ಮೊದಲ ಟೆಸ್ಟ್​ ಗೆಲುವಿಗೆ ಕಾರಣವಾಗಿದ್ದ ಇಂಗ್ಲೆಂಡ್ ಆಟಗಾರ 2ನೇ ಟೆಸ್ಟ್​ಗೆ ಅಲಭ್ಯ

news18
Updated:August 6, 2018, 4:00 PM IST
ಮೊದಲ ಟೆಸ್ಟ್​ ಗೆಲುವಿಗೆ ಕಾರಣವಾಗಿದ್ದ ಇಂಗ್ಲೆಂಡ್ ಆಟಗಾರ 2ನೇ ಟೆಸ್ಟ್​ಗೆ ಅಲಭ್ಯ
news18
Updated: August 6, 2018, 4:00 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 5  ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಂಗ್ಲರು ಈಗಾಗಲೇ ಮೊದಲ ಪಂದ್ಯ ಗೆದ್ದು 1-0ಯ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಕ್ರಿಕೆಟ್ ಕಾಶಿ ಲಾರ್ಡ್ಸ್​​​ ಮೈದಾನದಲ್ಲಿ ಆಗಸ್ಟ್​ 9 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಬ್ಯಾಟ್ಸ್​ಮನ್​​ ಡೇವಿಡ್ ಮಲಾನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರ ಬದಲಿಗೆ ಆಲ್ರೌಂಡರ್ ಕ್ರಿಸ್ ವೋಕ್ಸ್ ಹಾಗೂ ಯುವ ಬ್ಯಾಟ್ಸ್​ಮನ್​​ ಒಲಿವರ್ ಪೋಪ್​ ಅವರನ್ನು ಆಯ್ಕೆ ಮಾಡಲಾಗಿದೆ.

ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್​ನಲ್ಲಿ ಒಟ್ಟು 6 ವಿಕೆಟ್ ಕಿತ್ತಿರುವ ಸ್ಟೋಕ್ಸ್​, ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದರೆ ಪ್ರಕರಣದ ವಿಚಾರಣೆಗಾಗಿ ಸ್ಟೋಕ್ಸ್ ಅವರು ಕೋರ್ಟ್​​ಗೆ ಹಾಜರಾಗ ಬೇಕಿರುವುದರಿಂದ ಎರಡನೇ ಟೆಸ್ಟ್​ಗೆ ಅಲಭ್ಯರಾಗಿದ್ದಾರೆ.

ಕಳೆದ ವರ್ಷ ನೆಟ್​​​​​ಕ್ಲಬ್​​​ನಲ್ಲಿ ಮಧ್ಯಪಾನ ಮಾಡಿ ಜಗಳವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೋರ್ಟ್​ನಲ್ಲಿ ಇದೇ ಆಗಸ್ಟ್​ 6 ರಿಂದ ಆರಂಭಗೊಳ್ಳಲಿದ್ದು, ಹೀಗಾಗಿ ಎರಡನೇ ಟೆಸ್ಟ್​​ಗೆ ಇವರನ್ನು ತಂಡದಿಂದ ಕೈ ಬಿಡಲಾಗಿದೆ. ಅಂತೆಯೆ ಮಲಾನ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...