6, 6, 6, 6, 6: MS Dhoni ಸ್ಫೋಟಕ ಕಮ್​ಬ್ಯಾಕ್;​ ಒಂದೇ ಓವರ್​​ನಲ್ಲಿ 5 ಸಿಕ್ಸರ್; ಇಲ್ಲಿದೆ ವಿಡಿಯೋ

MS Dhoni Video: ಮಾರ್ಚ್​ 29 ರಂದು ಈ ರಂಗು ರಂಗಿನ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮುಖಾಮುಖಿ ಆಗುತ್ತಿದೆ.

ಎಂ. ಎಸ್ ಧೋನಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವುದು.

ಎಂ. ಎಸ್ ಧೋನಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವುದು.

  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಮೂರು ವಾರವಷ್ಟೆ ಬಾಕಿಯಿದೆ. ಅಭಿಮಾನಿಗಳು ತನ್ನ ನೆಚ್ಚಿನ ಆಟಗಾರನ ಸ್ಫೋಟಕ ಆಟಕ್ಕೆ ಕಾದುಕುಳಿತಿರುವುದು ಒಂದುಕಡೆಯಾದರೆ, ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವರೀತಿ ಕಮ್​ಬ್ಯಾಕ್ ಮಾಡುಲಿದ್ದಾರೆ ಎಂಬುದನ್ನು ನೋಡಲು ಇಡೀ ವಿಶ್ವವೇ ಹಾತೊರೆಯುತ್ತಿರುವುದು ಮತ್ತೊಂದು ಕಡೆ!

WATCH | MS Dhoni hits five consecutive sixes on his return to CSK camp
ಎಂ. ಎಸ್ ಧೋನಿ ಬ್ಯಾಟಿಂಗ್ ವೈಖರಿ.


ಅದರಂತೆ ಧೋನಿ ಈಗಾಗಲೇ ಚೆಪಾಕ್​ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಶುರುಮಾಡಿದ್ದಾರೆ. ಕೇವಲ ಧೋನಿ ಅಭ್ಯಾಸ ಮಾಡುತ್ತಿರುವುದನ್ನ ನೋಡಲೇ ಅಭಿಮಾನಿಗಳು ಸ್ಟೇಡಿಯಂಗೆ ಕ್ಕಿಕ್ಕಿರಿದು ಬರುತ್ತಿದ್ದಾರೆ.

Hardik Pandya | 20 SIXES: ಹಾರ್ದಿಕ್ ಪಾಂಡ್ಯ ಮತ್ತೊಂದು ಸ್ಫೋಟಕ ಆಟ; ಈ ಬಾರಿ ಸಿಡಿಸಿದ ರನ್ ಅಷ್ಟಿಟ್ಟಲ್ಲ!

ಈ ನಡುವೆ ಧೋನಿ ಬ್ಯಾಟಿಂಗ್ ಅಭ್ಯಾಸದಲ್ಲೇ ಅಬ್ಬರಿಸಿದ್ದಾರೆ. ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಭರ್ಜರಿ ಕಮ್​ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಸ್ಟಾರ್ ಸ್ಫೋರ್ಟ್ಸ್​​ ತಮಿಳು ಟ್ವಿಟ್ಟರ್ ಖಾತೆ ಧೋನಿಯ ಅಭ್ಯಾಸದ ವೇಳೆ ಸತತ 5 ಸಿಕ್ಸ್ ಬಾರಿಸಿರುವ ವಿಡಿಯೋವನ್ನು ಹಂಚಿಕೊಂಡಿದೆ.

 ಐಪಿಎಲ್​ನಲ್ಲಿ 38 ವರ್ಷದ ಧೋನಿ ಆಟವನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಮಾರ್ಚ್​ 29 ರಂದು ಈ ರಂಗು ರಂಗಿನ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮುಖಾಮುಖಿ ಆಗುತ್ತಿದೆ.

(VIDEO): ಭಾರತೀಯ ಸಂಸ್ಕೃತಿಯಂತೆ ಸೀರೆಯುಟ್ಟು ಕ್ರಿಕೆಟ್ ಆಡಿ ಫೈನಲ್​ಗೆ ವಿಶೇಷವಾಗಿ ಶುಭಕೋರಿದ ಮಿಥಾಲಿ!

ಧೋನಿ ಅವರು ಮಾರ್ಚ್​ 2 ರಿಂದಲೇ ಅಭ್ಯಾಸ ಶುರು ಮಾಡಿದ್ದಾರೆ. ಈ ಬಾರಿಯ ಐಪಿಎಲ್ ಧೋನಿಗೆ ಬಹಳ ಮುಖ್ಯವಾಗಿದೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ ಅಕ್ಟೋಬರ್​ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದರು.

ಇನ್ನೂ ಧೋನಿ ಜೊತೆ ಸುರೇಶ್ ರೈನಾ, ಅಂಬಟಿ ರಾಯುಡು, ಮುರಳಿ ವಿಜಯ್ ಸೇರಿ ಪ್ರಮಖ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

First published: