲ್ಸ್: ಜೇಸನ್ ರಾಯ್ (ಐಕಾನ್ ಪ್ಲೇಯರ್), ಇಯಾನ್ ಮಾರ್ಗನ್, ಡ್ವೇನ್ ಬ್ರಾವೋ, ರವಿ ರಾಮಪಾಲ್, ಅದಿಲ್ ರಷೀದ್, ಶೆರ್ಫಾನೆ ರುದರ್ಫೋರ್ಡ್, ರಿಲೀ ರೋಸೋ, ಡಾಮಿನಿಕ್ ಡ್ರೇಕ್ಸ್, ರಹಮನುಲ್ಲಾ ಗುರ್ಬಜ್, ರೊಮಾರಿಯೋ ಶೆಫರ್ಡ್, ಶೋಯಬ್ ಮಕಸೂದ್, ಶಿರಾಜ್ ಅಹ್ಮದ್, ಹಫೀಜ್ ರಹಮಾನ್, ನಯೀಮ್ ಯಂಗ್, ಫಜಲ್ ಹಕ್ ಫಾರೂಕಿ, ಅಕೀಲ್ ಹೊಸೇನ್, ದೇವೋನ್ ಥಾಮಸ್.
ಟೀಮ್ ಅಬುಧಾಬಿ: ಲಿಯಾಮ್ ಲಿವಿಂಗ್ಸ್ಟೋನ್ (ಐಕಾನ್ ಪ್ಲೇಯರ್), ಕ್ರಿಸ್ ಗೇಲ್, ಮರ್ಚಂಟ್ ಡೀ ಲಾಂಗೆ, ಕೋಲಿನ್ ಇಂಗ್ರಮ್, ಫಿಲ್ ಸಾಲ್ಟ್, ಪೌಲ್ ಸ್ಟರ್ಲಿಂಗ್, ಒಬೇದ್ ಮೆಕ್ಕಾಯ್, ಡ್ಯಾನಿ ಬ್ರಿಗ್ಸ್, ಜೇಮೀ ಓವರ್ಟನ್, ನವೀನ್-ಉಲ್-ಹಕ್, ಫಿಡೆಲ್ ಎಡ್ವರ್ಡ್ಸ್, ರೋಹನ್ ಮುಸ್ತಾಫ, ಮುಹಮ್ಮದ್ ಫರಜುದ್ದೀನ್, ಅಹ್ಮದ್ ದಾನಿಯಲ್, ಕ್ರಿಸ್ಟೋಫರ್ ಬೆಂಜಮಿನ್.
ನಾರ್ಥರ್ನ್ ವಾರಿಯರ್ಸ್: ಕ್ರಿಸ್ ಜೋರ್ಡನ್ (ಐಕಾನ್ ಪ್ಲೇಯರ್), ಮೊಯೀನ್ ಅಲಿ, ರೋವ್ಮ್ಯಾನ್ ಪೋವೆಲ್, ಇಮ್ರಾನ್ ತಾಹಿರ್, ಉಪುಲ್ ತರಂಗ, ರಯಾದ್ ಎಮ್ರಿಟ್, ರೀಸೀ ಟೋಪ್ಲೀ, ಸಮಿತ್ ಪಟೇಲ್, ಕೆನರ್ ಲೆವಿಸ್, ಅಭಿಮನ್ಯು ಮಿಥುನ್, ಕೌನೇನ್ ಅಬ್ಬಾಸ್, ಉಮೇರ್ ಅಲಿ, ರಮೀಜ್ ಶಹಜಾದ್, ಜೋಶ್ ಲಿಟಲ್, ಅಬ್ದುಲ್ ವಾಹಿದ್, ಬ್ಲೆಸಿಂಗ್ ಮುಜರಬಾನಿ, ರಾಸ್ ವಿಟ್ಲೀ.
ಡೆಕ್ಕನ್ ಗ್ಲೇಡಿಯೇಟರ್ಸ್: ಆಂಡ್ರೆ ರಸೆಲ್ (ಐಕಾನ್ ಪ್ಲೇಯರ್), ಎವಿನ್ ಲೆವಿಸ್, ಟಾಮ್ ಬ್ಯಾಂಟಾನ್, ಟಾಮ್ ಕೋಹ್ಲರ್-ಕ್ಯಾಡ್ಮೋರ್, ಡೇವಿಡ್ ವೀಸ್, ಟೈಮಲ್ ಮಿಲ್ಸ್, ವನಿಂದು ಹಸರಂಗ, ನಜೀಬುಲ್ಲಾ ಜಡ್ರನ್, ಓಡಿಯನ್ ಸ್ಮಿತ್, ರುಮನ್ ರಾಯೀಸ್, ರವಿ ಬೊಪಾರ, ಜಹೂರ್ ಖಾನ್, ಸುಲ್ತಾನ್ ಅಹ್ಮದ್, ಇಝರುಲ್ಹಕ್ ನವೀದ್, ನವ್ ಪಬ್ರೇಜಾ, ರಯಾನ್ ರಿಕೆಲ್ಟನ್, ಅನ್ವರ್ ಅಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ