PKL 2021: ಲೈವ್​ ಪಂದ್ಯ ನೋಡೋದೆಲ್ಲಿ? ಪ್ರೊ ಕಬ್ಬಡಿ ಲೀಗ್​ ಸೀಸನ್​ 8 ಟೂರ್ನಿಯ ಕಂಪ್ಲೀಟ್ ಮಾಹಿತಿ

ಡಿಸೆಂಬರ್ 22 ರಿಂದ ಮೊದಲಾರ್ಧ ಆರಂಭವಾಗುತ್ತಿದ್ದು, ಮೊದಲಾರ್ಧವು ಜನವರಿ 20, 2022 ರಂದು ಮುಕ್ತಾಯಗೊಳ್ಳಲಿದೆ. ಆ ಬಳಿಕ 2ನೇ ಸುತ್ತಿನ ಪಂದ್ಯಗಳು ಶುರುವಾಗಲಿದೆ. 2ನೇ ಸುತ್ತಿನ ಪಂ ಲದ್ಯಗಳಿಗಾಗಿ ಇನ್ನೂ ಕೂಡ ವೇಳಾಪಟ್ಟಿ ನಿಗದಿ ಮಾಡಿಲ್ಲ.

ಪ್ರೊ ಕಬಡ್ಡಿ ಸೀಸನ್​ 8

ಪ್ರೊ ಕಬಡ್ಡಿ ಸೀಸನ್​ 8

  • Share this:
Pro kabaddi league 2021 : ವಿವೋ ಪ್ರೋ ಕಬಡ್ಡಿ ಲೀಗ್(Vivo Pro Kabaddi) ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಇಂದಿನಿಂದ ಟೂರ್ನಿ ಆರಂಭವಾಗಲಿದೆ. ದೇಶೀಯ ಅಂಗಳದ ಕಬಡ್ಡಿ ಕದನ ಪ್ರೋ ಕಬಡ್ಡಿ ಲೀಗ್ ಸೀಸನ್ 8ಗೆ ಇಂದು ಸಂಜೆ ಚಾಲನೆ ಸಿಗಲಿದೆ. ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌(Sheraton Grand Hotel and Convention Center)ನಲ್ಲಿ ಪಂದ್ಯಗಳು ನಡೆಯಲಿದೆ. ಇದೇ ಮೊದಲ ಬಾರಿಗೆ ಕೊರೋನಾಂತಕದ ಕಾರಣ ಈ ಬಾರಿ ಪ್ರೇಕ್ಷಕರಿಲ್ಲದೆ ಪ್ರೋ ಕಬಡ್ಡಿಯನ್ನು ಆಯೋಜಿಸಲಾಗುತ್ತಿದೆ. ಇನ್ನು ಡಿಸೆಂಬರ್ 22 ರಂದು ನಡೆಯುವಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್(Bengaluru Bulls) ಹಾಗೂ ಮಾಜಿ ಚಾಂಪಿಯನ್ ಯು ಮುಂಬಾ(U Mumba) ಮುಖಾಮುಖಿಯಾಗಲಿದೆ.ಈ ಬಾರಿ ಬೆಂಗಳೂರು ಬುಲ್ಸ್(Bengaluru Bulls)​ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್​ ಟೀಂ ಆಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ(U Mumba) ಅವರಿಗೆ ಸೋಲಿಣಿಸಲು ಸಜ್ಜಾಗಿದ್ದಾರೆ. ತೊಡೆ ತಟ್ಟಿ ಗುಮ್ಮೋಕೆ ನಮ್ಮ ಬೆಂಗಳೂರು ಬುಲ್ಸ್​ ರೆಡಿಯಾಗಿದ್ದಾರೆ. ಡಿಸೆಂಬರ್​ 22ರಿಂದ ರಾತ್ರಿ 7:30ಕ್ಕೆ ಪ್ರೊ ಕಬಡ್ಡಿ ಸೀಸನ್​ 8 ಆರಂಭವಾಗಲಿದೆ.  ಈ ಪ್ರೊ ಕಬಡ್ಡಿ ಲೀಗ್​ ಪಂದ್ಯ ನೋಡದೆಲ್ಲ? ಯಾವ ಚಾನೆಲ್​ನಲ್ಲಿ ಲೈವ್​ ಟೆಲಿಕಾಸ್ಟ್​? ಎಷ್ಟು ಪಂದ್ಯ? ಈ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.  

12 ತಂಡಗಳ ನಡುವೆ ಕಬಡ್ಡಿ ಕಾಳಗ

ಈ ಬಾರಿ 12 ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಅದರಂತೆ ಬೆಂಗಳೂರು ಬುಲ್ಸ್, ಯು ಮುಂಬಾ, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಆದರೆ, ಬಾರಿ ಬೆಂಗಳೂರು ಬುಲ್ಸ್​ ಗೆಲ್ಲುವ ಫೇವರೆಟ್​ ತಂಡ ಎನಿಸಿಕೊಂಡಿದೆ.

ಇದನ್ನು ಓದಿ : ಅತಿಹೆಚ್ಚು ಕನ್ನಡಿಗರನ್ನ ಹೊಂದಿರುವ ಈ ತಂಡವೇ ಪ್ರೋ ಕಬಡ್ಡಿ ಗೆಲ್ಲಲು ಫೇವರಿಟ್

ಮೊದಲಾರ್ಧದ ಆರಂಭ, ಪಂದ್ಯದ ಸಮಯ ಏನು?


ಡಿಸೆಂಬರ್ 22 ರಿಂದ ಮೊದಲಾರ್ಧ ಆರಂಭವಾಗುತ್ತಿದ್ದು, ಮೊದಲಾರ್ಧವು ಜನವರಿ 20, 2022 ರಂದು ಮುಕ್ತಾಯಗೊಳ್ಳಲಿದೆ. ಆ ಬಳಿಕ 2ನೇ ಸುತ್ತಿನ ಪಂದ್ಯಗಳು ಶುರುವಾಗಲಿದೆ. 2ನೇ ಸುತ್ತಿನ ಪಂ ಲದ್ಯಗಳಿಗಾಗಿ ಇನ್ನೂ ಕೂಡ ವೇಳಾಪಟ್ಟಿ ನಿಗದಿ ಮಾಡಿಲ್ಲ.ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.


ಇದನ್ನು ಓದಿ : ಮತ್ತೆ ಬಂತು ಪ್ರೊ ಕಬಡ್ಡಿ.. ತೊಡೆ ತಟ್ಟಿ ಗುಮ್ಮೋಕೆ ರೆಡಿಯಾದ ಬೆಂಗಳೂರು ಬುಲ್ಸ್​!

ಯಾವ ಚಾನೆಲ್​ ಹಾಗೂ ಡಿಜಿಟಲ್​ ಫ್ಲಾಟ್​ಫಾರ್ಮ್​ನಲ್ಲಿ ಪ್ರಸಾರ?

ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಮಾ ಗೋಲ್ಡ್ ಮತ್ತು ಸ್ಟಾರ್ ಸುವರ್ಣ ಪ್ಲಸ್.​ ಪ್ರೊ ಕಬಡ್ಡಿ 2021 ರ ಎಲ್ಲಾ ಪಂದ್ಯಗಳನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಹಾಗೆಯೇ ಪ್ರೊ ಕಬಡ್ಡಿ ಲೀಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು PKL ಪಂದ್ಯಗಳ ಲೈವ್ ಸ್ಕೋರ್‌ಗಳನ್ನು ವೀಕ್ಷಿಸಬಹುದು. 20 ತಿಂಗಳ ಬಳಿಕ ಇಂದಿನಿಂದ ಪ್ರೊ ಕಬಡ್ಡಿ ಲೀಗ್​ ಆರಂಭವಾಗುತ್ತಿರುವುದು ಕ್ರೀಡಾಭಿಮಾನಿಗಳಿಗೆ ಸಖತ್​ ಖುಷಿ ಕೊಟ್ಟಿದೆ.
Published by:Vasudeva M
First published: