ಭರ್ಜರಿ ಫಾರ್ಮ್​ನಲ್ಲಿರುವ ಈ 5 ಆಟಗಾರರಿಗೆ ಟೀಂ ಇಂಡಿಯಾದಲ್ಲಿಲ್ಲ ಜಾಗ..!

ವರುಣ್ ಆರುಣ್ ಇಂಜುರಿಯಿಂದ ಗುಣಮುಖರಾದರು ಎಂಬೊತ್ತಿಗೆ ಭಾರತ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಯಂತಹ ಬೌಲರ್​ಗಳು ತಲೆಯೆತ್ತಿದ್ದರು. ಬಳಿಕ ವರುಣ್​​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲೇಯಿಲ್ಲ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • News18
  • Last Updated :
  • Share this:
ಬೆಂಗಳೂರು (ಆ. 11): ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ವಿಶ್ವಕಪ್​ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋತು ಸೆಮಿ ಫೈನಲ್ ಹಂತಕ್ಕೆ ತಲುಪಿತ್ತು. ಪ್ರಮುಖ ಸ್ಟಾರ್ ಆಟಗಾರರು ಭಾರತ ತಂಡವನ್ನು ಮುಂದಿನ ಹಂತಕ್ಕೆ ತಲುಪಿಸುತ್ತಿದ್ದಾರೆ. ಆದರೆ, ಈಗಾಗಲೇ ಟೀಂ ಇಂಡಿಯಾದಲ್ಲಿ ಆಡಿ ತಂಡದಿಂದ ಹೊರಬಿದ್ದಿರುವ ಪ್ರತಿಭಾವಂತ ಆಟಗಾರರಿಗೆ ಮಾತ್ರ ಆಯ್ಕೆ ಸಮಿತಿ ಮಣೆಹಾಕುತ್ತಿಲ್ಲ. ಸದ್ಯ ಭಾರತ ತಂಡದಿಂದ ಹೊರಗಿದ್ದು ಭರ್ಜರಿ ಫಾರ್ಮ್​ನಲ್ಲಿರುವ ಪ್ರಮುಖ ಐದು ಆಟಗಾರರನ್ನು ನೋಡುವುದಾದರೆ…

ಮನೋಜ್ ತಿವಾರಿ: ನ್ಯೂಜಿಲೆಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಹೇಗೋ ಅದೇರೀತಿ ಭಾರತದ ಮನೋಜ್ ತಿವಾರಿಯೂ ಎಂದು ಹೇಳಲಾಗಿತ್ತು. ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು ಭಾರತ ತಂಡದಲ್ಲಿ ಇವರಿಗೆ ಅವಕಾಶ ನೀಡಲಾಗುತ್ತಿಲ್ಲ. ಕಳೆದ ಐಪಿಎಲ್​ನಲ್ಲೂ ಯಾವೊಂದು ಫ್ರಾಂಚೈಸಿ ಇವರನ್ನು ಖರೀದಿಸಲು ಮುಂದೆಬಂದಿರಲಿಲ್ಲ. ಅಷ್ಟೇ ಏಕೆ ಉತ್ತಮ ಫಾರ್ಮ್​ನಲ್ಲಿದ್ದರೂ ಈ ವರ್ಷ ತಿವಾರಿಯನ್ನು ದುಲೀಪ್ ಟ್ರೋಫಿಗೂ ಆಯ್ಕೆ ಮಾಡಲಿಲ್ಲ. ಇದರಿಂದ ಬೇಸತ್ತ ತಿವಾರಿ ಆಯ್ಕೆ ಸಮಿತಿ ವಿರುದ್ಧ ಟ್ವೀಟ್​ಗಳ ಮಳೆಯೇ ಸುರಿಸಿದ್ದರು. ‘ಕೆವಲ ಆಯ್ಕೆ ಸಮಿತಿ ನನ್ನ ಕಡೆಗಣಿಸಿದ ಮಾತ್ರಕ್ಕೆ ನಾನು ಕ್ರಿಕೆಟ್​ನಿಂದ ನಿವೃತ್ತಿ ಆಗಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

 GT20 Canada 2019: ಪಾಕ್ ಕ್ರಿಕೆಟಿಗ ಮಲಿಕ್​ರಿಂದ ಸ್ಟೇಡಿಯಂ ಕಿಟಕಿ ಗಾಜುಗಳ ಪುಡಿಪುಡಿ; ವಿಡಿಯೋ ವೈರಲ್

ಭಾರತ ಪರ 12 ಏಕದಿನ ಪಂದ್ಯಗಳನ್ನು ಆಡಿರುವ ಇವರು 287 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ ಅರ್ಧಶತಕ ಬಾರಿಸಿದ್ದಾರೆ.

ಪಿಯೂಷ್ ಚಾವ್ಲಾ: 17 ವರ್ಷ ಪ್ರಾಯದಲ್ಲಿ ಕ್ರಿಕೆಟ್​ಗೆ ಕಾಲಿಟ್ಟ ಚಾವ್ಲಾ ಲೀಸ್ಟ್​ ಎ ನಲ್ಲಿ ಭಾರತ ಬಿ ಪರ  ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ ಹಾಗೂ ಯುವರಾಜ್ ಸಿಂಗ್​ರಂತಹ ಸ್ಟಾರ್ ಆಟಗಾರರ ವಿಕೆಟ್ ಕಿತ್ತು ಭಾರತ ತಂಡ ಆಯ್ಕೆಯಾದವರು. 2006 ರಲ್ಲಿ U-19 ವಿಶ್ವಕಪ್​ನಲ್ಲಿ ಮಿಂಚಿದವರು. ಬಳಿಕ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಖಾಯಂ ಸದಸ್ಯರಾಗಿದ್ದರು. 2011ರ ವಿಶ್ವಕಪ್​ ಗೆಲುವಿನ ತಂಡದಲ್ಲಿ ಕಾಣಿಸಿಕೊಂಡ ಚಾವ್ಲಾ 3 ಪಂದ್ಯಗಳನ್ನು ಆಡಿ 4 ವಿಕೆಟ್ ಪಡೆದಿದ್ದರು. ಬಳಿಕ ಕಳಪೆ ಫಾರ್ಮ್​​ಗೆ ಮರಳಿದ ಇವರು ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಆದರೆ, ಟೀಂ ಇಂಡಿಯಾದಲ್ಲಿ ಮಾತ್ರ ಸ್ಥಾನ ಸಿಗುತ್ತಿಲ್ಲ.

ದಿನೇಶ್ ಕಾರ್ತಿಕ್: ಭಾರತ ಕಂಡ ಪ್ರತಿಭಾನ್ವಿತ ಆಟಗಾರರ ಪೈಕಿ ದಿನೇಶ್ ಕಾರ್ತಿಕ್ ಪ್ರಮುಖರು. 2003-04 ರಲ್ಲಿ ರಣಜಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅದೆವರ್ಷ ಭಾರತ ತಂಡಕ್ಕೆ ಆಯ್ಕೆಯಾದರು. ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡ ಕಾರ್ತಿಕ್, ಎಂ ಎಸ್ ಧೋನಿ ಬಂದಮೇಲೆ ಅವಕಾಶವೇ ಸಿಗಲಿಲ್ಲ. 2007ರ ಟಿ-20 ವಿಶ್ವಕಪ್​ನಲ್ಲಿ ಸಿಕ್ಕ ಅವಕಾಶವನ್ನು ಉಪಯೋಗಿಸಿದ ಕಾರ್ತಿಕ್, ಬಳಿಕ ಭಾರತ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಮಾತ್ರ ಅವಕಾಶ ಕಲ್ಪಿಸಲಾಯಿತು. ಇತ್ತೀಚೆಗೆ 4ನೇ ಕ್ರಮಾಂಕದ ತೊಂದರೆಗೆ ಕಾರ್ತಿಕ್​ರನ್ನು ಪ್ರಯೋಗ ಮಾಡಲಾಯಿತಾದರು ವಿಫಲರಾದರು. ಸದ್ಯ ರಿಷಭ್ ಪಂತ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇವರು ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಬಹುದು.

ಸುರೇಶ್ ರೈನಾ: ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಮೊದಲ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಸುರೇಶ್ ರೈನಾ. ಆಲ್ರೌಂಡರ್ ಆಗಿ ಗುರುತಿಕೊಂಡ ರೈನಾ, ಧೋನಿ ನಾಯಕತ್ವದ ಅಡಿಯಲ್ಲಿ ಭಾರತ ಸ್ಟಾರ್ ಬ್ಯಾಟ್ಸ್​ಮನ್​ ಆಗಿ ಹೊರಹೊಮ್ಮಿದರು. ಟೆಸ್ಟ್​ ಕ್ರಿಕೆಟ್​ನಲ್ಲೂ ಉತ್ತಮ ಆಟ ಪ್ರದರ್ಶಿಸಿದರು. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಆಡಿದ್ದು ಇವರ ಕೊನೆಯ ಏಕದಿನ ಪಂದ್ಯ. ಸದ್ಯ ಯುವಕರಿಂದ ಕೂಡಿರುವ ಟೀಂ ಇಂಡಿಯಾದಲ್ಲಿ 32 ವರ್ಷ ಪ್ರಾಯದ ಸುರೇಶ್ ರೈನಾ ಸ್ಥಾನ ಪಡೆಯುವುದು ಕಷ್ಟ.

ವರುಣ್ ಆರುಣ್: ಟೀಂ ಇಂಡಿಯಾ ಬಲವಾಗುತ್ತದೆ ಎಂಬೊತ್ತಿದೆ ಕಾಲಿಟ್ಟ ವರುಣ್ ಆರುಣ್ 140 ವೇಗದಲ್ಲಿ ಬೌಲಿಂಗ್ ಮಾಡಿ ಎದುರಾಳಿಗರ ನಿದ್ದೆಕದ್ದಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡ ವರುಣ್ 24 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಭಾರತ ತಂಡಕ್ಕೆ ಮತ್ತೊಬ್ಬ ಉತ್ತಮ ಬೌಲರ್ ಸಿಕ್ಕ ಎಂಬೊತ್ತಿಗೆ ಇಂಜುರಿಗೆ ತುತ್ತಾದ ಇವರು ಸುಮಾರು ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದರು. ಆದರೆ, ಇಷ್ಟೊತ್ತಿದೆ ಭಾರತ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಯಂತಹ ಬೌಲರ್​ಗಳು ತಲೆಯೆತ್ತಿದ್ದರು. 4 ವರ್ಷಗಳ ಹಿಂದೆ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ವರುಣ್ ಕಳೆದ ಐಪಿಎಲ್​ನಲ್ಲಿ ರಾಜಸ್ಥಾನ್ ಪರ ಸ್ವಿಂಗ್ ಬೌಲಿಂಗ್ ಮೂಲಕ ಮೋಡಿ ಮಾಡಿದ್ದರು. ಸದ್ಯ ಇವರು ಟೀಂ ಇಂಡಿಯಾ ಸೇರಿಕೊಂಡರೆ ಭಾರತದ ಬೌಲಿಂಗ್ ಶಕ್ತಿ ಮತ್ತಷ್ಟು ಬಲಿಷ್ಠವಾಗಲಿದೆ.

First published: