Video: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆ: ಶ್ರೀಲಂಕಾದ ಮೂವರು ಕ್ರಿಕೆಟಿಗರು ಅಮಾನತು..!

ಒಂದೆಡೆ ಅತ್ಯಂತ ಕೆಟ್ಟ ಪ್ರದರ್ಶನದಿಂದಾಗಿ ಲಂಕಾ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಲಂಕಾ ತಂಡ, ಇದೀಗ ಆಟಗಾರರ ವರ್ತನೆಯಿಂದ ಮತ್ತಷ್ಟು ಟೀಕೆಗೆ ಒಳಗಾಗಿದ್ದಾರೆ.

ಶ್ರೀಲಂಕಾ ಆಟಗಾರರು

ಶ್ರೀಲಂಕಾ ಆಟಗಾರರು

  • Share this:
    ಆತಿಥೇಯ ಇಂಗ್ಲೆಂಡ್ ವಿರುದ್ದ ಟಿ20 ಸರಣಿ ಸೋತು ಭಾರೀ ಟೀಕೆಗೆ ಗುರಿಯಾಗಿದ್ದ ಶ್ರೀಲಂಕಾ ತಂಡ ಇದೀಗ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ಹೀಗೆ ಸುದ್ದಿಯಾಗಲು ಕಾರಣ ತಂಡದಲ್ಲಿದ್ದ ಆಟಗಾರರ ವರ್ತನೆ. ಏಕೆಂದರೆ ಇಂಗ್ಲೆಂಡ್ ವಿರುದ್ದ 3ನೇ ಪಂದ್ಯ ಸೋತ ಬಳಿಕ ಲಂಕಾದ ಮೂವರು ಆಟಗಾರರು ಬಯೋಬಬಲ್​ ಉಲ್ಲಂಘಿಸಿ ನೈಟ್​ ಔಟ್​ಗೆ ತೆರಳಿದ್ದರು. ಅಷ್ಟೇ ಅಲ್ಲದೆ ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಹೀಗೆ ಬಯೋಬಬಲ್ ನಿಯಮ ಉಲ್ಲಂಘಿಸಿದ ಆಟಗಾರರನ್ನು ನಿರೋಶನ್ ಡಿಕ್ವೆಲ್ಲಾ, ಧುನುಷ್ಕ ಗುಣತಿಲ್ಕ ಹಾಗೂ ಕುಸಾಲ್ ಮೆಂಡಿಸ್ ಎಂದು ಗುರುತಿಸಲಾಗಿದೆ.

    ಈ ಮೂವರು ಕ್ರಿಕೆಟಿಗರು ಭಾನುವಾರ ರಾತ್ರಿ ಬಯೋಬಬಲ್ ನಿಯಮ ಉಲ್ಲಂಘಿಸಿ ನೈಟ್​ಔಟ್​ಗೆ ತೆರಳಿದ್ದರು. ಅಲ್ಲದೆ ಇದೇ ವೇಳೆ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಾಲ್ ಮೆಂಡಿಸ್ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸುತ್ತಿರುವ ದೃಶ್ಯವೊಂದನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದರು. ಅಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದರಿಂದ ಲಂಕಾ ಕ್ರಿಕೆಟಿಗರು ಬಯೋಬಬಲ್​ ಉಲ್ಲಂಘಿಸಿರುವ ವಿಷಯ ಬೆಳಕಿಗೆ ಬಂದಿದೆ.



    ಈ ಬಗ್ಗೆ ತನಿಖೆ ನಡೆಸಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಇದೀಗ ತಪ್ಪಿತಸ್ಥ ಮೂವರು ಕ್ರಿಕೆಟಿಗರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ ಏಕದಿನ ಸರಣಿಯಿಂದ ಇವರನ್ನು ಕೈ ಬಿಡಲಾಗಿದ್ದು, ಅದರಂತೆ ಲಂಕಾಗೆ ವಾಪಾಸ್ ಕರೆಸಿಕೊಳ್ಳಲು ನಿರ್ಧರಿಸಿದೆ. ಮೇಲ್ನೋಟಕ್ಕೆ ಆಟಗಾರರು ಅಮಲಿನಲ್ಲಿರುವಂತೆ ಕಂಡು ಬಂದಿದ್ದು, ಹೀಗಾಗಿ ಹೆಚ್ಚಿನ ತನಿಖೆ ನಡೆಸುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.

    ಇಂಗ್ಲೆಂಡ್ ವಿರುದ್ದದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಮೂರರಲ್ಲೂ ಹೀನಾಯವಾಗಿ ಸೋತಿದೆ. ಒಂದೆಡೆ ಅತ್ಯಂತ ಕೆಟ್ಟ ಪ್ರದರ್ಶನದಿಂದಾಗಿ ಲಂಕಾ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಲಂಕಾ ತಂಡ, ಇದೀಗ ಆಟಗಾರರ ವರ್ತನೆಯಿಂದ ಮತ್ತಷ್ಟು ಟೀಕೆಗೆ ಒಳಗಾಗಿದ್ದಾರೆ.
    Published by:zahir
    First published: