ಕೇರಳಿಗರಿಗೆ ಫುಟ್ಬಾಲ್ ಮೇಲೆ ಒಲುವು ತುಸು ಜಾಸ್ತಿಯೇ. ಹಾಗಾಗಿ ಅಲ್ಲಿನ ಅನೇಕರು ಫುಟ್ಬಾಲ್ ಪಂದ್ಯವನ್ನು ಇಷ್ಟಪಡುತ್ತಾರೆ. ಗಲ್ಲಿ ಗಲ್ಲಿಯಲ್ಲಿ ಫುಟ್ಬಾಲ್ ಪ್ರೀಯರಿದ್ದಾರೆ. ಅಷ್ಟೇ ಏಕೆ, ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಹಲವು ಆಟಗಾರರನ್ನು ಕೇರಳ ಕೊಟ್ಟಿದೆ. ಇದೀಗ ಕೇರಳದ ಪುಟ್ಟ ಬಾಲಕನೊಬ್ಬ ಫ್ರಿ ಕಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕೇರಳದ 12 ವರ್ಷದ ಪುಟ್ಟ ಬಾಲಕನೊಬ್ಬ ಬಾರ್ಸಿಲೋನ ಮತ್ತು ಆಜೈಟೀನಾ ಫುಟ್ಬಾಲ್ ತಂಡದ ಜರ್ಸಿ ಧರಿಸಿಕೊಂಡು ಗೋಲ್ಪೋಸ್ಟ್ನ ಮೇಲ್ಭಾಗದಲ್ಲಿರುವ ಸಣ್ಣ ರಿಂಗ್ ಒಳಗೆ ಕಿಕ್ ಒದೆಯುವ ಮೂಲಕ ಗಮನ ಸೆಳೆದಿದ್ದಾನೆ.
ಈ ವಿಡಿಯೋದಲ್ಲಿರುವ ಬಾಲಕನ ಹೆಸರು ಮಿಶಾಲ್ ಅಮೊಲಾಯಿಸ್. ಮಲಪ್ಪುರಂ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಫುಟ್ಬಾಲ್ ಮೇಲಿ ತುಸು ಹೆಚ್ಚು ಪ್ರೀತಿ, ಬಿಡುವಿದ್ದಾಗ ಮೈದಾನಕ್ಕೆ ತೆರಳಿ ಫುಟ್ಬಾಲಲ್ ಆಡುತ್ತಾನೆ. ಅದರಂತೆ ಇದೀಗ ಆ ಬಾಲಕನ ಫ್ರಿ ಕಿಕ್ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮಿಶಾಲ್ ಅಮೊಲಾಯಿಸ್ ಫುಟ್ಬಾಲ್ ತಾರೆ ಮೆಸ್ಸಿ ಅಭಿಮಾನಿ. ಅವರನ್ನು ಬಿಟ್ಟರೆ ಪೋರ್ಚುಗಲ್ ತಂಡದ ಕ್ರಿಶ್ಚಿಯಾನೊ ರೋನಾಲ್ಡೊ ಇಷ್ಟವಂತೆ. ಅವರಂತೆ ಫುಟ್ಬಾಲ್ ತಾರೆಯಾಗಬೇಕೆಂಬ ಕನಸು ಹೊತ್ತಿರುವ ಮಿಶಾಲ್ ಅಮೊಲಾಯಿಸ್ ತರಗತಿ, ಓದು, ಜೊತೆಗೆ ಫುಟ್ಬಾಲ್ನಲ್ಲಿ ಹೆಚ್ಚಿ ಆಸಕ್ತಿವಹಿಸಿದ್ದಾನೆ.
ಮಿಶಾಲ್ ಅಮೊಲಾಯಿಸ್ ಫ್ರಿ ಕಿಕ್ ವಿಡಿಯೋವನ್ನು ಕೇರಳದ ಸೆವೆನ್ಸ್ ಫುಟ್ಬಾಲ್ ಸಂಸ್ಥೆ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದೆ. ಅನೇಕರು ಈ ವಿಡಿಯೋ ನೋಡಿ ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ.
ಸದ್ಯದಲ್ಲೇ ಕನ್ನಡದಲ್ಲಿ ಬರಲಿದೆ ಹಿಂದಿ ‘ಸಿಐಡಿ’ ಧಾರಾವಾಹಿ!; ಯಾವ ವಾಹಿನಿಯಲ್ಲಿ ಗೊತ್ತಾ?
Video Viral: ಕಣ್ಣೀರಿಗೆ ಕರಗಿದ ಕಳ್ಳರ ಮನಸ್ಸು; ದೋಚಿದ್ದನ್ನು ಏನು ಮಾಡಿದ್ರು ಗೊತ್ತಾ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ