2021ರ ಮೊದಲ ಸಿಕ್ಸ್ ಸಿಡಿಸಿದ್ದು ಯಾರು? ಮೊದಲ ಸೋಲು ಯಾರಿಗೆ?

ಈ ಪಂದ್ಯದಲ್ಲಿ ಫಿಂಚ್ ನೇತೃತ್ವದ ರೆನೆಗೇಡ್ಸ್ 17 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್​ಗಳಿಸಿತ್ತು. ಇದೇ ವೇಳೆ ಮಳೆ ಬಂದಿದ್ದರಿಂದ, ಬಳಿಕ ಎರಡನೇ ಇನಿಂಗ್ಸ್​ಗೆ ಅವಕಾಶ ನೀಡಲಾಗಿತ್ತು.

Aaron Finch

Aaron Finch

 • Share this:
  ನೂತನ ವರ್ಷದ ಆಗಮನವಾಗಿದೆ. ಈ ವರ್ಷ ಕೂಡ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ರಸದೌತಣ ಸಿಗಲಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ 2021 ಕ್ರಿಕೆಟ್ ಹಬ್ಬ ಎಂದರೆ ತಪ್ಪಾಗಲಾರದು. ಏಕೆಂದರೆ ಬ್ಯಾಕ್ ಟು ಬ್ಯಾಕ್ ಭಾರತದಲ್ಲಿ ಸರಣಿ ನಡೆಯಲಿದ್ದು, ಅದರ ನಡುವೆ ಐಪಿಎಲ್ ಹಾಗೂ ಟಿ20 ವಿಶ್ವಕಪ್ ಕೂಡ ಜರುಗಲಿದೆ. ಇನ್ನು ನೂತನ ವರ್ಷದಲ್ಲಿ ಮೊದಲ ಪಂದ್ಯವನ್ನು ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಲಾಗಿದೆ.

  ಬಿಬಿಎಲ್​ನಲ್ಲಿ ನಡೆದ ಸಿಡ್ನಿ ಥಂಡರ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್​ ನಡುವಣ ಪಂದ್ಯದ 2ನೇ ಓವರ್​ನಲ್ಲೇ ಸಿಕ್ಸರ್ ಮೂಡಿಬಂತು. ಇದು ಈ ವರ್ಷದ ಮೊದಲ ಸಿಕ್ಸ್. ಇದನ್ನು ಬಾರಿಸಿದ್ದು ರೆನೆಗೇಡ್ಸ್ ತಂಡದ ಆರಂಭಿಕ ಆಟಗಾರ ಆರೋನ್ ಫಿಂಚ್.

  ವೇಗದ ಬೌಲರ್ ಕ್ರಿಸ್ ಟ್ರೆಮೈನ್ ಅವರ ಎಸೆತವನ್ನು ಲಾಂಗ್-ಆನ್ ಮೇಲೆ ಫಿಂಚ್ ಬಾರಿಸುವ ಮೂಲಕ 2021 ವರ್ಷದ ಮೊದಲ ಸಿಕ್ಸ್ ಸಿಡಿಸಿದ ಕೀರ್ತಿಗೆ ಪಾತ್ರರಾದರು. ಇನ್ನು ಮೊದಲ ವಿಕೆಟ್ ಪಡೆದಿರುವುದು ಸಿಡ್ನಿ ಥಂಡರ್​ ವೇಗಿ ಮೆಕ್​ಆ್ಯಂಡ್ರೊ. ಅದು ಕೂಡ ಫಿಂಚ್​ದ್ದು ಎಂಬುದು ವಿಶೇಷ. ಅಂದರೆ ಮೊದಲ ಸಿಕ್ಸ್ ಸಿಡಿಸಿದ ಫಿಂಚ್ ವರ್ಷದ ಮೊದಲ ವಿಕೆಟ್ ಆಗಿ ನಿರ್ಗಮಿಸಿದರು.

  ಇನ್ನು ಈ ಪಂದ್ಯದ 12ನೇ ಓವರ್​ನಲ್ಲಿ ಮಳೆ ಬಂದಿದ್ದರಿಂದ 17 ಓವರ್​ಗಳಿಗೆ ಕಡಿತಗೊಳಿಸಲಾಯಿತು. ಅದರಂತೆ ಫಿಂಚ್ ನೇತೃತ್ವದ ರೆನೆಗೇಡ್ಸ್ 17 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್​ಗಳಿಸಿತು. ಡಕವರ್ಥ್ ಲೂಯಿಸ್ ನಿಯಮದ ಪ್ರಕಾರ 17 ಓವರ್​ನಲ್ಲಿ 173 ರನ್​ಗಳ ಗುರಿ ಪಡೆದ ಸಿಡ್ನಿ ಥಂಡರ್​ ತಂಡಕ್ಕೆ ಉಸ್ಮಾನ್ ಖ್ವಾಜಾ ಹಾಗೂ ಅಲೆಕ್ಸ್ ಹೇಲ್ಸ್ ಸ್ಪೋಟಕ ಆರಂಭ ಒದಗಿಸಿದ್ದರು.  ಕೇವಲ 4 ಓವರ್​ನಲ್ಲಿ ಈ ಜೋಡಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದ್ದರು. ಇನ್ನು 12 ಓವರ್​ ವೇಳೆ 2 ವಿಕೆಟ್ ನಷ್ಟಕ್ಕೆ 117 ರನ್​ಗಳಿಸಿದ್ದ ವೇಳೆ ಮತ್ತೊಮ್ಮೆ ಮಳೆ ಸುರಿಯಲಾರಂಭಿಸಿತು. ಕೊನೆಗೆ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗದ ಕಾರಣ ಡಕ್​ವರ್ಥ್ ನಿಯಮದ ಪ್ರಕಾರ ಸಿಡ್ನಿ ಥಂಡರ್ ತಂಡವನ್ನು 7 ರನ್​ಗಳಿಂದ ವಿಜಯಿ ಎಂದು ಘೋಷಿಸಲಾಯಿತು. ಇದರೊಂದಿಗೆ 2021ರ ಮೊದಲ ಪಂದ್ಯದ ಗೆದ್ದ ಶ್ರೇಯಸ್ಸು ಸಿಡ್ನಿ ಥಂಡರ್ ಪಾಲಾದರೆ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಿದ್ದು ಮಾತ್ರ ಡಕ್​ವರ್ಥ್ ನಿಯಮ.
  Published by:zahir
  First published: