(VIDEO): 4 ಸಿಕ್ಸರ್​, 3 ವಿಕೆಟ್; ಟಿ-20 ಕ್ರಿಕೆಟ್​ಗೆ ಸ್ಫೋಟಕ ಕಮ್​ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ

ಬೌಲಿಂಗ್​ನಲ್ಲೂ ಮಿಂಚಿದ ಪಾಂಡ್ಯ 3.4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ ಎದುರಾಳಿಯ ಪ್ರಮುಖ 3 ವಿಕೆಟ್ ಕಿತ್ತರು. ಬ್ಯಾಂಕ್ ಆಫ್ ಬರೋಡ ತಂಡ 125 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು.

news18-kannada
Updated:February 29, 2020, 11:10 AM IST
(VIDEO): 4 ಸಿಕ್ಸರ್​, 3 ವಿಕೆಟ್; ಟಿ-20 ಕ್ರಿಕೆಟ್​ಗೆ ಸ್ಫೋಟಕ ಕಮ್​ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ.
  • Share this:
ಇಂಜುರಿಯಿಂದಾಗಿ ಕಳೆದ ಐದು ತಿಂಗಳುಗಳಿಂದ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ಟಿ-20 ಕ್ರಿಕೆಟ್ ಮೂಲಕ ಸ್ಫೋಟಕ ಕಮ್​ಬ್ಯಾಕ್ ಮಾಡಿದ್ದು, ಬ್ಲೂ ಬಾಯ್ಸ್​ ಸೇರಿಕೊಳ್ಳುವ ತವಕದಲ್ಲಿದ್ದಾರೆ.

ಡಿವೈ ಪಾಟಿಲ್‌ ಟಿ-20 ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬ್ಯಾಂಕ್ ಆಫ್ ಬರೋಡ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಪಾಂಡ್ಯ, ರಿಲಯನ್ಸ್ 1 ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

4 sixes, 3 wickets: Hardik Pandya Makes Strong Return in DY Patil T20 Cup - WATCH
ಹಾರ್ದಿಕ್ ಪಾಂಡ್ಯ.


India vs New Zealand: 2ನೇ ಟೆಸ್ಟ್​ನಲ್ಲೂ ಕೊಹ್ಲಿ ಪಡೆಯ ಬ್ಯಾಟಿಂಗ್ ವೈಫಲ್ಯ; ಮೊದಲ ದಿನವೇ ಆಲೌಟ್

ಹಾರ್ದಿಕ್ ಕಳೆದ ಸೆಪ್ಟಂಬರ್​ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಬಳಿಕ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಸದ್ಯ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಫಿಟ್ನೆಸ್‌ ಕಂಡುಕೊಂಡಿರುವ ಪಾಂಡ್ಯ, ಟಿ-20 ಕ್ರಿಕೆಟ್‌ ಮೂಲಕ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ.

ಡಿವೈ ಪಾಟೀಲ್​ ಟಿ-20 ಪಂದ್ಯದಲ್ಲಿ ರಿಲಯನ್ಸ್ 1 ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಪಾಂಡ್ಯ, ಕೇವಲ​ 25 ಎಸೆತಗಳಲ್ಲಿ 4 ಸಿಕ್ಸ್ ಸಿಡಿಸಿ 38 ರನ್​ ಚಚ್ಚಿದರು. ಇವರ ಈ ಸ್ಫೋಟಕ ಆಟದ ನೆರವಿನಿಂದ ರಿಲಯನ್ಸ್ 1 ತಂಡ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿತು.

 


ಜೈಲಿನಲ್ಲಿದ್ದ ಖ್ಯಾತ ಕ್ರಿಕೆಟಿಗ ಕೊನೆಗೆ ತನ್ನ ವಕೀಲೆಯನ್ನೇ ಮದುವೆಯಾದ..!

ಬೌಲಿಂಗ್​ನಲ್ಲೂ ಮಿಂಚಿದ ಪಾಂಡ್ಯ 3.4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ ಎದುರಾಳಿಯ ಪ್ರಮುಖ 3 ವಿಕೆಟ್ ಕಿತ್ತರು. ಬ್ಯಾಂಕ್ ಆಫ್ ಬರೋಡ ತಂಡ 125 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು.

ಈ ಪಂದ್ಯದಲ್ಲಿ ಪಾಂಡ್ಯ ಜೊತೆಗೆ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಿಖರ್‌ ಧವನ್‌ ಮತ್ತು ಭುವನೇಶ್ವರ್‌ ಕುಮಾರ್‌ ಕೂಡ ಕಣಕ್ಕಿಳಿದರು.

 



ಮಾರ್ಚ್‌ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿ ಮೂಲಕ ಪಾಂಡ್ಯ ಟೀಂ ಇಂಡಿಯಾಗೆ ಸೇರಿಕೊಳ್ಳುವ ಅಂದಾಜಿದೆ.
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ