ಎಬಿ ಡಿವಿಲಿಯರ್ಸ್ ಕಂಬ್ಯಾಕ್: ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಸಿಕ್ಸರ್ಗಳ ಸುರಿಮಳೆ
ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಎಬಿಡಿಯನ್ನು ಚುಟುಕು ಕ್ರಿಕೆಟ್ಗೆ ಆಯ್ಕೆ ಮಾಡಲು ಉತ್ಸುಕರಾಗಿದ್ದು, ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರಮುಖ ಕಾರಣ ಆರ್ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮಿಂಚಿತ ಪ್ರದರ್ಶನ ನೀಡುತ್ತಿರುವುದು.
- News18 Kannada
- Last Updated: January 26, 2020, 8:11 PM IST
ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಂಬ್ಯಾಕ್ ಮಾಡಲಿದ್ದಾರಾ? ಇಂತಹದೊಂದು ಮಿಲಿಯನ್ ಡಾಲರ್ ಪ್ರಶ್ನೆ ಎಬಿಡಿ ಅಭಿಮಾನಿಗಳಲ್ಲಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ಆಟಗಾರನ ಪ್ರಸ್ತುತ ಫಾರ್ಮ್. ಸತತ ಸೋಲಿನಿಂದ ಕಂಗೆಡುತ್ತಿರುವ ಹರಿಣರ ತಂಡದ ಮುಂದಿನ ಗುರಿ ಐಸಿಸಿ T20 ವಿಶ್ವಕಪ್.
ಈ ನಡುವೆ ಅಂತರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ ಮರಳುವ ಭರವಸೆಯನ್ನೂ ಡಿವಿಲಿಯರ್ಸ್ ನೀಡಿದ್ದಾರೆ. ಇದೀಗ ಅದಕ್ಕೆ ಪೂರ್ವಭಾವಿ ತಯಾರಿ ಎಂಬಂತೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ನಲ್ಲಿ ಎಬಿಡಿ ಅಬ್ಬರಿಸಿದ್ದಾರೆ. ಶನಿವಾರ ಮೆಲ್ಬೋರ್ನ್ನಲ್ಲಿ ನಡೆದ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯದಲ್ಲಿ ಎಬಿಡಿ ಅಕ್ಷರಶಃ ಅಬ್ಬರಿಸಿದ್ದರು. ಕೇವಲ 37 ಎಸೆತಗಳನ್ನು ಎದುರಿಸಿದ ಎಬಿಡಿ ಭರ್ಜರಿ 71 ರನ್ಗಳನ್ನು ಸಿಡಿಸುವ ಮೂಲಕ ತಮ್ಮ ಹಳೆಯ ಚಾರ್ಮ್ಗೆ ಮರಳಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬ್ರಿಸ್ಬೇನ್ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 24 ಆಗುವಷ್ಟರಲ್ಲಿ ಹೀಸ್ಲೆಟ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಕಟ್ಟಿಂಗ್ ಕೂಡ 22 ರನ್ಗಳಿಸಿ ಹೊರನಡೆದರು. ತಂಡದ ಮೊತ್ತ 83 ಆಗಿದ್ದ ವೇಳೆ ನಾಯಕ ಕ್ರಿಸ್ ಲಿನ್ (34) ಕೂಡ ಕ್ಯಾಚ್ ನೀಡಿ ಹೊರನಡೆದರು.
ಒಂದು ಹಂತದಲ್ಲಿ ಒತ್ತಡಕ್ಕೆ ಒಳಗಾದ ಬ್ರಿಸ್ಬೇನ್ ತಂಡದ ಜವಾಬ್ದಾರಿ ಸಂಪೂರ್ಣ ಡಿವಿಲಿಯರ್ಸ್ ಹೆಗಲೇರಿತ್ತು. ಮೊದಲ 10 ಎಸೆತಗಳಲ್ಲಿ ಕೇವಲ 7 ರನ್ಗಳಿಸಿದ್ದ ಎಬಿಡಿ ನಿಧಾನಕ್ಕೆ ಬ್ಯಾಟಿಂಗ್ ವರಸೆ ಬದಲಿಸಿದರು. ಮೆಲ್ಬೋರ್ನ್ ಬೌಲರುಗಳ ಮೇಲೆ ಬ್ಯಾಟ್ ಪ್ರಹಾರ ನಡೆಸಲು ಆರಂಭಿಸಿದರು. ಪರಿಣಾಮ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು.
ಇನ್ನು ಕೊನೆಯ ನಾಲ್ಕು ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಡಿವಿಲಿಯರ್ಸ್ 37 ಎಸೆತಗಳಲ್ಲಿ 71 ರನ್ಗಳಿಸಿದರು. ಈ ಅಮೋಘ ಇನಿಂಗ್ಸ್ನಲ್ಲಿ 2 ಭರ್ಜರಿ ಹಾಗೂ 6 ಸಿಡಿಲಬ್ಬರದ ಸಿಕ್ಸರ್ಗಳು ಮೂಡಿಬಂದಿದ್ದವು. ಹಾಗೆಯೇ ನಿಗದಿತ 20 ಓವರ್ಗಳಲ್ಲಿ ಬ್ರಿಸ್ಬೇನ್ ತಂಡವು 186 ರನ್ಗಳಿಸುವಂತಾಯಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ 17.4 ಓವರ್ನಲ್ಲಿ 115 ರನ್ಗಳಿಸಿ ಸರ್ವಪತನ ಕಂಡಿತು. ಅದ್ಭುತ ಇನಿಂಗ್ಸ್ ಆಡಿದ ಎಬಿ ಡಿವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಕಂಬ್ಯಾಕ್ ಸೂಚನೆ ನೀಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಎಬಿ ಡಿವಿಲಿಯರ್ಸ್ರನ್ನು ಮತ್ತೆ ತಂಡಕ್ಕೆ ಕರೆತರುವ ಯತ್ನದಲ್ಲಿದ್ದಾರೆ. ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಎಬಿಡಿಯನ್ನು ಚುಟುಕು ಕ್ರಿಕೆಟ್ಗೆ ಆಯ್ಕೆ ಮಾಡಲು ಉತ್ಸುಕರಾಗಿದ್ದು, ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ 2020 T20 ವಿಶ್ವಕಪ್ನಲ್ಲಿ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯಲಿದ್ದಾರೆ. ಅದಕ್ಕಾಗಿ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ ಆಟಗಾರನಿಗೆ ಐಪಿಎಲ್ ಆಡಬೇಡ ಎಂದ ಮಾಜಿ ನಾಯಕ
ಈ ನಡುವೆ ಅಂತರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ ಮರಳುವ ಭರವಸೆಯನ್ನೂ ಡಿವಿಲಿಯರ್ಸ್ ನೀಡಿದ್ದಾರೆ. ಇದೀಗ ಅದಕ್ಕೆ ಪೂರ್ವಭಾವಿ ತಯಾರಿ ಎಂಬಂತೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ನಲ್ಲಿ ಎಬಿಡಿ ಅಬ್ಬರಿಸಿದ್ದಾರೆ.