ಜೂನ್ 25, 1983, ಭಾರತೀಯ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆದ ಪ್ರುಡೆನ್ಶಿಯಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಮೂರನೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕಪಿಲ್ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಅವಿಸ್ಮರಣೀಯ ಗೆಲುವಿಗೆ ಇಂದು ಬರೋಬ್ಬರಿ 37 ವರ್ಷಗಳು ತುಂಬುತ್ತಿವೆ.
ಭಾರತದ ಕ್ರಿಕೆಟ್ ಚಿತ್ರ ಬದಲಾವಣೆಗೆ ಮುನ್ನುಡಿಯಾದ ದಿನವದು. ಆ ದಿನದ ಮೆಲುಕು ಹಾಕಿದರೆ ಭಾರತ ಕ್ರಿಕೆಟ್ ಪ್ರೇಮಿಗಳ ಮೈ ರೋಮಾಂಚನವಾಗುತ್ತದೆ. ಆಗಿನ ಕಾಲದಲ್ಲಿ ಕ್ರಿಕೆಟ್ ಸಾಮ್ರಾಜ್ಯವನ್ನಾಳುತ್ತಿದ್ದ ವಿಂಡೀಸ್ ತಂಡವನ್ನು ಭಾರತ ಮಣಿಸುತ್ತದೆ ಎಂದು ಆ ದಿನ ಯಾರು ಕೂಡ ಊಹಿಸಿರಲಿಲ್ಲ.
ಚೊಚ್ಚಲ ಪಂದ್ಯಕ್ಕೂ ಮುನ್ನವೇ ಗಂಗೂಲಿ-ದ್ರಾವಿಡ್ ಸಾಮರ್ಥ್ಯದ ಬಗ್ಗೆ ಸೂಚನೆ ನೀಡಿದ್ರು ಇಂಗ್ಲೆಂಡ್ ಬೌಲರ್..!
ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ವಿಂಡೀಸ್ ತಂಡದ ಕನಸನ್ನು ಭಾರತ ತಂಡ ನುಚ್ಚುನೂರು ಮಾಡಿದ ಆ ಕ್ಷಣಕ್ಕೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಸಾಕ್ಷಿಯಾಯಿತು. ಮೇಲಾಗಿ ಕಪಿಲ್ ದೇವ್ ಅವರ ವಿವೇಕಯುತ ಆಟ ಭಾರತೀಯ ಕ್ರಿಕೆಟ್ಗೆ ‘ಬರ್ಥ್ ಸರ್ಟಿಫಿಕೆಟ್’ ಅನ್ನೂ ನೀಡಿತು. ಈ ಮೂಲಕ ಮೊದಲ ವಿಶ್ವಕಪ್ ಹೆಜ್ಜೆ ಗುರುತು ಮೂಡಿಸಿತು.
ಇನ್ನೂ ಭಾರತ ವಿಶ್ವಕಪ್ ಗೆದ್ದ ಖುಷಿಗೆ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರು ವಿಶ್ವಕಪ್ ಗೆದ್ದ ಮರುದಿನ ದೇಶಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಿದ್ದರಂತೆ. ಸ್ವಾತಂತ್ರ್ಯ ದೊರಕಿದ ನಂತರ ಮೊದಲ ಬಾರಿಗೆ ವಿಶ್ವಕಪ್ ದೊರೆತಿದ್ದು ಭಾರತೀಯರ ಪಾಲಿಗೆ ತುಂಬಾನೆ ವಿಶೇಷವಾಗಿತ್ತು. ಇಂದಿರಾ ಗಾಂಧಿ ಕೂಡ ಕ್ರಿಕೆಟ್ ಪ್ರೇಮಿಯಾಗಿದ್ದು, ಈ ಮೂಲಕ ಅಪರೂಪದ ಗೆಲುವನ್ನು ವಿಶಿಷ್ಠವಾಗಿ ಸಂಭ್ರಮಿಸಿದ್ದರಂತೆ.
KL Rahul: ಈ ಸಲ ಕಪ್ ನಮ್ದೆ ನಿರೀಕ್ಷೆಯಲ್ಲಿ ರಾಹುಲ್ ಅ್ಯಂಡ್ ಟೀಮ್..!
60 ಓವರ್ಗಳ ಏಕದಿನ ವಿಶ್ವಕಪ್ ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರು. ವಿಂಡೀಸ್, ಭಾರತ ತಂಡವನ್ನು ಕೇವಲ 183 (54.4 ಓವರ್) ರನ್ಗಳಿಗೆ ಆಲೌಟ್ ಮಾಡಿತು. ಕೆರಿಬಿಯನ್ನರನ್ನು ಕೇವಲ 140 ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಭಾರತೀಯರು 43 ರನ್ಗಳ ಜಯ ದಾಖಲಿಸುವುದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ