800 Movie: ಮುರಳೀಧರನ್ ಬಯೋಪಿಕ್​ನಲ್ಲಿ ಸೇತುಪತಿ ಜೊತೆ ಮತ್ತೊಬ್ಬ ಸ್ಟಾರ್ ನಟ

ಈ ಚಿತ್ರದಲ್ಲಿ ಮುರಳೀಧರನ್ ಪಾತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಪಕ್ಕಾ ಆಗಿದ್ದು ಸೇತುಪತಿ ಮುರಳೀಧರನ್ ಅವರ ರೋಲ್​ನಲ್ಲಿ ಮಿಂಚಲಿದ್ದಾರೆ.

ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್ ಹಾಗೂ ಯೋಗಿ ಬಾಬು.

ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್ ಹಾಗೂ ಯೋಗಿ ಬಾಬು.

  • Share this:
    ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಅನೇಕ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳನ್ನು ಬೆಳ್ಳಿಪರದೆ ಮೇಲೆ ಬಂದಿವೆ. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ, ಬಾಕ್ಸಿಂಗ್ ತಾರೆ ಮೇರಿ ಕೋಮ್ ಹೀಗೆ ಖ್ಯಾತ ಕ್ರೀಡಾಪಟುಗಳ ಜೀವನ ಸಿನಿಮಾವಾಗಿ ಮಾರ್ಪಟ್ಟಿವೆ.

    ಅಲ್ಲದೆ ಕಪಿಲ್ ದೇವ್ ಬಗ್ಗೆ ಸಿನಿಮಾ 83 ಬಿಡುಗಡೆಗೆ ತಯಾರಾಗಿದೆ. ಸೈನಾ ನೆಹ್ವಾಲ್ ಕುರಿತ ಸಿನಿಮಾ ಕೂಡ ರೆಡಿಯಾಗುತ್ತಿದೆ. ಇದರ ಜೊತೆಗೆ ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ಜೀವನ ಆಧರಿತ ಸಿನಿಮಾ ಸಹ ತಯಾರಾಗುವ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತದೆ.

    VIDEO: ಕೊಹ್ಲಿ ಬಳಿ ಸೆಲ್ಫಿ ಕೇಳಿದ ಹುಡುಗಿಗೆ ಕಾದಿತ್ತು ಶಾಕ್; ಅಚ್ಚರಿ ಮೂಡಿಸಿದ ವಿರಾಟ್ ನಡೆ

    ಇದೇ ಸಾಲಿಗೆ ವಿಶ್ವ ಕ್ರಿಕೆಟ್​ನ ಮತ್ತೊಬ್ಬ ದಿಗ್ಗಜನ ಸಿನಿಮಾವೊಂದು ಸೆಟ್ಟೇರುವ ಲಕ್ಷಣ ದಟ್ಟವಾಗಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಕುರಿತಾದ ಚಿತ್ರ ನಿರ್ಮಿಸಲು ಕಾಲಿವುಡ್​ ಸಿನಿರಂಗದಲ್ಲಿ ಭರ್ಜರಿ ತಯಾರಿಗಳು ಆರಂಭವಾಗಿದೆ.

    ಟೆಸ್ಟ್ ಕ್ರಿಕೆಟ್​ನಲ್ಲಿ 800 ವಿಕೆಟ್ ಕಬಳಿಸಿರುವ ವಿಶ್ವದ ಮೊದಲ ಬೌಲರ್​ ಎನಿಸಿಕೊಂಡಿರುವ ಮುರಳೀಧರನ್ ಸುಮಾರು 18ವರ್ಷಕ್ಕೂ ಅಧಿಕ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದರು. ಇವರ ಸ್ಪಿನ್ ಮೋಡಿಯ ಕಥೆಯನ್ನು ಬೆಳ್ಳಿಪರದೆಯಲ್ಲಿ ಮೂಡಿಸಲು ತಯಾರಿ ನಡೆಸಲಾಗುತ್ತಿದೆ.

    ಈ ಚಿತ್ರದಲ್ಲಿ ಮುರಳೀಧರನ್ ಪಾತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಪಕ್ಕಾ ಆಗಿದ್ದು ಸೇತುಪತಿ ಮುರಳೀಧರನ್ ಅವರ ರೋಲ್​ನಲ್ಲಿ ಮಿಂಚಲಿದ್ದಾರೆ.

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಇನ್ನೂ ಮತ್ತಯ್ಯ ಮುರಳೀಧರನ್ ಕ್ರಿಕೆಟ್ ಆಡುತ್ತಿದ್ದಾಗ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ದೀರ್ಘಕಾಲದ ತಂಡದ ಸಹ ಆಟಗಾರ ರಸೆಲ್ ಅರ್ನಾಲ್ಡೊ ಅವರ ಪಾತ್ರವನ್ನು ಯೋಗಿ ಬಾಬು ನಿರ್ವಹಿಸಲಿದ್ದಾರೆ.

    ಬಹುಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ '800' ಎಂದು ಶೀರ್ಷಿಕೆ ಫೈನಲ್ ಮಾಡಲಾಗಿದೆ. ಟೆಸ್ಟ್​ನಲ್ಲಿ '800' ವಿಕೆಟ್ ಕಬಳಿಸಿರುವ ಏಕೈಕ ಬೌಲರ್​ ಆಗಿರುವ ಮುರುಳೀಧರನ್ ಈ  ಹಿಂದೆ '800' ನಂಬರ್​ನ ಜೆರ್ಸಿ ತೊಡುತ್ತಿದ್ದರು. ಹೀಗಾಗಿ ಅದನ್ನೇ ಶೀರ್ಷಿಕೆ ಮಾಡಲು ಮುಂದಾಗಿದ್ದಾರೆ.

    ಈ ಚಿತ್ರದಲ್ಲಿ ಕೇವಲ ಮುರುಳೀಧರನ್​ರ ಕ್ರಿಕೆಟ್ ಪಯಣವನ್ನು ಮಾತ್ರ ತೋರಿಸದೆ ಅವರ ಖಾಸಗಿ ಜೀವನ, ಕುಟುಂಬದ ಬಗ್ಗೆ ಸೇರಿ ಇಡೀ ಅವರ ಬದುಕನ್ನು ಈ ತೆರೆಮೇಲೆ ತರುವ ಪ್ರಯತ್ನ ಮಾಡುತ್ತೇವೆ ಎಂಬುದು ನಿರ್ದೇಶಕ ಸೇತು ಮಾಧವನ್ ಮಾತು.

    ಹರ್ಭಜನ್ vs ಸೈಮಂಡ್ಸ್: ಮಂಕಿಗೇಟ್ ಪ್ರಕರಣ ನೆನೆದು ಕೊರಗಿದ ಪಾಂಟಿಂಗ್

    ಮುತ್ತಯ್ಯ ಮುರಳೀಧರನ್ ಲಂಕಾ ಮೂಲದ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ಪತ್ನಿಯು ಚೆನ್ನೈ ಮೂಲದವರಾಗಿದ್ದು, ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ ಮೊದಲ ತಮಿಳು ಕ್ರಿಕೆಟಿಗ ಎಂಬ ಹೆಗ್ಗಳಿಕೆ ಕೂಡ ಮುರುಳೀಧರನ್​ ಅವರಿಗೆ ಸಲ್ಲುತ್ತದೆ.

    First published: