CWG 2022: ಕಾಮನ್​ವೆಲ್ತ್ ​ನಲ್ಲಿ ಭಾರತಕ್ಕೆ ಮೊದಲ ಚಿನ್ನ, ವೇಟ್‌ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಸಾಧನೆ

2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ.

ಮೀರಾಬಾಯಿ ಚಾನು

ಮೀರಾಬಾಯಿ ಚಾನು

  • Share this:
2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2022) ಭಾರತಕ್ಕೆ (India) ಮೊದಲ ಚಿನ್ನದ (Gold) ಪದಕ ಲಭಿಸಿದೆ.  ಹೌದು,  ಭಾರತದ ಕಾಮನ್​ವೆಲ್ತ್ ಗೇಮ್ಸ್​ನ 2ನೇ ದಿನದಂದು (Commonwealth Games 2022 Day 2)  ಮೀರಾಬಾಯಿ ಚಾನು (Mirabai Chanu) ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಭಾರತಕ್ಕೆ ಬರೋಬ್ಬರಿ 3 ಪದಕಗಳು ಬಂದಂತಾಗಿದೆ. ಇನ್ನು, ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ಗೆದ್ದಿದ್ದ ಚಾನು ಕಾಮನ್‌ವೆಲ್ತ್ ನಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ಭಾರತದ ಚಿನ್ನದ ಭೇಟೆಯನ್ನು ಆರಂಭಿಸಿದ್ದಾರೆ.

ಭಾರತಕ್ಕೆ ಮೊದಲ ಚಿನ್ನದ ಪದಕ:

ಇಂದು 2ನೇ ದಿನದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಭರ್ಜರಿ ಪದಕಗಳ ಭೇಟಿ ಆರಂಭಿಸಿದೆ. ಅದರಲ್ಲಿಯೂ ಕಾಮನ್‌ವೆಲ್ತ್ ಕ್ರೀಡಾಕೂಟದ 2ಣೇ ದಿನವೇ ಚಿನ್ನದ ಪದಕವನ್ನು ಗೆದ್ದಿದೆ. ಮೀರಾಬಾಯಿ ಚಾನು ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮೀರಾಬಾಯಿ ಚಾನು


ಮೊದಲ ಪ್ರಯತ್ನದಲ್ಲಿ ಚಾನು 109KG, ಎರಡನೇ ಪ್ರಯತ್ನದಲ್ಲಿ 113 KG ಭಾರ ಎತ್ತಿದರು. ಅಂತಿಮವಾಗಿ 201ಕೆ.ಜಿ ಭಾರ ಎತ್ತುವ ಮೂಲಕ ದಾಖಲೆಯ ಭಾರ ಎತ್ತಿದ್ದಲ್ಲದೇ ಚಿನ್ನದ ಪದಕವನ್ನು ಗೆದ್ದು ಬೀಗಿದರು. ಭಾರತದ ಈ ಸ್ಟಾರ್ ವೇಟ್ ಲಿಫ್ಟರ್ ಕಳೆದ ಕಾಮನ್​ವೆಲ್ತ್ ನಲ್ಲಿಯೂ ಚಿನ್ನದ ಪದಕವನ್ನು ಗೆದ್ದಿದ್ದರು. ಇನ್ನು, ಮೇರಿ ರೋಲಿಯಾ 172 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಹನಾ 171 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಚಾನುಗೆ ಗಣ್ಯರಿಂದ ಶುಭಹಾರೈಕೆ:

ಇನ್ನು,  ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು ಅವರಿಗೆ ಗಣ್ಯರಿಂದ ಶುಭಹಾರೈಕೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕ್ರಿಕೆಟ್ ದೇವರು ಸಚಿನ್ ಸೇರಿದಂತೆ ಅನೇಕರು ಟ್ವಿಟರ್ ಮೂಲಕ ಶುಭಾಷಯ ತಿಳಿಸುತ್ತಿದ್ದಾರೆ.

ಭಾರತದ ಖಾತೆ ತೆರೆದಿದ್ದ ಸಂಕೇತ್ ಸರ್ಗರ್:

ಕಾಮನ್​ವೆಲ್ತ್ ಗೇಮ್ಸ್​ 2022ರಲ್ಲಿ ಭಾರತದ ಸಂಕೇತ್ ಸರ್ಗರ್ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ. ಅವರು ಒಟ್ಟು 248 ಕೆಜಿ (113 ಸ್ನ್ಯಾಚ್, 135 ಕ್ಲೀನ್ & ಜರ್ಕ್) ಎತ್ತಿ ಎರಡನೇ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ: Gururaj Poojary: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕನ್ನಡಿಗನ ಸಾಧನೆ; ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಕಂಚು

ಇವರ ಜೊತೆ ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಗುರುರಾಜ್ ಪುಜಾರಿ ಪುರುಷರ 61 ಕೆಜಿ ವಿಭಾಗದಲ್ಲಿ  ಕಂಚಿನ ಪದಕವನ್ನು ಗೆದ್ದಿದ್ದಾರೆ.
Published by:shrikrishna bhat
First published: