news18-kannada Updated:February 11, 2020, 12:12 PM IST
ಮನೀಶ್ ಪಾಂಡೆ ಹಾಗೂ ಕೆ ಎಲ್ ರಾಹುಲ್.
ಮೌಂಟ್ ಮೌಂಗಾನುಯ್ (ಫೆ. 11): ಇಲ್ಲಿನ ಬೇ ಓವೆಲ ಕ್ರೀಡಾಂಗಣದಲ್ಲಿ ಸಾಗುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 296 ರನ್ ಬಾರಿಸಿದೆ. ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದರೆ, ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆ ಅತ್ಯುತ್ತಮ ಆಟ ಪ್ರದರ್ಶಿಸಿದರು.
ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿದ್ದಿ ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್. ಅಯ್ಯರ್ 63 ಎಸೆತಗಳಲ್ಲಿ 62 ರನ್ ಗಳಿಸಿ ಔಟ್ ಆದರು. ಬಳಿಕ ಶುರುವಾಗಿದ್ದು ಕನ್ನಡಿಗರಿಬ್ಬರ ಆಟ.

ಕೆ ಎಲ್ ರಾಹುಲ್.
ಮನೀಶ್ ಪಾಂಡೆ ಜೊತೆಯಾದ ಕೆ ಎಲ್ ರಾಹುಲ್ ತಂದ ಮೊತ್ತವನ್ನು 250ರ ಗಡಿ ದಾಟಿಸಿ ಅಮೋಗ ಜೊತೆಯಾಟ ಆಡಿದರು. ಈ ನಡುವೆ ಈ ಇಬ್ಬರು ಆಟಗಾರರು ಕನ್ನಡದಲ್ಲೇ ಪರಸ್ಪರ ಮಾತನಾಡಿಕೊಂಡಿರುವುದು ಸ್ಟಂಪ್ ಮೈಕ್ನಲ್ಲಿ ದಾಖಲಾಗಿದೆ.
NZ vs IND, 3rd ODI LIVE: ಕಿವೀಸ್ ವಿರುದ್ಧ ಕನ್ನಡಿಗರ ಆಟ; ರಾಹುಲ್ ಭರ್ಜರಿ ಶತಕ; ಭಾರತ 296/7
ಮನೀಶ್ ಪಾಂಡೆ ಎರಡು ರನ್ಗೆಂದು ಓಡಲು ಬಯಿಸಿದಾಗ ನಾನ್ ಸ್ಟ್ರೈಕ್ನಲ್ಲಿದ್ದ ಕೆ. ಎಲ್ ರಾಹುಲ್ ಪಾಂಡೆಗೆ 'ಬೇಡ ಬೇಡ' ಎಂದು ಜೋರಾಗಿ ಕೂಗಿ ಹೇಳುತ್ತಾರೆ. ಇದು ಸ್ಟಂಪ್ ಮೈಕ್ನಲ್ಲಿ ಕೇಳಿದ್ದು, ಕನ್ನಡದ ಅಭಿಮಾನಿಗಳು ಖುಷಿಯಾಗಿದ್ದಾರೆ.
ICC U19 World Cup: ಫೈನಲ್ನಲ್ಲಿ ಆಟಗಾರರ ಜಗಳ; ಬಾಂಗ್ಲಾ 3, ಭಾರತದ ಇಬ್ಬರು ಸ್ಟಾರ್ ಆಟಗಾರರ ವಿರುದ್ಧ ಕ್ರಮ!
ಈ ವಿಚಾರವನ್ನು ಕರ್ನಾಟಕ ರಣಜಿ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕೆ. ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಇಬ್ಬರೂ ಉತ್ತಮ ಸ್ನೇಹಿತರು. ಇವರು ಜೊತೆಯಾಗಿ ಕರ್ನಾಟಕಕ್ಕೆ ಅದೆಷ್ಟೋ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಜೋಡಿ 107 ರನ್ಗಳ ಜೊತೆಯಾಟ ಆಡಿತು.
ರಾಹುಲ್ 113 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಿಡಿಸಿ 112 ರನ್ ಚಚ್ಚಿದರೆ, ಪಾಂಡೆ 51 ಎಸೆತಗಳಲ್ಲಿ 55 ರನ್ ಬಾರಿಸಿದರು. ಅಯ್ಯರ್ 63 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 62 ರನ್ ಗಳಿಸಿದರು.
First published:
February 11, 2020, 11:45 AM IST