T20 World Cup 2022: ಟೀಂ ಇಂಡಿಯಾ ವಿಶ್ವಕಪ್​ ತಂಡವನ್ನು ಟೀಕಿಸಿದ ಕಾಂಗ್ರೆಸ್ ನಾಯಕ, ಫೇಸ್​ಬುಕ್​ ಪೋಸ್ಟ್ ವೈರಲ್

T20 World Cup 2022: ಟಿ20 ವಿಶ್ವಕಪ್​ ಆಯ್ಕೆ ಕುರಿತು ಇದೀಗ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ತೌಸೀಫ್ ಆಲಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಾಗಲೇ ಐಸಿಸಿ ಟಿ20 ವಿಶ್ವಕಪ್​ಗೆ (T20 World Cup 2022) ಭಾರತ ತಂಡವನ್ನು BCCI ಆಯ್ಕೆ  ಮಾಡಿದೆ. 15 ಜನರ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ (BCCI) ತಂಡದಲ್ಲಿ ಕೆಲ ಆಟಗಾರರನ್ನು ಕೈ ಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಕೆಲ ಆಟಗಾರರ ಆಯ್ಕೆಯ ಕುರಿತು ಕ್ರೀಡಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕಿಶನ್‌ಗಂಜ್ ಜಿಲ್ಲೆಯ ಬಹದ್ದೂರ್‌ಗಂಜ್ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ (Congress ) ನಾಯಕ ಮತ್ತು ಮಾಜಿ ಶಾಸಕ ತೌಸೀಫ್ ಆಲಂ (Tauseef Alam )ಅವರು ಟಿ 20 ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಕುರಿತು ಮಾಡಿರುವ ಫೇಸ್​ಬುಕ್ (FaceBook)​ ಪೋಸ್ಟ್ ಸಖತ್​ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಅವರು ಆಯ್ಕೆಗಾರರ ​​ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಟೀಂ ಇಂಡಿಯಾ ಆಯ್ಕೆ ಕುರಿತು ಪ್ರಶ್ನಿಸಿದ ಕಾಂಗ್ರೆಸ್​ ನಾಯಕ:

ಟಿ20 ವಿಶ್ವಕಪ್​ ಆಯ್ಕೆ ಕುರಿತು ಇದೀಗ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ತೌಸೀಫ್ ಆಲಂ ಅಸಮಾಧಾನ ವ್ಯಕ್ತಪಡಿಸಿದ್ದು, ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತ ತಂಡದಲ್ಲಿ ನ್ಯಾಯಯುತ ಆಯ್ಕೆಯಾಗುವವರೆಗೂ ನಾನು ಕ್ರಿಕೆಟ್ ನೋಡುವುದಿಲ್ಲ ಎಂದು ತೌಸಿಫ್ ಆಲಂ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆಯ್ಕೆಗಾರರ ​​ಈ ನಿರ್ಧಾರದಿಂದ ನನಗೆ ಆಶ್ಚರ್ಯವಾಗಿದೆ. ಶಮಿ, ಸಿರಾಜ್, ಖಲೀಲ್ ಅವರಂತಹ ಆಟಗಾರರು ಆಯ್ಕೆ ಆಗದಿರುವುದು  ನನಗೆ ಆಶ್ಚರ್ಯವಾಗಿದೆ. ಶಮಿ, ಸಿರಾಜ್, ಖಲೀಲ್ ಅಹಮ್ಮದ್ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದು ಅವರು ಬರೆದಿದ್ದಾರೆ.

ತೌಸೀಫ್ ಆಲಂ ಫೇಸ್​ಬುಕ್​ ಫೋಸ್ಟ್


ನಾನು ಕ್ರಿಕೆಟ್ ನೋಡುವುದಿಲ್ಲ ಎಂದ ತೌಸೀಫ್ ಆಲಂ:

ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, 'ಕ್ರಿಕೆಟ್ ಜಗತ್ತಿನಲ್ಲಿ ಭಾರತ ತಂಡದಲ್ಲಿ ನಿಷ್ಪಕ್ಷಪಾತ ಆಯ್ಕೆಯಾಗುವವರೆಗೂ ನಾನು ಕ್ರಿಕೆಟ್ ನೋಡುವುದಿಲ್ಲ. ಇಂದು 20-20 ವಿಶ್ವಕಪ್ ಆಯ್ಕೆದಾರರಿಂದ ನನಗೆ ಆಶ್ಚರ್ಯವಾಯಿತು. ಶಮಿ, ಸಿರಾಜ್, ಖಲೀಲ್ ಅಹಮ್ಮದ್ ಮುಂತಾದ ಆಟಗಾರರನ್ನು ತಂಡದಲ್ಲಿ ಆಯ್ಕೆ ಮಾಡಲಾಗಲಿಲ್ಲ‘ ಎಂದು ಹೇಳಿದ್ದಾರೆ. ಅಲ್ಲದೇ ಇವರ ಫೇಸ್‌ಬುಕ್ ಪೋಸ್ಟ್‌ಗೆ ಮೂರು ಗಂಟೆಗಳಲ್ಲಿ 250 ಕ್ಕೂ ಹೆಚ್ಚು ಕಾಮೆಂಟ್‌ಗಳು ಮತ್ತು 1200 ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಪೋಸ್ಟ್‌ನ ಕಾಮೆಂಟ್‌ಗಳಲ್ಲಿ, ಬಹುತೇಕ ಎಲ್ಲಾ ಕಾಮೆಂಟ್‌ಗಳು ಪೋಸ್ಟ್ ಅನ್ನು ಬೆಂಬಲಿಸಿರುವುದು ವಿಶೇಷವಾಗಿದೆ.

ಇದಕ್ಕೂ ಮೊದಲು, ಅವರು ದಿವಂಗತ ಲತಾ ಮಂಗೇಶ್ಕರ್, ಸ್ವರ ಕೋಕಿಲ ಭಾರತ ರತ್ನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು 'ಲತಾ ಮಂಗೇಶ್ಕರ್ ಮುಸ್ಲಿಂ ಆಗಿದ್ದರು' ಎಂದು ಬರೆದಿದ್ದಾರೆ. ಈ ಪೋಸ್ಟ್ ಬಗ್ಗೆಯೂ ಸಾಕಷ್ಟು ವಿವಾದಗಳು ನಡೆದಿದ್ದವು. ಆ ಪೋಸ್ಟ್ ವಿವಾದಕ್ಕೀಡಾದ ನಂತರ, ಅವರು ಹೇಳಿದ ಫೇಸ್‌ಬುಕ್ ಪೋಸ್ಟ್ ಅನ್ನು ನಕಲಿ ಎಂದು ಹೇಳಿಕೊಂಡಿದ್ದರು.

ಟಿ20 ವಿಶ್ವಕಪ್​ಗೆ ಆಯ್ಕೆ ಆದ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಸ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಹೆಚ್ಚುವರಿ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
Published by:shrikrishna bhat
First published: