ಟೀಂ ಇಂಡಿಯಾದಿಂದ ಪಂತ್ ಔಟ್?; ರಿಷಭ್ ಜಾಗಕ್ಕೆ ಕಾದು ಕುಳಿತಿದ್ದಾರೆ 3 ವಿಕೆಟ್ ಕೀಪರ್ಸ್​​

ಸದ್ಯದ ಫಾರ್ಮ್​ ನೋಡುವಾಗ ರಿಷಭ್ ಪಂತ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಮ್ಯಾನೇಜ್​ಮೆಂಟ್ ಇವರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪಂತ್ ವಿಫಲರಾಗುತ್ತಿದ್ದರೆ.

Vinay Bhat | news18
Updated:August 6, 2019, 5:26 PM IST
ಟೀಂ ಇಂಡಿಯಾದಿಂದ ಪಂತ್ ಔಟ್?; ರಿಷಭ್ ಜಾಗಕ್ಕೆ ಕಾದು ಕುಳಿತಿದ್ದಾರೆ 3 ವಿಕೆಟ್ ಕೀಪರ್ಸ್​​
ರಿಷಭ್ ಪಂತ್
  • News18
  • Last Updated: August 6, 2019, 5:26 PM IST
  • Share this:
ಬೆಂಗಳೂರು (ಆ. 06): ರಿಷಭ್ ಪಂತ್ ಒಬ್ಬ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 21 ವರ್ಷ ಪ್ರಾಯದ ಪಂತ್ ಅವರು ಧೋನಿ ಬಳಿಕ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ಆಗಿ ಮಿಂಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಪಂತ್ ಈ ಸ್ಥಾನವನ್ನು ಬಲ ಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫಲವಾಗಿರುವ ಪಂತ್ ತಾಳ್ಮೆಯ ಆಟವನ್ನೇ ಮರೆತು ಬಿಟ್ಟಿದ್ದಾರೆ. ಕಳೆದ ನಾಲ್ಕು ಟಿ-20 ಪಂದ್ಯಗಳಲ್ಲಿ ಪಂತ್​ 3, 1, 0, 4 ರನ್ ಕಲೆಹಾಕಿದ್ದಾರಷ್ಟೆ. ಹೀಗಾಗಿ ಇವರ ಸ್ಥಾನಕ್ಕೆ ಟೀಂ ಇಂಡಿಯಾ ಹೊಸ ಆಟಗಾರನ ಮೊರೆಹೋಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಸದ್ಯ ಪಂತ್ ಜಾಗವನ್ನು ತುಂಬುವ ಮೂರು ಪ್ರಮುಖ ಆಟಗಾರರನ್ನು ನೋಡುವುದಾದರೆ…

ಇಶಾನ್ ಕಿಶನ್:

3 Wicketkeepers who are breathing down Rishabh Pant’s neck
ಇಶಾನ್ ಕಿಶನ್


21 ವರ್ಷದ ಇಶಾನ್ ಕಿಶನ್ ಸದ್ಯ ಭಾರತ ಎ ತಂಡದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸಾಕಷ್ಟು ಪ್ರತಿಭೆಯುಳ್ಳ ಕಿಶನ್ ಅಂತರಾಷ್ಟ್ರೀಯ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ 70 ಟಿ-20 ಪಂದ್ಯಗಳನ್ನಾಡಿರುವ ಕಿಶನ್ ಅತ್ಯುತ್ತಮ ವಿಕೆಟ್ ಕೂಡ ಹೌದು. ಅಲ್ಲದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಖಾಯಂ ಆಟಗಾರರಾಗಿದ್ದಾರೆ.

India vs West Indies 3rd T20I: ಭಾರತ ಪರ ಕಣಕ್ಕಿಳಿಯಲಿದ್ದಾರೆ 3 ಹೊಸ ಆಟಗಾರರು?

ಸಂಜು ಸ್ಯಾಮ್ಸನ್:
3 Wicketkeepers who are breathing down Rishabh Pant’s neck
ಸಂಜು ಸ್ಯಾಮ್ಸನ್


2019ರ ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು. ಇವರೊಬ್ಬ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ಎಂದು ಗೌತಮ್ ಗಂಭೀರ್ ಹೇಳಿದ್ದರು. ಆದರೆ, ಆಯ್ಕೆ ಸಮಿತಿ ಇವರನ್ನು ಕಡೆಗಣಿಸಿತ್ತು. ಭಾರತ ಪರ ಒಂದು ಅಂತರಾಷ್ಟ್ರೀಯ ಟಿ-20 ಪಂದ್ಯವನ್ನು ಇವರು ಆಡಿದ್ದಾರೆ. ಉತ್ತಮ ಫಾರ್ಮ್​ನಲ್ಲಿರುವ ಸ್ಯಾಮ್ಸನ್ ಕಳೆದ ಐಪಿಎಲ್​ನಲ್ಲಿ 342 ರನ್ ಕಲೆಹಾಕಿದ್ದರು.

ಅಂಕುಶ್ ಬೈನ್ಸ್​:

3 Wicketkeepers who are breathing down Rishabh Pant’s neck
ಅಂಕುಶ್ ಬೈನ್ಸ್


ಭಾರತ ಕ್ರಿಕೆಟ್ ತಂಡದಲ್ಲಿ ಅಂಕುಶ್ ಬೈನ್ಸ್​ ಹೆಸರು ಇಂದಿನ ದಿನಗಳಲ್ಲಿ ಅಷ್ಟೊಂದು ಪರಿಚಿತವಲ್ಲ. ಆದರೆ, ಇವರೊಬ್ಬರು ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​. 2014ರ ಅಂಡರ್-19 ವಿಶ್ವಕಪ್​ನಲ್ಲಿ ಅನೇಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ 36 ಟಿ-20 ಪಂದ್ಯಗಳನ್ನು ಆಡಿದ್ದು 736 ರನ್ ಕಲೆಹಾಕಿದ್ದಾರೆ. ಇತ್ತೀಚೆಗಷ್ಟೆ ನಡೆದ ಎಸ್​ಎಂಎ ಟ್ರೋಫಿಯಲ್ಲಿ ಅಂಕಿಶ್ ಹಿಮಾಚಲ ಪ್ರದೇಶ ತಂಡದ ಪರ 6 ಪಂದ್ಯಗಳಲ್ಲಿ 198 ರನ್ ಬಾರಿಸಿದ್ದರು. ಇದರಲ್ಲಿ 3 ಅರ್ಧಶತಕ ಕೂಡ ಗಳಿಸಿದ್ದರು.

ಒಟ್ಟಾರೆ ಸದ್ಯದ ಫಾರ್ಮ್​ ನೋಡುವಾಗ ರಿಷಭ್ ಪಂತ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಮ್ಯಾನೇಜ್​ಮೆಂಟ್ ಇವರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪಂತ್ ವಿಫಲರಾಗುತ್ತಿದ್ದರೆ. ಮುಂದಿನ ಪಂದ್ಯಗಳಲ್ಲೂ ಪಂತ್ ಇದೇರೀತಿ ಕಳಪೆ ಪ್ರದರ್ಶನ ತೋರಿದರೆ, ಈ ಹೊಸ ಪ್ರತಿಭೆಗಳು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ದಿನ ದೂರವಿಲ್ಲ ಎನ್ನಬಹುದು.
First published: August 6, 2019, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading