ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಸೋಲು ಉದ್ದೇಶಪೂರ್ವಕ: ಸೋಲಿಗೆ ಇದೇ ಕಾರಣವೆಂದ ಪಾಕ್ ಕ್ರಿಕೆಟಿಗ

India vs England: ಟೂರ್ನಿಯಲ್ಲಿ ಪಾಕಿಸ್ತಾನ ಮುಂದುವರಿಯಬೇಕಾದರೆ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗಿತ್ತು. ಇದನ್ನು ಇಷ್ಟ ಪಡದ ಭಾರತ ತಂಡ ಇಂಗ್ಲೆಂಡ್​ಗೆ ಶರಣಾಗಿತ್ತು ಎಂದು ರಜಾಕ್ ಆರೋಪಿಸಿದ್ದಾರೆ.

news18-kannada
Updated:June 3, 2020, 4:26 PM IST
ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಸೋಲು ಉದ್ದೇಶಪೂರ್ವಕ: ಸೋಲಿಗೆ ಇದೇ ಕಾರಣವೆಂದ ಪಾಕ್ ಕ್ರಿಕೆಟಿಗ
ಭಾರತ vs ಇಂಗ್ಲೆಂಡ್
  • Share this:
2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಕಂಡು ಅಭಿಯಾನ ಅಂತ್ಯಗೊಳಿಸಿತ್ತು. ಇದಕ್ಕೂ ಮುನ್ನ ಇಡೀ ಟೂರ್ನಿಯಲ್ಲಿ ಭಾರತ ಸೋಲು ಕಂಡಿದ್ದು ಕೇವಲ ಒಂದು ಪಂದ್ಯದಲ್ಲಷ್ಟೆ. ರೌಂಡ್ ರಾಬಿನ್ ಪಂದ್ಯದಲ್ಲಿ ಕೊಹ್ಲಿ ಪಡೆ ಇಂಗ್ಲೆಂಡ್ ಗೆಲುವು ಕಾಣುವಲ್ಲಿ ವಿಫಲವಾಯಿತು.

ಸದ್ಯ ಇದೇ ವಿಚಾರವನ್ನು ಇಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಬ್ದುಲ್ ರಜಾಕ್, 2109ರ ವಿಶ್ವಕಪ್​ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಉದ್ದೇಶಪೂರ್ವಕವಾಗಿ ಸೋಲನ್ನು ಕಂಡಿತ್ತು ಎಂದು ಆರೋಪ ಮಾಡಿದ್ದಾರೆ.

ಧೋನಿ ಕಂಬ್ಯಾಕ್ ಮಾಡಲ್ಲ ಎಂದ ಭಜ್ಜಿಗೆ ರೈನಾರಿಂದ ಮುಟ್ಟಿ ನೋಡುವಂತಹ ಏಟು!

ಇತ್ತೀಚೆಗಷ್ಟೆ ಇಂಗ್ಲೆಂಡ್ ತಂಡದ ಆಲ್​ರೌಂಡರ್ ಬೆನ್ ಸ್ಟೋಕ್ಸ್​ ಇದೇ ವಿಚಾರವನ್ನು ಹೇಳಿದ್ದರು. 'ನಮ್ಮ ತಂಡದ ವಿರುದ್ಧ ಭಾರತ ಸುಲಭ ಜಯ ಸಾಧಿಸಿಬಹುದಿತ್ತು. ಆದರೆ, ಧೋನಿ ಪಂದ್ಯವನ್ನು ಗೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ನಡೆ ಕೂಡ ತಮಗೆ ಅಚ್ಚರಿ ಮೂಡಿಸಿತ್ತು. ಧೋನಿ ಸಿಕ್ಸರ್‌ ಬಾರಿಸುವ ಕಡೆಗೆ ಮನಸ್ಸು ಮಾಡದೆ ಕೇವಲ 1 ರನ್‌ಗಳನ್ನು ತೆಗೆಯುವುದರಲ್ಲಿ ನಿರತರಾಗಿದ್ದರು' ಎಂದು ಹೇಳಿದ್ದರು.

ಸದ್ಯ ರಜಾಕ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, 'ಟಿವಿ ವೀಕ್ಷಕವಿವರಣೆಕಾರರಾಗಿದ್ದ ನಾವು ಅಂದು ಅದೇ ರೀತಿ ಭಾವನೆ ಬಂದಿತ್ತು. ನಾನು ಐಸಿಸಿ ಬಳಿ ಮನವಿಯನ್ನು ಮಾಡಿಕೊಂಡಿದ್ದೆ. ಮ್ಯಾಚ್ ಫಿಕ್ಸ್ ಅಥವಾ ಸ್ಪಾಟ್ ಫಿಕ್ಸಿಂಗ್ ನಂತಾ ಪ್ರಕರಣಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ ಉದ್ದೇಶಪೂರ್ವಕವಾಗಿ ತಂಡ ಸೋತರೆ ಅದಕ್ಕೂ ಶಿಕ್ಷೆಯಾಗಬೇಕು' ಎಂದು ವಿನಂತಿಸಿದ್ದೇನೆ ಎಂದಿದ್ದಾರೆ.

'ಭಾರತ- ಇಂಗ್ಲೆಂಡ್ ಪಂದ್ಯದ ನಡುವೆ ನೀವು ಸ್ಪಷ್ಟವಾಗಿ ಗಮನಿಸಿರಬಹುದು. ಭಾರತ ಅಂದು ಇದ್ದ ಪರಿಸ್ಥಿತಿಯಲ್ಲಿ ಬ್ಯಾಟ್ಸ್​ಮನ್​ ಸಿಕ್ಸರ್ ಸಿಡಿಸಬಹುದಾಗಿತ್ತು. ಆದರೆ ಅದರ ಬದಲಾಗಿ ಬೌಂಡರಿ ಬಾರಿಸಿ ಅಥವಾ ಚೆಂಡನ್ನು ಬ್ಲಾಕ್ ಮಾಡುತ್ತಾ ಇದ್ದಿದ್ದು ಸುಲಭವಾಗಿ ಕಾಣಿಸಿತ್ತು.'

ವಿವಾದದಲ್ಲಿ ಯುವರಾಜ್​ ಸಿಂಗ್: ಕ್ಷಮೆ ಕೋರುವಂತೆ ಆಗ್ರಹ..!'ಟೂರ್ನಿಯಲ್ಲಿ ಪಾಕಿಸ್ತಾನ ಮುಂದುವರಿಯಬೇಕಾದರೆ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗಿತ್ತು. ಇದನ್ನು ಇಷ್ಟ ಪಡದ ಭಾರತ ತಂಡ ಇಂಗ್ಲೆಂಡ್​ಗೆ ಶರಣಾಗಿತ್ತು. ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಐಸಿಸಿ ಉದ್ದೇಶಪೂರ್ವಕವಾಗ ಸೋಲುವುದರ ವಿರುದ್ಧ ನಿಯಮಗಳನ್ನು ರೂಪಿಸಬೇಕು' ಎಂದು ರಜಾಕ್ ಹೇಳಿದ್ದಾರೆ.

First published: June 3, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading