HOME » NEWS » Sports » CRICKET

2003 World Cup​​: ಫೈನಲ್​​ನಲ್ಲಿ ಎಡವಿದ ಭಾರತ; ಆಸ್ಟ್ರೇಲಿಯಾ ಹ್ಯಾಟ್ರಿಕ್ ಕಪ್​ ಗೆದ್ದ ಸಾಧನೆ!

ICC Cricket World Cup 2019: 2003ರ ವಿಶ್ವಕಪ್ ಫೈನಲ್​ನಲ್ಲಿ ಸೆಹ್ವಾಗ್ 82ರನ್​​ಗೆ ಔಟಾದ ಮೇಲೆ ದ್ರಾವಿಡ್​ ತಾಳ್ಮೆಯ 47ರನ್​ಗಳಿಸಿದರಷ್ಟೆ. ಪರಿಣಾಮ ಭಾರತ ಕಾಂಗರೂಗಳ ಬೃಹತ್​​ ಮೊತ್ತದ ಹತ್ತಿರವೂ ಸುಳಿಯಲಿಲ್ಲ.

Vinay Bhat | news18
Updated:May 27, 2019, 11:28 AM IST
2003 World Cup​​: ಫೈನಲ್​​ನಲ್ಲಿ ಎಡವಿದ ಭಾರತ; ಆಸ್ಟ್ರೇಲಿಯಾ ಹ್ಯಾಟ್ರಿಕ್ ಕಪ್​ ಗೆದ್ದ ಸಾಧನೆ!
ಸಾಂದರ್ಭಿಕ ಚಿತ್ರ
  • News18
  • Last Updated: May 27, 2019, 11:28 AM IST
  • Share this:
ಬೆಂಗಳೂರು (ಮೇ. 26): ಐಸಿಸಿ 8ನೇ ಆವೃತ್ತಿಯ ವಿಶ್ವಕಪ್ ಅ​ನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ಕೀನ್ಯಾ ಮೊಟ್ಟ ಮೊದಲ ಬಾರಿಗೆ ಆತಿಥ್ಯ ವಹಿಸಿಕೊಂಡಿದ್ದವು. ಪೂಲ್ ಎ ಹಾಗೂ ಪೂಲ್ ಬಿ ಎಂಬ 2 ಗುಂಪುಗಳಲ್ಲಿ ತಲಾ 7 ತಂಡಗಳಂತೆ ಒಟ್ಟು 14 ತಂಡಗಳು 2003ರ ವಿಶ್ವಕಪ್​ನಲ್ಲಿ ಅರ್ಹತೆ ಪಡೆದಿದ್ದವು.

ದಾದಾ ಸೌರವ್​ ಗಂಗೂಲಿ ನಾಯಕತ್ವದಲ್ಲಿ ಮುನ್ನೆಡೆದಿದ್ದ ಟೀಂ ಇಂಡಿಯಾ 2003ರ ವಿಶ್ವಕಪ್​ನ ಫೇವರಿಟ್ ತಂಡಗಳಲ್ಲಿ ಒಂದಾಗಿತ್ತು. ​​ಗ್ರೂಪ್​ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ದಾದಾ ಪಡೆ ಫೈನಲ್​​ನಲ್ಲಿ ಮಾತ್ರ ಎಡವಿತು. ಆಸ್ಟ್ರೇಲಿಯಾ ಸುಲಭವಾಗಿ ಹ್ಯಾಟ್ರಿಕ್ ಕಪ್​ ಗೆದ್ದ ಟೀಂ ಆಗಿ ಹೊರಹೊಮ್ಮಿತು!

ಗ್ರೂಪ್ ಹಂತದಲ್ಲಿ ಆಸೀಸ್ ವಿರುದ್ಧ ಸೋಲು

ನೆದರ್ಲೆಂಡ್ ವಿರುದ್ಧ ಸುಲಭ ಗೆಲುವು ಸಾಧಿಸಿದ್ದ ಭಾರತ ಗ್ರೂಪ್​ ಹಂತದ ಮುಂದಿನ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಗಂಗೂಲಿ ಟೀಂ ಕೇವಲ 125ರನ್​ಗೆ ಆಲೌಟ್​ ಆಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 22.2 ಓವರ್​ಗಳಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ಸಾಧಿಸಿತು

ಪಾಕ್ ವಿರುದ್ಧ ಮುಂದುವರಿದ ಜಯದ ಓಟ

ಗ್ರೂಪ್​ ಸ್ಟ್ರೇಜ್​ನಲ್ಲಿ 2ನೇ ಸ್ಥಾನಿಯಾಗಿ ಅಲಂಕರಿಸಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು ಬಿಟ್ಟರೆ ಉಳಿದ 5 ಪಂದ್ಯಗಳನ್ನ ಗೆದ್ದು ಬೀಗಿತು. ಮೊದಲು ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವಂತೂ 6 ವಿಕೆಟ್​ಗಳ ಜಯ ಸಾಧಿಸಿತು.

ಗ್ರೂಪ್ ಹಂತದಲ್ಲಿ 6ಕ್ಕೆ 5 ಪಂದ್ಯ ಗೆದ್ದು 20 ಅಂಕಗಳೊಂದಿಗೆ ಸೂಪರ್ ಸಿಕ್ಸ್​ ಪ್ರವೇಶಿಸಿದ ಭಾರತ, ಸೂಪರ್​ ಸಿಕ್ಸ್​ನಲ್ಲಿ ಆಡಿದ 3 ಪಂದ್ಯಗಳನ್ನ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ರನ್ ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಟೇಬಲ್ ಟಾಪರ್ ಆಗಿ ಕಾಣಿಸಿಕೊಂಡಿತು. ಸೂಪರ್ ಸಿಕ್ಸ್ ಹಂತದಲ್ಲಿ ಕೀನ್ಯಾ ವಿರುದ್ಧ 6 ವಿಕೆಟ್​ಗಳಿಂದ ಗೆದ್ದರೆ, ಶ್ರೀಲಂಕಾ ವಿರುದ್ಧ 183ರನ್​ಗಳ ಅಮೋಘ ಗೆಲುವಿತ್ತು. ಅಲ್ಲದೆ ಕಿವೀಸ್ ವಿರುದ್ಧ ಭಾರತ 7 ವಿಕೆಟ್ ಗಳ ಜಯ ಸಾಧಿಸಿತು.ಇದನ್ನೂ ಓದಿ: 'ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು' ಇದು ನಮಗೆ ಸಂತೋಷ ಕೊಡಲಿದೆ; ಪಿಸಿಬಿ ಅಧ್ಯಕ್ಷ

ಕೀನ್ಯಾ ವಿರುದ್ಧ ಸೆಮೀಸ್ ಗೆದ್ದ ಭಾರತ

ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಲಂಕಾ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತ್ತು. 2ನೇ ಸೆಮಿಫೈನಲ್​ನಲ್ಲಿ ಭಾರತ-ಕೀನ್ಯಾ ಮುಖಾಮುಖಿಯಾಗಿದ್ದವು. ಕೀನ್ಯಾ ಮೊದಲ ಬಾರಿಗೆ ಸೆಮೀಸ್ ಪ್ರವೇಶ ಪಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೌರವ್​ ಗಂಗೂಲಿಯ ಅಜೇಯ 111ರನ್ ಹಾಗೂ ಸಚಿನ್​ 83ರನ್ ನೆರವಿನಿಂದ 4 ವಿಕೆಟ್ ಕಳೆದುಕೊಂಡು 270ರನ್ ಸಿಡಿಸಿತು.

ಭಾರತ ನೀಡಿದ 271ರನ್ ಟಾರ್ಗೆಟ್ ಬೆನ್ನತ್ತಿದ ಕೀನ್ಯಾ ಗಂಗೂಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿ 46.2 ಓವರ್​ಗಳಲ್ಲೇ 179ರನ್​ಗೆ ಆಲೌಟ್ ಆಯಿತು. ಪರಿಣಾಮ 91ರನ್​​ಗಳಿಂದ ಗೆದ್ದ ಭಾರತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿತು.

ಫೈನಲ್ನಲ್ಲಿ ಇಂಡೋ-ಆಸೀಸ್ ಮುಖಾಮುಖಿ

ಜೋಹಾನ್ಸ್​ಬರ್ಗ್​​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದ ಗಂಗೂಲಿ ಆಸ್ಟ್ರೇಲಿಯಾವನ್ನ ಬ್ಯಾಟಿಂಗ್ ಆಹ್ವಾನಿಸಿದರು. ಆದರೆ ಈ ನಿರ್ಧಾರ ಕೈ ಕೊಟ್ಟಿತು. ಭರ್ಜರಿ ಆರಂಭ ಪಡೆದ ಆಸ್ಟ್ರೇಲಿಯಾ ಪರ ನಾಯಕ ರಿಕಿ ಪಾಂಟಿಂಗ್ ಅಜೇಯ 140ರನ್ ಸಿಡಿಸಿದರು. ಪಾಂಟಿಂಗ್​ಗೆ ಸಾಥ್ ಕೊಟ್ಟ ಮಾರ್ಟಿನ್​ 88ರನ್ ಕಲೆಹಾಕಿದರು.

ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 359ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನತ್ತಿದ ಭಾರತ ಹೀನಾಯ ಪ್ರದರ್ಶನ ತೋರಿತು. ಭಾರತ ಪರ ವಿರೇಂದ್ರ ಸೆಹ್ವಾಗ್ ಅಬ್ಬರಿಸಿದ್ದು ಬಿಟ್ಟರೆ ,ಯಾರು ತಂಡಕ್ಕೆ ಆಧಾರವಾಗಲಿಲ್ಲ.

ಇದನ್ನೂ ಓದಿ: IND vs PAK: ವಿಶ್ವಕಪ್​ನಲ್ಲಿ ನಡೆದ ಬದ್ಧ ವೈರಿಗಳ ಕಾದಾಟ ನಿಜಕ್ಕೂ ರೋಚಕ!

ಸೆಹ್ವಾಗ್ 82ರನ್​​ಗೆ ಔಟಾದ ಮೇಲೆ ದ್ರಾವಿಡ್​ ತಾಳ್ಮೆಯ 47ರನ್​ಗಳಿಸಿದರಷ್ಟೆ. ಪರಿಣಾಮ ಭಾರತ ಕಾಂಗರೂಗಳ ಬೃಹತ್​​ ಮೊತ್ತದ ಹತ್ತಿರವೂ ಸುಳಿಯಲಿಲ್ಲ. ಅಂತಿಮವಾಗಿ 234 ರನ್​ಗಳಿಗೆ ಆಲೌಟ್​ ಆಗಿ ಕಪ್​ ಗೆಲ್ಲುವ ಅವಕಾಶ ಕಳೆದುಕೊಂಡಿತು. 125ರನ್​ಗಳಿಂದ ಗೆದ್ದ ಆಸ್ಟ್ರೇಲಿಯಾ 3ನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿದ ಮೊದಲ ತಂಡವಾಗಿ ಹೊರಹೊಮ್ಮಿತು. ಇಡೀ ಟೂರ್ನಮೆಂಟ್​ನಲ್ಲಿ ಅದ್ಭುತ ಆಟವಾಡಿದ ಸಚಿನ್ ತೆಂಡೂಲ್ಕರ್​ 673ರನ್​ ಕಲೆಹಾಕಿದರೂ ತಂಡ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ.

Youtube Video
Published by: Vinay Bhat
First published: May 26, 2019, 7:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories