Commonwealth Games 2022: ಪದಕಗಳ ಬೇಟೆಗೆ ಟೀಂ ಇಂಡಿಯಾ ಸಜ್ಜು, ಮೆಗಾ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ

ಈ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೇ ಇದೇ ಮೊದಲ ಬಾರಿ ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡ ಸಹ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದೆ.

ಕಾಮನ್‌ವೆಲ್ತ್ ಗೇಮ್ಸ್ 2022

ಕಾಮನ್‌ವೆಲ್ತ್ ಗೇಮ್ಸ್ 2022

  • Share this:
ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಭಾರತ ತಂಡ 66 ಪದಕಗಳನ್ನು ಗೆದ್ದು ಮೂರನೇ ಸ್ಥಾನ ಪಡೆದುಕೊಂಡಿತ್ತು. ಇದಾದ ಬಳಿಕ ನಾಲ್ಕು ವರ್ಷಗಳ ನಂತರ ಇಂಗ್ಲೆಂಡ್ ನಲ್ಲಿ (England ) ನಡೆಯಲಿರುವ ಬರ್ಮಿಂಗ್ ಹ್ಯಾಮ್ (Bramingham) ಕಾಮನ್ ವೆಲ್ತ್ ಕ್ರೀಡಾಕೂಟದ ಚಾಲನೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಜುಲೈ 28 ರಿಂದ ಆಗಸ್ಟ್ 8ರ ವರೆಗೆ 72 ದೇಶಗಳ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು (PV Sindhu) ಮತ್ತು ಮಹಿಳಾ ಕ್ರಿಕೆಟ್ ಮತ್ತು ಹಾಕಿಯಲ್ಲಿ ಚಿನ್ನದ ಪದಕದೊಂದಿಗೆ ಈ ಬಾರಿ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಭಾರತ ಹೊಂದಿದೆ. ಈ ಮೆಗಾ ಈವೆಂಟ್‌ನಲ್ಲಿ 214 ಸದಸ್ಯರ ಭಾರತ ತಂಡ 16 ಕ್ರೀಡೆಗಳಲ್ಲಿ ಭಾಗವಹಿಸಲಿದೆ. ಈ ಪಂದ್ಯಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಮೊದಲ ಬಾರಿಗೆ ಅವಕಾಶ ದೊರಕಿದೆ. ಕಾಮನ್‌ವೆಲ್ತ್ ಗೇಮ್ಸ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಗುರುವಾರ ಮಧ್ಯರಾತ್ರಿಯ ನಂತರ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ.

ಭಾರತ ತಂಡದ ವೇಳಾಪಟ್ಟಿ:

ಇನ್ನು, ಈ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೇ ಇದೇ ಮೊದಲ ಬಾರಿ ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡ ಸಹ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದೆ. ಹಾಗಿದ್ದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡದ ವೇಳಾಪಟ್ಟಿ ಹೇಗಿದೆ ನೋಡೋಣ ಬನ್ನಿ. ಜುಲೈ 29: ಅಶ್ವಿನಿ ಪೊನ್ನಪ್ಪ, ಸುಮೀತ್ ರೆಡ್ಡಿ (ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್) ಮೂಲಕ ಭಾರತ ಪದಕ ಬೇಟೆಯನ್ನು ಆರಂಭಿಸಲಿದೆ.

ಅಥ್ಲೆಟಿಕ್ಸ್:

30 ಜುಲೈ: ನಿತೇಂದರ್ ರಾವತ್ (ಪುರುಷರ ಮ್ಯಾರಥಾನ್)

2 ಆಗಸ್ಟ್: ಅವಿನಾಶ್ ಸೇಬಲ್ (ಪುರುಷರ 3000ಮೀ ಸ್ಟೀಪಲ್‌ಚೇಸ್)
ಮುರಳಿ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್)
ಮುಹಮ್ಮದ್ ಅನೀಸ್ ಯಾಹಿಯಾ (ಪುರುಷರ ಲಾಂಗ್ ಜಂಪ್)
ಧನಲಕ್ಷ್ಮಿ ಸೇಕರ್ (ಮಹಿಳೆಯರ 100 ಮೀ)
ಜ್ಯೋತಿ ಯರ್ರಾಜಿ (ಮಹಿಳೆಯರ 100 ಮೀ ಹರ್ಡಲ್ಸ್)
ಮನ್‌ಪ್ರೀತ್ ಕೌರ್ (ಮಹಿಳೆಯರ ಶಾಟ್‌ಪುಟ್)
ನವಜೀತ್ ಕೌರ್ ಧಿಲ್ಲೋನ್ (ಮಹಿಳಾ ಡಿಸ್ಕಸ್ ಥ್ರೋ)

3 ಆಗಸ್ಟ್: ಐಶ್ವರ್ಯಾ ಬಿ (ಮಹಿಳಾ ಟ್ರಿಪಲ್ ಜಂಪ್)

5 ಆಗಸ್ಟ್: ಅಬ್ದುಲ್ಲಾ ಅಬೂಬಕರ್ (ಪುರುಷರ ಟ್ರಿಪಲ್ ಜಂಪ್)
ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್)
ಎಲ್ದೋಸ್ ಪಾಲ್ (ಪುರುಷರ ಟ್ರಿಪಲ್ ಜಂಪ್)
ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ)
ಡಿಪಿ ಮನು (ಪುರುಷರ ಜಾವೆಲಿನ್ ಥ್ರೋ)
ರೋಹಿತ್ ಯಾದವ್ (ಪುರುಷರ ಜಾವೆಲಿನ್ ಥ್ರೋ)
ಸಂದೀಪ್ ಕುಮಾರ್ (ಪುರುಷರ 10 ಕಿ.ಮೀ ಓಟದ ನಡಿಗೆ)
ಅಮಿತ್ ಖತ್ರಿ (ಪುರುಷರ 10 ಕಿಮೀ ಓಟದ ನಡಿಗೆ)
ಐಶ್ವರ್ಯಾ ಬಿ (ಮಹಿಳೆಯರ ಲಾಂಗ್ ಜಂಪ್)
ಆನ್ಸಿ ಸೋಜನ್ (ಮಹಿಳೆಯರ ಲಾಂಗ್ ಜಂಪ್)
ಅಣ್ಣು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ)
ಶಿಲ್ಪಾ ರಾಣಿ (ಮಹಿಳೆಯರ ಜಾವೆಲಿನ್ ಥ್ರೋ)
ಮಂಜು ಬಾಲಾ ಸಿಂಗ್ (ಮಹಿಳೆಯರ ಹ್ಯಾಮರ್ ಥ್ರೋ)
ಸರಿತಾ ರೋಮಿತ್ ಸಿಂಗ್ (ಮಹಿಳೆಯರ ಹ್ಯಾಮರ್ ಥ್ರೋ)

ಇದನ್ನೂ ಓದಿ: IND vs WI: ಟೀಂ ಇಂಡಿಯಾಗೆ ಬಿಗ್​ ಶಾಕ್​, ವಿಂಡೀಸ್​ ವಿರುದ್ಧದ ಟಿ20 ಸರಣಿಗೆ ಸ್ಟಾರ್​ ಆಟಗಾರ ಔಟ್​?

6 ಆಗಸ್ಟ್: ಅಮೋಜ್ ಜಾಕೋಬ್ (ಪುರುಷರ 4x400 ಮೀ ರಿಲೇ)
ನೋಹ್ ನಿರ್ಮಲ್ ಟಾಮ್ (ಪುರುಷರ 4x400 ಮೀ ರಿಲೇ)
ಅರೋಕಿಯಾ ರಾಜೀವ್ (ಪುರುಷರ 4x400 ಮೀ ರಿಲೇ)
ಮುಹಮ್ಮದ್ ಅಜ್ಮಲ್ (ಪುರುಷರ 4x400 ಮೀ ರಿಲೇ)
ನಾಗನಾಥನ್ ಪಾಂಡಿ (ಪುರುಷರ 4x400 ಮೀ ರಿಲೇ)
ರಾಜೇಶ್ ರಮೇಶ್ (ಪುರುಷರ 4x400 ಮೀ ರಿಲೇ)
ಭಾವನಾ ಜಾಟ್ (ಮಹಿಳೆಯರ 10 ಕಿಮೀ ಓಟದ ನಡಿಗೆ)
ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 10 ಕಿಮೀ ಓಟದ ನಡಿಗೆ)
ಹಿಮಾ ದಾಸ್ (ಮಹಿಳೆಯರ 4x100 ಮೀ ರಿಲೇ)
ದ್ಯುತಿ ಚಂದ್ (ಮಹಿಳೆಯರ 4x100 ಮೀ ರಿಲೇ)
ಶ್ರಬಾನಿ ನಂದಾ (ಮಹಿಳೆಯರ 4x100 ಮೀ ರಿಲೇ)
ಎಂವಿ ಜಿಲ್ನಾ (ಮಹಿಳೆಯರ 4x100 ಮೀ ರಿಲೇ)
ಎನ್ ಎಸ್ ಸಿಮಿ (ಮಹಿಳೆಯರ 4x100ಮೀ ರಿಲೇ)

ಬ್ಯಾಡ್ಮಿಂಟನ್

29 ಜುಲೈ: ಅಶ್ವಿನಿ ಪೊನ್ನಪ್ಪ (ಮಿಶ್ರ ಡಬಲ್ಸ್)
ಬಿ ಸುಮೀತ್ ರೆಡ್ಡಿ (ಮಿಶ್ರ ಡಬಲ್ಸ್)

3 ಆಗಸ್ಟ್: ಪಿವಿ ಸಿಂಧು (ಮಹಿಳಾ ಸಿಂಗಲ್ಸ್)
ಆಕರ್ಷಿ ಕಶ್ಯಪ್ (ಮಹಿಳಾ ಸಿಂಗಲ್ಸ್)
ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್)
ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್)

4 ಆಗಸ್ಟ್: ಟ್ರೀಸಾ ಜಾಲಿ (ಮಹಿಳಾ ಡಬಲ್ಸ್)
ಗಾಯತ್ರಿ ಗೋಪಿಚಂದ್ (ಮಹಿಳಾ ಡಬಲ್ಸ್)
ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ (ಪುರುಷರ ಡಬಲ್ಸ್)
ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್)

ಬಾಕ್ಸಿಂಗ್

30 ಜುಲೈ: ಅಮಿತ್ ಪಂಗಲ್ (ಪುರುಷರ 51 ಕೆಜಿ)
ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 57 ಕೆಜಿ)
ಶಿವ ಥಾಪಾ (ಪುರುಷರ 63.5 ಕೆಜಿ)
ರೋಹಿತ್ ಟೋಕಾಸ್ (ಪುರುಷರ 67 ಕೆಜಿ)
ಸುಮಿತ್ ಕುಂದು (ಪುರುಷರ 75 ಕೆಜಿ)
ಆಶಿಶ್ ಚೌಧರಿ (ಪುರುಷರ 80 ಕೆಜಿ)
ಸಂಜೀತ್ (ಪುರುಷರ 92 ಕೆಜಿ)
ಸಾಗರ್ (ಪುರುಷರ 92+ಕೆಜಿ)
ನಿತು (ಮಹಿಳೆಯರ 48 ಕೆಜಿ)
ನಿಖತ್ ಜರೀನ್ (ಮಹಿಳೆಯರ 50 ಕೆಜಿ)
ಜಾಸ್ಮಿನ್ (ಮಹಿಳೆಯರ 60 ಕೆಜಿ)
ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 70 ಕೆಜಿ)

ಕ್ರಿಕೆಟ್:

29 ಜುಲೈ: ಭಾರತ vs ಆಸ್ಟ್ರೇಲಿಯಾ
31 ಜುಲೈ: ಭಾರತ vs ಪಾಕಿಸ್ತಾನ
3 ಆಗಸ್ಟ್: ಭಾರತ vs ಬಾರ್ಬಡೋಸ್

ಇದನ್ನೂ ಓದಿ: MS Dhoni: ಧೋನಿಗೆ ಸುಪ್ರೀಂ ಕೋರ್ಟ್ ನೋಟಿಸ್, ಏನಿದು ಹೊಸ ಪ್ರಕರಣ?

ಪುರುಷರ ಹಾಕಿ

31 ಜುಲೈ: ಭಾರತ vs ಘಾನಾ
1 ಆಗಸ್ಟ್: ಭಾರತ vs ಇಂಗ್ಲೆಂಡ್
3 ಆಗಸ್ಟ್: ಭಾರತ vs ಕೆನಡಾ
4 ಆಗಸ್ಟ್: ಭಾರತ vs ವೇಲ್ಸ್

ಮಹಿಳೆಯರ ಹಾಕಿ

29 ಜುಲೈ: ಭಾರತ vs ಘಾನಾ
30 ಜುಲೈ: ಭಾರತ vs ವೇಲ್ಸ್
2 ಆಗಸ್ಟ್: ಭಾರತ vs ಇಂಗ್ಲೆಂಡ್
3 ಆಗಸ್ಟ್: ಭಾರತ vs ಕೆನಡಾ

ವೇಟ್​ ಲಿಫ್ಟಿಂಗ್​:

30 ಜುಲೈ: ಮೀರಾಬಾಯಿ ಚಾನು (ಮಹಿಳೆಯರ 55 ಕೆಜಿ)
ಸಂಕೇತ್ ಮಹದೇವ್ (ಪುರುಷರ 55 ಕೆಜಿ)
ಚನಂಬಮ್ ರಿಷಿಕಾಂತ ಸಿಂಗ್ (ಪುರುಷರ 55 ಕೆಜಿ)

31 ಜುಲೈ: ಬಿಂದ್ಯಾರಾಣಿ ದೇವಿ (ಮಹಿಳೆಯರ 59 ಕೆಜಿ)
ಜೆರೆಮಿ ಲಾಲ್ರಿನ್ನುಂಗಾ (ಪುರುಷರ 67 ಕೆಜಿ)
ಅಚಿಂತಾ ಶೆಯುಲಿ (ಪುರುಷರ 73 ಕೆಜಿ)

1 ಆಗಸ್ಟ್: ಪಾಪಿ ಹಜಾರಿಕಾ (ಮಹಿಳೆಯರ 64 ಕೆಜಿ)
ಅಜಯ್ ಸಿಂಗ್ (ಪುರುಷರ 81 ಕೆಜಿ)

2 ಆಗಸ್ಟ್: ಉಷಾ ಕುಮಾರ (ಮಹಿಳೆಯರ 87 ಕೆಜಿ)
ಪೂರ್ಣಿಮಾ ಪಾಂಡೆ (ಮಹಿಳೆಯರ 87+ಕೆಜಿ)
ವಿಕಾಸ್ ಠಾಕೂರ್ (ಪುರುಷರ 96 ಕೆಜಿ)
ರಾಗಲಾ ವೆಂಕಟ್ ರಾಹುಲ್ (ಪುರುಷರ 96 ಕೆಜಿ)
Published by:shrikrishna bhat
First published: