Rohit Sharma: 33 ಫೋರ್, 9 ಸಿಕ್ಸ್​, 264 ರನ್ಸ್​; ರೋಹಿತ್ ಶರ್ಮಾ ವಿಶ್ವದಾಖಲೆಗೆ 5 ವರ್ಷ!

13-11-2014 ಈ ದಿನ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ರೋಹಿತ್ ಅವರ ದ್ವಿಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕ ನೆರವಿನಿಂದ ನಿಗದಿತ 50 ಓವರ್​ಗೆ 5 ವಿಕೆಟ್ ಕಳೆದುಕೊಂಡು 404 ರನ್ ಕಲೆಹಾಕಿತತು.

Vinay Bhat | news18-kannada
Updated:November 13, 2019, 12:30 PM IST
Rohit Sharma: 33 ಫೋರ್, 9 ಸಿಕ್ಸ್​, 264 ರನ್ಸ್​; ರೋಹಿತ್ ಶರ್ಮಾ ವಿಶ್ವದಾಖಲೆಗೆ 5 ವರ್ಷ!
ರೋಹಿತ್ ಶರ್ಮಾ
  • Share this:
ಬೆಂಗಳೂರು (ನ. 13): ಟೀಂ ಇಂಡಿಯಾದ ಹಿಟ್​ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ ಅವರಿಗೆ ಇಂದು ಮರೆಯಲಾಗದ ದಿನ. 13ನೇ ನವಂಬರ್ 2014 ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಿದರು.

173 ಎಸೆತಗಳಲ್ಲಿ ಬರೋಬ್ಬರಿ 33 ಬೌಂಡರಿ ಹಾಗೂ 9 ಸಿಕ್ಸ್​ನೊಂದಿಗೆ 264 ರನ್ ಸಿಡಿಸಿ ತನ್ನದೇ ದಾಖಲೆಯನ್ನು ರೋಹಿತ್​​ ಪುಡಿ ಮಾಡಿದ್ದರು. ಜೊತೆಗೆ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಗರಿಷ್ಠ ರನ್ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನೂ ಹಿಟ್​ಮ್ಯಾನ್ ತಮ್ಮದಾಗಿಸಿದ್ದರು. ಈ ರೋಚಕ ಕ್ಷಣ ಕಳೆದ ಇಂದಿಗೆ ಐದು ವರ್ಷವಾಗಿದೆ.

ಮೊದಲ 100 ರನ್ ಗಳಿಸಲು 100 ಬಾಲ್ ತೆಗದುಕೊಂಡ ರೋಹಿತ್, ನಂತರದ 164 ರನ್ ಬಾರಿಸಿದ್ದು ಕೇವಲ 73 ಎಸೆತಗಳಲ್ಲಿ ಎಂಬುದು ವಿಶೇಷ. ಐಸಿಸಿ, ರೋಹಿತ್ ಶರ್ಮಾ ದ್ವಿಶತಕದ ನೆನಪನ್ನು ಹಂಚಿಕೊಂಡಿದ್ದು, ಟ್ವಿಟ್ಟರ್​ನಲ್ಲಿ ವಿಭಿನ್ನವಾಗಿ ಹಂಚಿಕೊಂಡಿದೆ.



ಇದಕ್ಕೂ ಮುನ್ನ ರೋಹಿತ್ ಅವರು ಆಸ್ಟ್ರೇಲಿಯಾ ವಿರುದ್ಧ 209 ರನ್ ಬಾರಿಸಿ ಮೊದಲ ದ್ವಿಶತಕ ಗಳಿಸಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ 219 ರನ್ ಬಾರಿಸಿ ದ್ವಿತೀಯ ದ್ವಿಶತಕ ಹಾಗೂ 2017 ರ ಡಿಸೆಂಬರ್​ನಲ್ಲಿ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಅಜೇಯ 208 ರನ್ ಸಿಡಿಸಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಆಟಗಾರ ಎಂಬ ಸಾಧನೆಯನ್ನೂ ರೋಹಿತ್ ಮಾಡಿದ್ದಾರೆ.

 



13-11-2014 ಈ ದಿನ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ರೋಹಿತ್ ಅವರ ದ್ವಿಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕ ನೆರವಿನಿಂದ ನಿಗದಿತ 50 ಓವರ್​ಗೆ 5 ವಿಕೆಟ್ ಕಳೆದುಕೊಂಡು 404 ರನ್ ಕಲೆಹಾಕಿತತು.

ಈ ಬೃಹತ್ ಮೊತ್ತ ಬೆನ್ನತ್ತಿದ ಲಂಕನ್ನರು 251 ರನ್​ಗೆ ಆಲೌಟ್ ಆಗುವ ಮೂಲಕ, ಟೀಂ ಇಂಡಿಯಾ 153 ರನ್​ಗಳ ಭರ್ಜರಿ ಜಯಕಂಡಿತತು.
First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ