ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ (Ab de villiers) ವೇಗಿಯೊಬ್ಬರನ್ನು ಎದುರಿಸಲು ಭಯಪಟ್ಟಿದ್ರಾ? ಇಂತಹದೊಂದು ಚರ್ಚೆಯನ್ನು ಹುಟ್ಟುಹಾಕಿರುವುದು ಪಾಕ್ ವೇಗಿ ಶೊಯೇಬ್ ಅಖ್ತರ್ (Shoaib Akhtar). ಹೌದು, ಪಾಕಿಸ್ತಾನ ವೇಗಿ ಮೊಹಮ್ಮದ್ ಆಸಿಫ್ ವಿರುದ್ಧ ಆಡುವಾಗ ಎಬಿ ಡಿವಿಲಿಯರ್ಸ್ ಅಳುತ್ತಿದ್ದರು ಎಂದು ಅಖ್ತರ್ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿ ಶೊಯೇಬ್ ಅಖ್ತರ್, ಎಬಿಡಿ ಆಫಿಸ್ ಎಸೆತವನ್ನು ಎದುರಿಸಲು ಭಯ ಪಡುತ್ತಿದ್ದರು. ಅವರನ್ನು ಎದುರಿಸುವಾಗ ಅಳುತ್ತಿದ್ದರು. ಹಾಗೆಯೇ ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರೂ ಸಹ ಆಸಿಫ್ ಬೌಲಿಂಗ್ ವೇಳೆ ಪರದಾಡುತ್ತಿದ್ದರು. ಲಕ್ಷ್ಮಣ್ಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ.
ನನ್ನ ಪ್ರಕಾರ ವಾಸಿಮ್ ಅಕ್ರಮ್‌ಗಿಂತಲೂ ಅತ್ಯುತ್ತಮ ಬೌಲರ್ ಮೊಹಮ್ಮದ್ ಆಸಿಫ್. ಆಸಿಫ್ ಎದುರಿಸುವಾಗ ಬ್ಯಾಟ್ಸ್‌ಮನ್‌ಗಳು ಅಳುತ್ತಿರುವುದನ್ನು ನಾನು ನಿಜವಾಗಿ ನೋಡಿದ್ದೇನೆ. ಒಮ್ಮೆ ಲಕ್ಷ್ಮಣ್ 'ಈತನನ್ನು ನಾನು ಹೇಗೆ ಎದುರಿಸಲಿ' ಎಂದು ಹೇಳಿದ್ದರು. ಎಬಿ ಡಿವಿಲಿಯರ್ಸ್ ಏಷ್ಯನ್ ಟೆಸ್ಟ್ ಚಾಂಪಿಯನ್‌ಶಿಪ್ ಸಮಯದಲ್ಲಿ ಅಕ್ಷರಶಃ ಕಣ್ಣೀರಿಡುತ್ತಿರುವುದು ನಾನು ನೋಡಿದ್ದೆ ಅಖ್ತರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ