IND vs ENG: ಜಡೇಜಾ ಹಿಡಿದ ಅದ್ಭುತ ಕ್ಯಾಚ್ ನೋಡಲು ಮಿಸ್ ಆಯ್ತಾ?; ಇಲ್ಲಿದೆ ವಿಡಿಯೋ

Ravindra Jadeja: 23ನೇ ಓವರ್​ನ ಕುಲ್ದೀಪ್​ರ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೋದ ಜೇಸನ್ ರಾಯ್ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು

Vinay Bhat | news18
Updated:June 30, 2019, 5:39 PM IST
IND vs ENG: ಜಡೇಜಾ ಹಿಡಿದ ಅದ್ಭುತ ಕ್ಯಾಚ್ ನೋಡಲು ಮಿಸ್ ಆಯ್ತಾ?; ಇಲ್ಲಿದೆ ವಿಡಿಯೋ
ಜಡೇಜಾ ಹಿಡಿದ ಅದ್ಭುತ ಕ್ಯಾಚ್
Vinay Bhat | news18
Updated: June 30, 2019, 5:39 PM IST
ಬೆಂಗಳೂರು (ಜೂ. 30): ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 38ನೇ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.ಬೈರ್​ಸ್ಟೋ 90 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಚಚ್ಚಿ ಏಕದಿನ ಕ್ರಿಕೆಟ್​ನಲ್ಲಿ ಎಂಟನೇ ಶತಕ ಪೂರೈಸಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದು, ತಂಡದ ಮೊತ್ತ 300ರ ಗಡಿ ದಾಟುವುದು ಖಚಿತ ಆಗಿದೆ.

ಈ ಮಧ್ಯೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಜೇಸನ್ ರಾಯ್​ರನ್ನು ಅದ್ಭುತ ಕ್ಯಾಚ್ ಹಿಡಿದು ರವೀಂದ್ರ ಜಡೇಜಾ ಪೆವಿಲಿಯನ್​ಗೆ ಅಟ್ಟಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.

ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಓಪನರ್​ಗಳಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೈರ್​ಸ್ಟೋ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಟೀಂ ಇಂಡಿಯಾ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು. ಜೊತೆಗೆ ಇಬ್ಬರೂ ಅರ್ಧಶತಕ ಪೂರೈಸಿದರು. ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ.

Cricket World Cup 2019, Ind vs ENG: ಇಂಗ್ಲೆಂಡ್ 2 ವಿಕೆಟ್ ಪತನ; ಬೈರ್​ಸ್ಟೋ ಶತಕ ಸಿಡಿಸಿ ಔಟ್

ಆದರೆ, 23ನೇ ಓವರ್​ನ ಕುಲ್ದೀಪ್​ರ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೋದ ಜೇಸನ್ ರಾಯ್ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು. ಈ ಮೂಲಕ ರಾಯ್-ಬೈರ್​ಸ್ಟೋ 160 ರನ್​ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು. 57 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ನೊಂದಿಗೆ 66 ರನ್ ಬಾರಿಸಿ ರಾಯ್ ಪೆವಿಲಿಯನ್ ಸೇರಿಕೊಂಡರು.

 



ಡೈ ಬಿದ್ದು ಜಡೇಜಾ ಹಿಡಿದ ಅದ್ಭುತ ಕ್ಯಾಚ್ ಇಂಗ್ಲೆಂಡ್ ರನ್​ಗತಿಯಲ್ಲಿ ಇಳಿಕೆಗೆ ಕಾರಣವಾಯಿತು. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಜಡ್ಡು ಕ್ಯಾಚ್​ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿವೆ.



 

















 

First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...