ಮುಂದಿನ 3 ಪಂದ್ಯಗಳಿಂದ ಭುವಿ ಔಟ್; ಸ್ವಿಂಗ್​​​​ ಸ್ಪೆಷಲಿಸ್ಟ್​​ ಜಾಗದಲ್ಲಿ ಮತ್ತೊಬ್ಬ ಸ್ಟಾರ್ ಬೌಲರ್!

ಭಾರತ ತಂಡದ ಪ್ರಮುಖ ಬೌಲರ್ ಆಗಿರುವ ಭುವಿ ಮುಂದಿನ 3 ಪಂದ್ಯಗಳಲ್ಲಿ ಆಡಲು ಸಾಧ್ಯವೇ ಇಲ್ಲದಂತಾಗಿದೆ. ಈ ಮೂಲಕ ಅಫ್ಘಾನಿಸ್ತಾನ, ವೆಸ್ಟ್​​ ವಿಂಡೀಸ್​ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

Vinay Bhat | news18
Updated:June 18, 2019, 3:34 PM IST
ಮುಂದಿನ 3 ಪಂದ್ಯಗಳಿಂದ ಭುವಿ ಔಟ್; ಸ್ವಿಂಗ್​​​​ ಸ್ಪೆಷಲಿಸ್ಟ್​​ ಜಾಗದಲ್ಲಿ ಮತ್ತೊಬ್ಬ ಸ್ಟಾರ್ ಬೌಲರ್!
ಭುವನೇಶ್ವರ್ ಕುಮಾರ್
  • News18
  • Last Updated: June 18, 2019, 3:34 PM IST
  • Share this:
ಬೆಂಗಳೂರು (ಜೂ. 18): ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ ಸತತ 7ನೇ ಗೆಲುವು ಸಾಧಿಸಿದ ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆಯೇ ದೊಡ್ಡ ತಲೆನೋವಾಗತೊಡಗಿದೆ. ಈಗಾಗಲೇ ಮೂರು ಪಂದ್ಯ ಗೆದ್ದು ಪಾಯಿಂಟ್ಸ್​ ಟೇಬಲ್​​ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಭಾರತಕ್ಕೆ, ಇಂಜ್ಯರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ.

ಪಾಕ್ ವಿರುದ್ಧ ಪಂದ್ಯದ ವೇಳೆ 5ನೇ ಓವರ್​ 3ನೇ ಎಸೆತದಲ್ಲೇ ಕಾಲು ಸ್ಲಿಪ್​ ಆಗುತ್ತಿರುವ ಕುರಿತು ಭುವನೇಶ್ವರ್ ಅಂಪೈರ್​ಗೆ ತಿಳಿಸಿದರು. ಆದರೆ ನಂತರದ ಎಸೆತದಲ್ಲಿ ಆದ ಘಟನೆ ಭಾರತಕ್ಕೆ ಶಾಕ್ ನೀಡಿತು. ಕಾರಣ ಭುವಿ ಸ್ನಾಯು ಸೆಳೆತಕ್ಕೊಳಗಾದರು. ಇದು ಟೀಂ ಇಂಡಿಯಾವನ್ನ ಚಿಂತೆಗೀಡುಮಾಡಿದೆ.

ತಂಡದ ಆಟಗಾರರೊಂದಿಗೆ ಚರ್ಚಿಸಿದ ಭುವಿ ಮೈದಾನದಿಂದ ಹೊರಗುಳಿಯುವ ತೀರ್ಮಾನ ಮಾಡಿದರು. ಮೈದಾನದಲ್ಲಿ ಅವರು ಹೊರನಡೆಯುತ್ತಿದ್ದಂತೆ ಫಿಸಿಯೋ ಪ್ಯಾಟ್ರಿಕ್​ ಅವರನ್ನ ಕರೆದುಕೊಂಡು ಹೋದರು. ಈ ವೇಳೆ  ಆಲ್​ರೌಂಡರ್ ವಿಜಯ್ ಶಂಕರ್ ತಂಡದಲ್ಲಿದ್ದ ಪರಿಣಾಮ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ಬೀಳಲಿಲ್ಲ. ಭುವಿ ಬೌಲಿಂಗ್ ಕೋಟಾವನ್ನ ಯಶಸ್ವಿಯಾಗೇ ಮುಂದುವರಿಸಿದರು.

ICC World Cup 2019, ENG vs AFG: ಇಂಗ್ಲೆಂಡ್ ಉತ್ತಮ ಆರಂಭ

ಭಾರತ ತಂಡದ ಪ್ರಮುಖ ಬೌಲರ್ ಆಗಿರುವ ಭುವಿ ಮುಂದಿನ 3 ಪಂದ್ಯಗಳಲ್ಲಿ ಆಡಲು ಸಾಧ್ಯವೇ ಇಲ್ಲದಂತಾಗಿದೆ. ಈ ಮೂಲಕ ಅಫ್ಘಾನಿಸ್ತಾನ, ವೆಸ್ಟ್​​ ವಿಂಡೀಸ್​ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಹೀಗಾಗಿ ಭುವನೇಶ್ವರ್ ಕುಮಾರ್​​ ಸ್ಥಾನವನ್ನ ಟೀಂ ಇಂಡಿಯಾದ ಮತ್ತೊಬ್ಬ ವೇಗಿ ಮೊಹಮದ್​ ಶಮಿ ತುಂಬುವುದು ಬಹುತೇಕ ಖಚಿತವಾಗಿದೆ​. ಬೌನ್ಸಿ​​ ಟ್ರ್ಯಾಕ್​ನಲ್ಲಿ ಆಡಿದ ಅನುಭವ ಹೊಂದಿರುವ ಶಮಿ, ಭುವನೇಶ್ವರ್​ ಅನುಪಸ್ಥಿತಿ ಕಾಡದಂತೆ ಪ್ರದರ್ಶನ ನೀಡಬಲ್ಲರು ಎಂಬ ವಿಶ್ವಾಸ ತಂಡದಲ್ಲಿದೆ.

ಅಲ್ಲದೆ ಬಿಸಿಸಿಐ ಮೂಲಗಳು ಭುವನೇಶ್ವರ್ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನ ಆಯ್ಕೆ ಇಲ್ಲ ಎಂದು ತಳಿಸಿದೆ.
Loading...

ಇನ್ನು ಈ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿಯೂ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಮೂರು ಪಂದ್ಯಗಳಿಗೆ ಭುವನೇಶ್ವರ್​ ಕುಮಾರ್​ ಸ್ಥಾನವನ್ನ ಮೊಹಮದ್ ಶಮಿ ತುಂಬಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

‘ನಮಗೆ ಕಾಶ್ಮೀರ ಬೇಡ, ವಿರಾಟ್ ಕೊಹ್ಲಿ ಬೇಕು’; ಪಾಕ್​ನಲ್ಲಿ ಆರಂಭವಾಯ್ತು ಹೊಸ ಆಂದೋಲನ!

ಒಟ್ಟಾರೆ ಈ ಬಾರಿ ವಿಶ್ವಕಪ್​ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಭುವನೇಶ್ವರ್​, ಶಿಖರ್​ ಧವನ್ ಅನುಪಸ್ಥಿತಿ ಕಾಡಿದ್ದರೂ ಸಹ,  ಅವರ ಸ್ಥಾನ ತುಂಬಬಲ್ಲ ಆಟಗಾರರು ತಂಡದಲ್ಲಿ ಇರುವುದು ಸಮಾಧಾನದ ಸಂಗತಿ. ಆದರೆ, ಅವರ ಅನುಪಸ್ಥಿತಿಯನ್ನ ಎಷ್ಟರ ಮಟ್ಟಿಗೆ ಮಹಮದ್ ಶಮಿ​ ತುಂಬುತ್ತಾರೆ ಎಂಬುದು ಕಾದು ನೋಡಬೇಕಿದೆ.
First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...