• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Shikhar Dhawan: ಧವನ್​ಗೆ ಕೋರ್ಟ್​ನಿಂದ ಬಿಗ್​ ರಿಲೀಫ್, ಶಿಖರ್ ಪತ್ನಿಗೆ ಸ್ಟ್ರಿಕ್ಟ್​ ವಾರ್ನಿಂಗ್

Shikhar Dhawan: ಧವನ್​ಗೆ ಕೋರ್ಟ್​ನಿಂದ ಬಿಗ್​ ರಿಲೀಫ್, ಶಿಖರ್ ಪತ್ನಿಗೆ ಸ್ಟ್ರಿಕ್ಟ್​ ವಾರ್ನಿಂಗ್

ಶಿಖರ್ ಧವನ್

ಶಿಖರ್ ಧವನ್

Shikhar Dhawan: ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯೇಷಾ ಮುಖರ್ಜಿ ನಡುವೆ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಇದರ ಕುರಿತು ಕೋರ್ಟ್​ ಮಹತ್ವದ ಆದೇಶ ನೀಡಿದೆ.

  • Share this:

ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಮತ್ತು ಅವರ ಪತ್ನಿ ಆಯೇಷಾ ಮುಖರ್ಜಿ (Ayesha Mukherjee) ನಡುವೆ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಇಬ್ಬರೂ ಆಗಸ್ಟ್ 2020ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಟೀಂ ಇಂಡಿಯಾದಿಂದ (Team India) ಹೊರಗುಳಿದಿರುವ ಧವನ್ ಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ರಿಲೀಫ್ ನೀಡಿದೆ. ವಾಸ್ತವವಾಗಿ, ಆಯೇಷಾ ತನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಧವನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಧವನ್ ವಿರುದ್ಧ ಅವಹೇಳನಕಾರಿ ಹಾಗೂ ಆಧಾರ ರಹಿತ ಆರೋಪ ಮಾಡುವಂತಿಲ್ಲ ಎಂದು ಆಯೇಷಾಗೆ ಕೋರ್ಟ್ ಆದೇಶಿಸಿದೆ.


ಧವನ್ ದಾಂಪತ್ಯದಲ್ಲಿ ಬಿರುಕು:


ಆಯೇಷಾ ಆಸ್ಟ್ರೇಲಿಯಾ ಮೂಲದ ಪ್ರಜೆ. ಧವನ್ ಮತ್ತು ಆಯೇಶಾ 2012ರಲ್ಲಿ ಪರಸ್ಪರ ಡೇಟಿಂಗ್ ಮಾಡಿದ ನಂತರ ವಿವಾಹವಾದರು. ಇದು ಆಯೇಷಾಳ ಎರಡನೇ ವಿವಾಹವಾಗಿತ್ತು. ಅವರ ಮೊದಲ ಮದುವೆಯಿಂದ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಧವನ್ ಅವರನ್ನು ಮದುವೆಯಾದ ನಂತರ, ಅವರು 2014ರಲ್ಲಿ ಮತ್ತೊಂದು ಮಗುವಿಗೆ ತಾಯಿಯಾದರು. ಆ ಮಗುವಿನ ಹೆಸರು ಜೋರಾವರ್. ಧವನ್ ಮತ್ತು ಆಯೇಷಾ ಸಂಬಂಧ ಸುಮಾರು 8 ವರ್ಷಗಳ ಕಾಲ ಚೆನ್ನಾಗಿಯೇ ಇತ್ತು, ಆದರೆ 2020ರ ಹೊತ್ತಿಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ಇದಾದ ನಂತರ ಧವನ್ ಮತ್ತು ಆಯೇಶಾ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಆಯೇಷಾ ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.


ದೂರು ಇದ್ದಲ್ಲಿ ಕಾನೂನು ನೆರವು ಪಡೆಯಿರಿ:


ಧವನ್ ತನ್ನ ಅರ್ಜಿಯಲ್ಲಿ ಆಯೇಷಾ ತನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಮತ್ತು ತನ್ನ ವೃತ್ತಿಜೀವನವನ್ನು ಹಾಳುಮಾಡಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಹರೀಶ್ ಕುಮಾರ್, ಓರ್ವ ವ್ಯಕ್ತಿಯ ಖ್ಯಾತಿಯನ್ನು ಅತ್ಯುನ್ನತ ಪದವಿಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹಾನಿಯ ನಂತರ ವಸ್ತು ರೂಪದ ಆಸ್ತಿಯನ್ನು ಮರುಪಡೆಯಬಹುದು, ಆದರೆ ಒಮ್ಮೆ ಹಾನಿಗೊಳಗಾದ ಖ್ಯಾತಿಯನ್ನು ಮರುಪಡೆಯಲಾಗುವುದಿಲ್ಲ. ಹೀಗಾಗಿ ಧವನ್ ವಿರುದ್ಧ ಆಯೇಷಾಗೆ ದೂರು ಇದ್ದಲ್ಲಿ ಕಾನೂನು ನೆರವು ಪಡೆಯಬೇಕು ಎಂದು ಕೋರ್ಟ್ ಹೇಳಿದೆ.


ಇದನ್ನೂ ಓದಿ: KL Rahul-Athiya: ಪಾಕಿಸ್ತಾನದಲ್ಲೂ ರಾಹುಲ್-ಅಥಿಯಾ ಮದ್ವೆಯದ್ದೇ ಸುದ್ದಿ! ನವಜೋಡಿ ಬಗ್ಗೆ ಪಾಕ್‌ ಜನ ಮಾತನಾಡ್ತಾ ಇರೋದಾದ್ರೂ ಏನು?


ಇದರಿಂದಾಗಿ ಧವನ್ ಪತ್ನಿ ಆಯೇಷಾ ಇನ್ನು ಮುಂದೆ ಧವನ್ ಮೇಲೆ ಅವಹೇಳನಕಾರಿ ಹೇಳಿಕೆಗಳನ್ನು ಯಾವುದೇ ಸಂದರ್ಭದಲ್ಲೂ ಹೇಳುವಂತಿಲ್ಲ. ಮಗು ಮತ್ತು ಅವನ ತಂದೆಯ ನಡುವೆ ಪ್ರತಿದಿನ 30 ನಿಮಿಷಗಳ ವೀಡಿಯೊ ಕರೆಗಳನ್ನು ಸುಗಮಗೊಳಿಸುವಂತೆ ಧವನ್ ಅವರ ಪತ್ನಿಗೆ ನ್ಯಾಯಾಲಯ ಸೂಚಿಸಿದೆ.


ಫೇಸ್​ಬುಕ್​ ಲವ್​ ಸ್ಟೋರಿ:


ಶಿಖರ್ ಧವನ್ ತನಗಿಂತ 10 ವರ್ಷ ಹಿರಿಯ ಹಾಗೂ ಇಬ್ಬರು ಮಕ್ಕಳ ತಾಯಿ ಆಯೇಷಾ ಎನ್ನುವರನ್ನು ವಿವಾಹವಾಗಿದ್ದರು. ಆದರೆ ಕಳೆದ ವರ್ಷ ಈ ಜೋಡಿ ವಿಚ್ಛೇದನ ಪಡೆಯುವ ಮೂಲಕ ದೂರವಾಗಿದ್ದಾರೆ. ಇಬ್ಬರೂ ಫೇಸ್ ಬುಕ್ ಮೂಲಕ ಭೇಟಿಯಾಗಿದ್ದರು. ಇದಾದ ಬಳಿಕ 2012ರಲ್ಲಿ ಇಬ್ಬರೂ ವಿವಾಹವಾದರು. ಫೇಸ್​ಬುಕ್ ಮೂಲಕ ಶುರುವಾದ ಪ್ರೇಮಕಥೆಯ ಅಂತ್ಯದ ಸುದ್ದಿ ಇನ್ ಸ್ಟಾಗ್ರಾಮ್ ಮೂಲಕ ಸಿಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ದಂಪತಿಗಳು 2012ರಲ್ಲಿ ಪರಸ್ಪರರ ಕೈ ಹಿಡಿದಿದ್ದರು ಮತ್ತು 2014 ರಲ್ಲಿ ಮಗ ಜೋರಾವರ್ ಜನಿಸಿದರು. 9 ವರ್ಷಗಳ ಸಂಬಂಧದಲ್ಲಿದ್ದ ನಂತರ, ಆಯೇಶಾ ವಿಚ್ಛೇದನದ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದರು. ಶಿಖರ್ ಧವನ್ ಸದ್ಯ ಒಂಟಿಯಾಗಿದ್ದಾರೆ. ವಿಚ್ಛೇದನದ ನಂತರ, ಅವರು ಇದೀಗ ಯಾವುದೇ ಹೊಸ ಸಂಬಂಧದಲ್ಲಿಲ್ಲ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು