CWG 2022: ಭಾರತಕ್ಕೆ ಮತ್ತೊಂದು ಬೆಳ್ಳಿ, ಒಂದೇ ದಿನ 4 ಪದಕಕ್ಕೆ ಮುತ್ತಿಕ್ಕಿದ ಭಾರತೀಯರು

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2022 ರಲ್ಲಿ ಭಾರತ ಒಂದೇ ದಿನ ಬರೋಬ್ಬರಿ 4 ಪದಕಗಳನ್ನು ಗೆದ್ದಿದೆ. ದಿನ ಅಂತ್ಯದದಲ್ಲಿ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ಗೆದ್ದು ಬೀಗಿದರು.

ಬಿಂದ್ಯಾರಾಣಿ ದೇವಿ

ಬಿಂದ್ಯಾರಾಣಿ ದೇವಿ

  • Share this:
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2022 ರಲ್ಲಿ (Commonwealth Games 2022) ಭಾರತ (India) ಒಂದೇ ದಿನ ಬರೋಬ್ಬರಿ 4 ಪದಕಗಳನ್ನು ಗೆದ್ದಿದೆ. ದಿನ ಅಂತ್ಯದದಲ್ಲಿ 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ (Bindyarani Devi) ಬೆಳ್ಳಿ (Silver) ಪದಕ ಗೆಲ್ಲುವ ಮೂಲಕ ಭಾರತಕ್ಕೆ 4ನೇ ಪದಕವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ 1 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಂತಾಗಿದೆ. ಇನ್ನು, ಅಂತಿಮ ಲಿಫ್ಟ್​ನಲ್ಲಿ 116 ಕೆಜಿ ಭಾರ ಎತ್ತು ಮೂಲಕ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಮೀರಾಬಾಯಿ ಚಾನು (Mirabai Chanu) ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದರು.

ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಬಿಂದ್ಯಾರಾಣಿ:

ಹೌದು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2022ರ 2ನೇ ದಿನದ ಅಂತ್ಯದ ವೇಳೆಗೆ ಭಾರತ ತಂಡ ಒಟ್ಟು 4 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನ ನೀಡುತ್ತಿದೆ. ದಿನದ ಅಂತ್ಯದಲ್ಲಿ 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದರು. ಅಂತಿಮ ಲಿಫ್ಟ್​ನಲ್ಲಿ 116 ಕೆಜಿ ತೂಕ ಎತ್ತುವ ಮೂಲಕ ಬಿಂದ್ಯಾರಾಣಿ ದೇವಿ ಭಾರತಕ್ಕೆ ಮತ್ತೊಂದು ಪದಕವನ್ನು ಗೆದ್ದರು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯೆಗೆ ಚಿನ್ನದ ಪದಕ ಮತ್ತು ಫ್ರೇರ್ ಮೊರೊ ಕಂಚಿನ ಪದಕವನ್ನು ಗೆದ್ದರು.

ಒಂದೇ ದಿನ 4 ಪದಕ ಗೆದ್ದ ಭಾರತೀಯರು:

ಇನ್ನು, ಭಾರತ ತಂಡ ಕಾಮನ್​ವೆಲ್ತ್ ಗೇಮ್ಸ್ 2022ರ 2ನೇ ದಿನದ ಅಂತ್ಯಕ್ಕೆ ಬರೋಬ್ಬರಿ 4 ಪದಕಗಳ ಭೇಟೆಯಾಡಿದೆ. ಹೌದು, ಮೀರಾಬಾಯಿ ಚಾನು ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದರು. ಉಳಿದಂತೆ ಕಾಮನ್​ವೆಲ್ತ್ ಗೇಮ್ಸ್​ 2022ರಲ್ಲಿ ಭಾರತದ ಸಂಕೇತ್ ಸರ್ಗರ್ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ. ಅವರು ಒಟ್ಟು 248 ಕೆಜಿ (113 ಸ್ನ್ಯಾಚ್, 135 ಕ್ಲೀನ್ & ಜರ್ಕ್) ಎತ್ತಿ ಎರಡನೇ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ: CWG 2022: ಕಾಮನ್​ವೆಲ್ತ್ ​ನಲ್ಲಿ ಭಾರತಕ್ಕೆ ಮೊದಲ ಚಿನ್ನ, ವೇಟ್‌ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಸಾಧನೆ

ಇವರ ಜೊತೆ ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಗುರುರಾಜ್ ಪುಜಾರಿ ಪುರುಷರ 61 ಕೆಜಿ ವಿಭಾಗದಲ್ಲಿ  ಕಂಚಿನ ಪದಕವನ್ನು ಗೆದ್ದಿದ್ದಾರೆ.

ಕಾಮನ್​ವೆಲ್ತ್​ ಗೇಮ್ಸ್ 2022 ಅಂಕಪಟ್ಟಿ:

ಕಾಮನ್​ವೆಲ್ತ್ ಗೇಮ್ಸ್ 2022ರ ಸದ್ಯದ ಅಂಕಪಟ್ಟಿಯ ಪ್ರಕಾರ ಆಸ್ಟ್ರೇಲಿಯಾ ಮದೊಲ ಸ್ಥಾನದಲ್ಲಿದೆ. ಆಸೀಸ್​ 13 ಚಿನ್ನ, 8 ಬೆಳ್ಳಿ ಮತ್ತು 11 ಕಂಚು ಸೇರಿ ಒಟ್ಟು 32 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ನ್ಯೂಜಿಲ್ಯಾಂಡ್​ 13 ಪದಕಗಳೊಂದಿಗೆ 2ನೇ ಸ್ಥಾನ, ಇಂಗ್ಲೆಂಡ್​ 21 ಪದಕ 3ನೇ ಸ್ಥಾನ, ಕೆನಡಾ 11 ಪದಕದ ಜೊತೆ 4ನೇ ಸ್ಥಾನದಲ್ಲಿದ್ದರೆ ಭಾರತ ಒಟ್ಟು 1 ಚಿನ್ನ 2 ಬೆಳ್ಳಿ ಮತ್ತು 1 ಕಂಚು ಸೇರಿ ಒಟ್ಟು 4 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
Published by:shrikrishna bhat
First published: