• Home
 • »
 • News
 • »
 • sports
 • »
 • ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಕೇವಲ ಒಂದು ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿದ ಬೌಲರ್, ಇಲ್ಲಿದೆ ವಿಡಿಯೋ

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಕೇವಲ ಒಂದು ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿದ ಬೌಲರ್, ಇಲ್ಲಿದೆ ವಿಡಿಯೋ

Scott Styris

Scott Styris

ಜೇಮ್ಸ್ ಮೊದಲ ಎಸೆತ​ ಭುಜಕ್ಕಿಂತಲೂ ಮೇಲೆ ಹೋಗಿ ನೋ ಬಾಲ್​ ಆಗಿತ್ತು. ಅಲ್ಲದೆ, ಕೀಪರ್ ಈ ಬಾಲ್​​ ಹಿಡಿಯಲಾಗಾದೆ ಬೌಂಡರಿ ಗಡಿಗೆ ಹೋಗಿತ್ತು.

 • Share this:

  ನೀವು ಸಪೋರ್ಟ್​ ಮಾಡುವ ಟೀಂಗೆ ಗೆಲ್ಲಲು ಒಂದು ಎಸೆತದಲ್ಲಿ 18 ರನ್​ ಬೇಕಾಗಿರುತ್ತದೆ ಎಂದಿಟ್ಟುಕೊಳ್ಳಿ. ಈ ವೇಳೆ ಬೌಲರ್​ ನಿರಂತರವಾಗಿ ನೋಬಾಲ್​ ಹಾಕಿದರೆ ನಮ್ಮ ತಂಡ ವಿನ್​ ಆಗಬಹುದು ಎಂದು ನೀವು ಕನಸು ಕಾಣುತ್ತೀರಿ. ಇದು ಸಾಮಾನ್ಯ ಕೂಡ. ಆದರೆ, ಇಂಗ್ಲೆಂಡ್​ನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಬೌಲರ್​ ಓರ್ವ ಒಂದೇ ಎಸೆತಕ್ಕೆ 18 ರನ್​ ನೀಡಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಈ ಬೌಲರ್​ ಒಂದು ಓವರ್​ಗೆ ನೀಡಿದ್ದು ಬರೋಬ್ಬರಿ 38 ರನ್​.


  ಈ ಘಟನೆ ನಡೆದಿದ್ದು, 2012ರ ಫ್ರೆಂಡ್ಸ್ ಲೈಫ್​​ ಟಿ-20 ಕಪ್​ನಲ್ಲಿ. ಅದು ಕ್ವಾಟರ್​ ಫೈನಲ್​ ಪಂದ್ಯ. ಸುಸೆಕ್ಸ್​ ತಂಡ ಆಟಗಾರ ಸ್ಕಾಟ್ ಸ್ಟೈರಿಸ್ 18ನೇ ಓವರ್​ನಲ್ಲಿ​ ಬ್ಯಾಟಿಂಗ್ ಮಾಡಲು ನಿಂತಿದ್ದರು. ಈ ವೇಳೆ ಬೌಲಿಂಗ್​ನಲ್ಲಿದ್ದಿದ್ದು ನ್ಯೂಜಿಲೆಂಡ್​ನ ಜೇಮ್ಸ್​ ಫುಲ್ಲರ್. ಜೇಮ್ಸ್ ಎಸೆದ ಮೊದಲ ಎಸೆತ​ ಭುಜಕ್ಕಿಂತಲೂ ಮೇಲೆ ಹೋಗಿ ನೋ ಬಾಲ್​ ಆಗಿತ್ತು. ಅಲ್ಲದೆ, ಕೀಪರ್ ಈ ಬಾಲ್​​ ಹಿಡಿಯಲಾಗಾದೆ ಬೌಂಡರಿ ಗಡಿಗೆ ಹೋಗಿತ್ತು. ಫ್ರೀ ಹಿಟ್​ ಬಾಲ್​ ಕೂಡ ನೋಬಾಲ್​ ಆಗಿ ಬೌಂಡರಿ ಗಡಿ ಸೇರಿತ್ತು. ನಂತರದ ಫ್ರೀ ಹಿಟ್​ ಬಾಲ್​ನಲ್ಲಿ ಸ್ಕಾಟ್ ಸಿಕ್ಸ್​ ಬಾರಿಸಿದ್ದರು.
  ಸಾಮಾನ್ಯವಾಗಿ ನೋಬಾಲ್​ ಎಸೆದರೆ ಒಂದು ರನ್​ ಎಕ್ಸ್​ಟ್ರಾ ನೀಡಲಾಗುತ್ತದೆ. ಆದರೆ, ಈ ಟೂರ್ನಮೆಂಟ್​ ನಿಯಮದ ಪ್ರಕಾರ ನೋಬಾಲ್​ ಎಸೆದರೆ ಎರಡು ರನ್​ ನೀಡಾಗುತ್ತಿತ್ತು. ಹೀಗಾಗಿ ಮೊದಲೆರೆಡು ನೋಬಾಲ್​ಗೆ ಬಂದಿದ್ದು ನಾಲ್ಕು ರನ್​. ಅಲ್ಲದೇ ಇದೆರಡೂ ಎಸೆತ ಬೌಂಡರಿ ಗಡಿ ಸೇರಿದ್ದರಿಂದ 8 ರನ್​ಗಳು ಮತ್ತು ಫ್ರೀ ಹಿಟ್ ಬಾಲ್​ ಸಿಕ್ಸ್​ ಹೊಗಿದ್ದರಿಂದ ಆರು ರನ್​. ಒಟ್ಟು 18 ರನ್​ಗಳನ್ನು ಬೌಲರ್​ ನೀಡಿದ್ದರು. ಇದು ಈವರೆಗೆ ಒಂದು ಬಾಲ್​ಗೆ ನೀಡಿದ ಅತಿ ಹೆಚ್ಚು ರನ್​ ಆಗಿದೆ.

  Published by:Rajesh Duggumane
  First published: