T20 World Cup- ಅಬುಧಾಬಿಯ ಪಿಚ್ ಕ್ಯೂರೇಟರ್ ಮೋಹನ್ ಸಿಂಗ್ ನಿಗೂಢ ಸಾವು

Pitch Curator Mohan Singh Death- ಟಿ20 ವಿಶ್ವಕಪ್ ಪಂದ್ಯಗಳು ನಡೆಯುತ್ತಿರುವ ಅಬುಧಾಬಿಯ ಜಾಯೇದ್ ಕ್ರಿಕೆಟ್ ಸ್ಟೇಡಿಯಂನ ಚೀಫ್ ಪಿಚ್ ಕ್ಯೂರೇಟರ್ ಆಗಿದ್ದ ಮೋಹನ್ ಸಿಂಗ್ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಮೋಹನ್ ಸಿಂಗ್

ಮೋಹನ್ ಸಿಂಗ್

  • Share this:
    ಅಬುಧಾಬಿ: ಇಲ್ಲಿಯ ಶೇಖ್ ಜಾಯೇದ್ ಕ್ರಿಕೆಟ್ ಸ್ಟೇಡಿಯಂನ (Sheikh Zayed Cricket Stadium) ಮುಖ್ಯ ಪಿಚ್ ಕ್ಯೂರೇಟರ್ (Chief Pitch Curator) ಆಗಿದ್ದ ಭಾರತ ಮೂಲದ ಮೋಹನ್ ಸಿಂಗ್ (Mohan Singh’s death) ಅವರು ನಿಧನರಾಗಿದ್ದಾರೆ. ಇಲ್ಲಿ ಮಧ್ಯಾಹ್ನ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ (Afghanistan vs New Zealand) ನಡುವಿನ ಪಂದ್ಯ ಶುರುವಾಗುವ ಕೆಲ ಗಂಟೆಗಳ ಮೊದಲು ಈ ಬೆಳವಣಿಗೆ ಆಗಿದೆ. ಆದರೆ, ಮೋಹನ್ ಸಿಂಗ್ ಅವರ ನಿಧನಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ನಾಳೆ ಈ ಬಗ್ಗೆ ಯುಎಇ ಕ್ರಿಕೆಟ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

    “ಮೋಹನ್ ಸಿಂಗ್ ಇವತ್ತು ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ. ಅವರು ಸಾವನ್ನಪ್ಪಿರುವುದು ಬಹಳ ದುರದೃಷ್ಟಕರ” ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮೋಹನ್ ಸಿಂಗ್ ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ಸಂತಾಪ ಸೂಚಿಸಿ ಅಬುಧಾಬಿ ಕ್ರಿಕೆಟ್ ಸಂಸ್ಥೆ ಸರಣಿ ಟ್ವೀಟ್ ಮಾಡಿದೆ.

    “ಮುಖ್ಯ ಕ್ಯುರೇಟರ್ ಮೋಹನ್ ಸಿಂಗ್ ನಿಧನರಾದರೆಂದು ತಿಳಿಸಲು ಬಹಳ ದುಃಖವಾಗುತ್ತಿದೆ. ಅಬುಧಾಬಿ ಕ್ರಿಕೆಟ್ ಜೊತೆ 15 ವರ್ಷಗಳಿಂದ ಅವರು ಕೆಲಸ ಮಾಡಿದ್ದಾರೆ. ಈ ಗ್ರೌಂಡ್​ನ ಯಶಸ್ಸಿನಲ್ಲಿ ಅವರ ಪಾತ್ರ ಬಹಳ ಮುಖ್ಯ ಇದೆ.

    “ಮೋಹನ್ ಅವರ ಕುಟುಂಬ ಮತ್ತು ನಮ್ಮ ಗ್ರೌಂಡ್ ಸ್ಟಾಫ್​ನ ನೆರವಿನಿಂದ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಸೂಪರ್ 12 ಪಂದ್ಯ ನಿಗದಿಯಂತೆಯೇ ನಡೆಯಿತು.


    ”ಮೋಹನ್ ಹಾಗೂ ಅವರ ಕೊಡುಗೆಗಳನ್ನ ಸ್ಮರಿಸಿ ಅವರಿಗೆ ಮುಂದಿನ ದಿನಗಳಲ್ಲಿ ಗೌರವ ಸಲ್ಲಿಸಲಾಗುವುದು. ಮೋಹನ್ ಕುಟುಂಬಕ್ಕೆ ನಮ್ಮ ಸಂತಾಪ ಇದೆ. ಈ ಸಂಕಷ್ಟದ ಸಂದರ್ಭದಲ್ಲಿ ಮೋಹನ್ ಕುಟುಂಬದ ಖಾಸಗಿತನವನ್ನು ಗೌರವಿಸಬೇಕೆಂದು ಮಾಧ್ಯಮದವರಿಗೆ ಮನವಿ ಮಾಡುತ್ತೇವೆ” ಎಂದು ಅಬುಧಾಬಿ ಕ್ರಿಕೆಟ್ ಸಂಸ್ಥೆ ಹೇಳಿಕೆ ನೀಡಿದೆ.

    ಮಾಜಿ ಬಿಸಿಸಿಐ ಕ್ಯೂರೇಟರ್ ಜೊತೆ ಕೆಲಸ ಮಾಡಿದ್ದ ಮೋಹನ್ ಸಿಂಗ್:

    ಬಿಸಿಸಿಐನ ಮಾಜಿ ಚೀಫ್ ಕ್ಯೂರೇಟರ್ ದಲಜಿತ್ ಸಿಂಗ್ ಅವರು ಮೋಹನ್ ಸಿಂಗ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ಧಾರೆ. ಭಾರತೀಯ ಕ್ರಿಕೆಟ್​ನಲ್ಲಿ 22 ವರ್ಷಗಳ ಕಾಲ ಕ್ಯೂರೇಟರ್ ಆಗಿ ಕೆಲಸ ಮಾಡಿರುವ ದಲಜಿತ್ ಸಿಂಗ್ ಅವರ ಜೊತೆ ಮೋಹನ್ ಸಿಂಗ್ ಹಲವು ವರ್ಷಗಳ ಹಿಂದೆ ಕೆಲಸ ಮಾಡಿದ್ದರಂತೆ. 2000ದ ದಶಕದ ಆರಂಭದಲ್ಲಿ ಮೋಹನ್ ಸಿಂಗ್ ಯುಎಇಗೆ ವಲಸೆ ಹೋಗಿದ್ದರು. ಅದಕ್ಕೆ ಮುನ್ನ ಅವರು ಮೊಹಾಲಿಯಲ್ಲಿ ದಲಜೀತ್ ಸಿಂಗ್ ಜೊತೆ ಬಹಳ ನಿಕಟವಾಗಿ ಪಿಚ್ ಕ್ಯೂರೇಟರ್ ಆಗಿ ಕೆಲಸ ಮಾಡಿದ್ದರು.

    ಇದನ್ನೂ ಓದಿ: T20 World Cup: ಸೆಮಿಫೈನಲ್ ಫಿಕ್ಸ್- ಪಾಕ್ vs ಆಸ್ಟ್ರೇಲಿಯಾ; ಇಂಗ್ಲೆಂಡ್ vs ನ್ಯೂಜಿಲೆಂಡ್

    “ಗಡವಾಲ್ ಪ್ರದೇಶದವನಾದ ಆತ ನನ್ನ ಬಳಿ ಬಂದಾಗ ಬಹಳ ಚುರುಕಿನ ಹುಡುಗನಾಗಿದ್ದ. ಬಹಳ ಪ್ರತಿಭೆ ಮತ್ತು ಪರಿಶ್ರಮಿ ವ್ಯಕ್ತಿತ್ವದವನಾಗಿದ್ದ… ಯುಎಇಗೆ ಹೋದ ಬಳಿಕ ಆತ ಭಾರತಕ್ಕೆ ಬಂದಾಗೆಲ್ಲಾ ನನ್ನನ್ನು ಬಂದು ಭೇಟಿಯಾಗಿ ಹೋಗುತ್ತಿದ್ದ. ಈಗ್ಗೆ ಬಹಳ ಕಾಲದಿಂದ ಆತನನ್ನು ನಾನು ಕಂಡಿಲ್ಲ. ಆತ ಬಹಳ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರುವುದು ದುರದೃಷ್ಟಕರ” ಎಂದು ದಲಜೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

    ಮೋಹನ್ ಸಿಂಗ್ ಅವರು ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತರಬೇತಿ ಪಡೆದು ಅಲ್ಲಿಯೇ ದಲಜೀತ್ ಸಿಂಗ್ ಗರಡಿಯಲ್ಲಿ ಗ್ರೌಂಡ್ ಸೂಪರ್​ವೈಸರ್ ಆಗಿ ಬಹಳ ವರ್ಷ ಕೆಲಸ ಮಾಡಿದ್ದರು. 2004ರಲ್ಲಿ ಅವರು ಅಬುಧಾಬಿಗೆ ವಲಸೆ ಹೋಗಿದ್ದು.
    Published by:Vijayasarthy SN
    First published: