ಭಾರತ-ಆಸ್ಟ್ರೇಲಿಯಾ ವಿಶ್ವಕಪ್​ ಪಂದ್ಯದ ವೇಳೆ ‘ಚುರುಮುರಿ’; ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವಿಡಿಯೋ

ಚುರುಮುರಿ ಮಾಡುವುದನ್ನು ಅಂಗೂಸ್​ ತಿಳಿದುಕೊಂಡಿದ್ದು ಭಾರತದಲ್ಲೇ. ಆತ ಕೋಲ್ಕತ್ತಾ ಬಂದಾಗ ಇದನ್ನು ಮಾಡುವುದನ್ನು ಕಲಿತಿದ್ದ. ಈ ವಿಚಾರವನ್ನು ಆತನೇ ಹೇಳಿಕೊಂಡಿದ್ದಾನೆ.

ಇಂಗ್ಲೆಂಡ್​ನಲ್ಲಿ ಚುರುಮುರಿ

ಇಂಗ್ಲೆಂಡ್​ನಲ್ಲಿ ಚುರುಮುರಿ

  • News18
  • Last Updated :
  • Share this:
ಹೊರ ದೇಶಕ್ಕೆ ತೆರಳಿದಾಗ ನಮ್ಮ ಊರಿನ ತಿಂಡಿ ಸಿಕ್ಕರೆ ಆಗುವ ಖುಷಿಯೇ ಬೇರೆ. ಭಾರತ-ಆಸ್ಟ್ರೇಲಿಯಾ ಪಂದ್ಯ ನೋಡಲು ತೆರಳಿದ ಅನೇಕರಿಗೆ ತಿಂಡಿ ವಿಚಾರದಲ್ಲಿ ಅಚ್ಚರಿ ದೊರೆತಿದೆ! ಏಕೆಂದರೆ ಮೈದಾನದ ಹೊರಗೆ ಇಂಗ್ಲೆಂಡ್​ನ ವ್ಯಕ್ತಿಯೋರ್ವ ಚುರುಮುರಿ ಮಾರಾಟ ಮಾಡುತ್ತಿದ್ದ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂಗೂಸ್​ ಡೆನೂಸ್​ ಹೆಸರಿನ ವ್ಯಕ್ತಿ ಮೈದಾನದ ಹೊರಗೆ ಅಂಗಡಿ ಇಟ್ಟಿದ್ದ. ಅಂಗೂಸ್​ ಅಂಗಡಿಯ ಹೆಸರು ‘ಜಲ್ಮುರಿ ಎಕ್ಸ್​ಪ್ರೆಸ್​’. ಉತ್ತರ ಭಾರತದ ಭಾಗದಲ್ಲಿ ಚುರುಮುರಿ ಎಂದು ಕರೆಯುತ್ತಾರೆ. ಈ ಅಂಗಡಿ ನೋಡುತ್ತಿದ್ದಂತೆ ಭಾರತೀಯರು ಅಚ್ಚರಿಗೊಂಡಿದ್ದರು. ನಾ ಮುಂದು, ತಾಮುಂದು ಎಂದು ಚುರುಮುರಿ ತಿನ್ನಲು ಮುಂದೆ ಬಂದಿದ್ದರು.

ಚುರುಮುರಿ ಮಾಡುವುದನ್ನು ಅಂಗೂಸ್​ ತಿಳಿದುಕೊಂಡಿದ್ದು ಭಾರತದಲ್ಲೇ. ಆತ ಕೋಲ್ಕತ್ತಾ ಬಂದಾಗ ಇದನ್ನು ಮಾಡುವುದನ್ನು ಕಲಿತಿದ್ದ. ಭಾರತೀಯರಿಗೆ ಈ ತಿಂಡಿ ಪ್ರಿಯ ಎನ್ನುವ ಕಾರಣಕ್ಕೆ ಲಂಡನ್​ನಲ್ಲಿ ಈತ ಚುರುಮುರಿ ಅಂಗಡಿಯನ್ನೇ ತೆರೆದಿದ್ದಾನೆ! ಒಂದು ಚುರುಮುರಿಗೆ 3.50 ಪೌಂಡ್​ ಅಂದರೆ 310 ರೂಪಾಯಿ !First published: