(VIDEO): 120 ಎಸೆತಗಳಲ್ಲಿ 215 ರನ್​; ಎಬಿಡಿ ಬ್ಯಾಟ್​​ನಿಂದ ಸಿಡಿದಿದ್ದು 9 ಅಮೋಘ ಸಿಕ್ಸ್​

ಎದುರಾಳಿ ಬೌಲರ್​ಗಳ ಎಸೆದ ಚೆಂಡನ್ನು ಮನಬಂದಂತೆ ಚಚ್ಚಿದ ಎಬಿಡಿ ಕೇವಲ 35 ಎಸೆತಗಳಲ್ಲಿ 1 ಬೌಂಡರಿ ಹಾಗೂ 9 ಅಮೋಘ ಸಿಕ್ಸ್​ ಸಿಡಿಸಿ ಅಜೇಯ 88 ರನ್ ಚಚ್ಚಿದ್ದಾರೆ.

Vinay Bhat | news18
Updated:August 5, 2019, 7:46 PM IST
(VIDEO): 120 ಎಸೆತಗಳಲ್ಲಿ 215 ರನ್​; ಎಬಿಡಿ ಬ್ಯಾಟ್​​ನಿಂದ ಸಿಡಿದಿದ್ದು 9 ಅಮೋಘ ಸಿಕ್ಸ್​
ಎಬಿ ಡಿವಿಲಿಯರ್ಸ್​
Vinay Bhat | news18
Updated: August 5, 2019, 7:46 PM IST
ಬೆಂಗಳೂರು (ಆ. 05): ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿದ ಬಳಿಕವೂ ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​​ ಅಬ್ಬರ ನಿಂತಿಲ್ಲ. ಸದ್ಯ ಸಾಗುತ್ತಿರುವ ಇಂಗ್ಲೆಂಡ್​ನ ಟಿ-20 ಬ್ಲಾಸ್ಟ್​​ನಲ್ಲಿ ಎಬಿಡಿ ಮಿಂಚು ಹರಿಸುತ್ತಿದ್ದಾರೆ.

ಮಿಡ್ಲ್​ಸೆಕ್ಸ್​ ತಂಡದ ಪರ ಆಡುತ್ತಿರುವ ಡಿವಿಲಿಯರ್ಸ್​​ 4 ಪಂದ್ಯಗಳಲ್ಲಿ 189 ರನ್​ ಸಿಡಿಸಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದಾರೆ. ಅದರಲ್ಲು ನಿನ್ನೆ ನಡೆದ ಸಮ್​ರೆಸ್ಟ್​​ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಬೌಲರ್​ಗಳ ಎಸೆದ ಚೆಂಡನ್ನು ಮನಬಂದಂತೆ ಚಚ್ಚಿದ ಎಬಿಡಿ ಕೇವಲ 35 ಎಸೆತಗಳಲ್ಲಿ 1 ಬೌಂಡರಿ ಹಾಗೂ 9 ಅಮೋಘ ಸಿಕ್ಸ್​ ಸಿಡಿಸಿ ಅಜೇಯ 88 ರನ್ ಚಚ್ಚಿದ್ದಾರೆ.

 




ಬಿಗ್ಗೆಸ್ಟ್​​ ಬಾಸ್ ಜೊತೆ ಕಿಂಗ್ ಕೊಹ್ಲಿ; ವೈರಲ್ ಆಗುತ್ತಿದೆ ಫೋಟೋ

ಇವರ ಸ್ಫೋಟಕ ಆಟದ ನೆರವಿನಿಂದ ಮಿಡ್ಲ್​ಸೆಕ್ಸ್​ ತಂಡ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿತು. ಆದರೆ, ಈ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಸಮ್​ರೆಸ್ಟ್​ ತಂಡ 17.2 ಓವರ್​ಗಳಲ್ಲೇ 180 ರನ್​ಗೆ ಆಲೌಟ್ ಆಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದರು ಎಬಿಡಿ ತಮ್ಮ ಅಭಿಮಾನಿಗಳಿಗೆ ವಿದೇಶಿ ಲೀಗ್​ ಮೂಲಕ ಮನರಂಜನೆ ನೀಡುತ್ತಿದ್ದಾರೆ.

First published:August 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...