CWG 2022: ಕಾಮನ್‌ವೆಲ್ತ್ ಗೇಮ್ಸ್​ನ ಟಾಪ್​ 7ರಲ್ಲಿ ಭಾರತ, ಈವರೆಗೂ ಗೆದ್ದ ಪದಕಗಳೇಷ್ಟು?

ಕಾಮನ್​ವೆಲ್ತ್ ಗೇಮ್ಸ್ 2022ರ ಸದ್ಯದ ಅಂಕಪಟ್ಟಿಯ ಪ್ರಕಾರ ಭಾರತ ಒಟ್ಟು 6 ಚಿನ್ನ 7 ಬೆಳ್ಳಿ ಮತ್ತು 7 ಕಂಚು ಸೇರಿ ಒಟ್ಟು 20 ಪದಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಮನ್‌ವೆಲ್ತ್ ಕ್ರೀಡಾಕೂಟ 2022 ರಲ್ಲಿ (Commonwealth Games 2022) ಭಾರತದ (India) ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪದಕದ ಬೇಟೆ ಮುಂದುವರೆದಿದೆ. ಈವರೆಗೂ ಬರೋಬ್ಬರಿ 20 ಪದಕಗಳನ್ನು ಬಾಜಿಕೊಂಡಿರುವ ಭಾರತ. 6 ಚಿನ್ನ (Gold), 7 ಬೆಳ್ಳಿ ಹಾಗೂ 7 ಕಂಚು ಪದಕವನ್ನು ಪಡೆದುಕೊಂಡಿದೆ. ಆದರೆ ವಿಶೇಷವೆಂದರೆ ಇದರಲ್ಲಿ 10 ಪದಕಗಳು ವೇಟ್​ ಲಿಫ್ಟಿಂಗ್ ​​ನಲ್ಲಿಯೇ ಪದಕಗಳು ಬಂದಿದ್ದು, ಭಾರತದ ಹೆಮ್ಮೆಯನ್ನು ವೇಟ್​ ಲಿಫ್ಟರ್​ಗಳು ಮುಗಿಲೆತ್ತರಕ್ಕೆ ಎತ್ತಿ ಹಿಡಿದಿದ್ದಾರೆ. ಕಳೆದ ರಾತ್ರಿ ಲಾಂಗ್​ಜಂಪ್​ನಲ್ಲಿ ಮುರಳಿ ಶ್ರೀಶಂಕರ್ (Murali Sreeshankar) ಬೆಳ್ಳಿ ಹಾಗೂ  ಪ್ಯಾರಾ ಪವರ್ ಲಿಫ್ಟಿಂಗ್​​ನಲ್ಲಿ ಭಾರತದ ಸುಧೀರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಈ ಭಾರಿ ಭಾರತ ಭರ್ಜರಿಯಾಗಿ ಪದಕ ಭೇಟೆಯಲ್ಲಿ ಮುನ್ನುಗ್ಗುತ್ತಿದೆ.

ಚಿನ್ನದ ಭೇಟೆಯಲ್ಲಿ ಭಾರತ:

ಮೀರಾಬಾಯಿ ಚಾನು ದೇಶಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಇವರು ಸ್ನ್ಯಾಚ್‌ನಲ್ಲಿ 140 ಕೆಜಿ ಹಾಗೂ ಜರ್ಕ್ ನಲ್ಲಿ 160 ಕೆಜಿ ತೂಕವನ್ನು ಎತ್ತಿದರು. ಕೊನೆಯ ಸುತ್ತಿನಲ್ಲಿ ಬರೋಬ್ಬರಿ 300 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದು ಬೀಗಿದರು.  ಉಳಿದಂತೆ ಅಚಿಂತಾ ಶೆಯುಲಿ, ಟೆಬಲ್​ ಟನ್ನಿಸ್​, ಸುದೀರ್​ ಅವರು ಸಹ ಪ್ಯಾರಾ ಪವರ್ಲಿಫ್ಟಿಂಗ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: CWG 2022: ಭಾರತಕ್ಕೆ ಮತ್ತೊಂದು ಬೆಳ್ಳಿ, ಒಂದೇ ದಿನ 4 ಪದಕಕ್ಕೆ ಮುತ್ತಿಕ್ಕಿದ ಭಾರತೀಯರು

ಬೆಳ್ಳಿ ಮತ್ತು ಕಂಚಿನ್ ಪದಕದ ಪಟ್ಟಿ:

ಇನ್ನು, ಭಾರತದ ಸಂಕೇತ್ ಸರ್ಗರ್ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ  ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದರು. ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ  ಪುರುಷರ 61 ಕೆಜಿ ವಿಭಾಗದಲ್ಲಿ  ಕಂಚಿನ ಪದಕವನ್ನು ಗೆದ್ದಿದ್ದಾರೆ.

ಬಿಂದ್ಯಾರಾಣಿ ದೇವಿ -ವೇಟ್​ ಲಿಫ್ಟಿಂಗ್ (ಬೆಳ್ಳಿ)​, ಶುಶೀಲಾ ಲಿಕ್ಮಾಬಮ್ (ಬೆಳ್ಳಿ), ವಿಕಾಸ್ ಠಾಕೂರ್ -ವೇಟ್​ ಲಿಫ್ಟಿಂಗ್​ (ಬೆಳ್ಳಿ), ಬ್ಯಾಡ್ಮಿಂಟನ್ (ತಂಡವಾಗಿ) (ಬೆಳ್ಳಿ), ತುಲಿಕಾ - ಜೂಡೋ (ಬೆಳ್ಳಿ), ಮುರಳಿ ಶ್ರೀಶಂಕರ್- ಅಥ್ಲೆಟಿಕ್ಸ್ (ಬೆಳ್ಳಿ), ವಿಜಯ್ ಕುಮಾರ್ ಯಾದವ್- ಜೂಡೋ (ಕಂಚು) , ಹರ್ಜಿಂದರ್ ಕೌರ್- ಭಾರ ಎತ್ತುವಿಕೆ (ಕಂಚು), ಲವ್ಪ್ರೀತ್ ಸಿಂಗ್- ಭಾರ ಎತ್ತುವಿಕೆ (ಕಂಚು), ಸೌರವ್ ಘೋಸಲ್- ಸ್ಕ್ವ್ಯಾಷ್ (ಕಂಚು), ಗುರುದೀಪ್ ಸಿಂಗ್- ಭಾರ ಎತ್ತುವಿಕೆ (ಕಂಚು), ತೇಜಸ್ವಿನ್ ಶಂಕರ್- ಅಥ್ಲೆಟಿಕ್ಸ್ (ಕಂಚು) ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: CWG 2022: ಭಾರತಕ್ಕೆ ಮತ್ತೊಂದು ಬೆಳ್ಳಿ, ಒಂದೇ ದಿನ 4 ಪದಕಕ್ಕೆ ಮುತ್ತಿಕ್ಕಿದ ಭಾರತೀಯರು

7ನೇ ಸ್ಥಾನದಲ್ಲಿ ಭಾರತ ತಂಡ:

ಕಾಮನ್​ವೆಲ್ತ್ ಗೇಮ್ಸ್ 2022ರ ಸದ್ಯದ ಅಂಕಪಟ್ಟಿಯ ಪ್ರಕಾರ ಭಾರತ ಒಟ್ಟು 6 ಚಿನ್ನ 7 ಬೆಳ್ಳಿ ಮತ್ತು 7 ಕಂಚು ಸೇರಿ ಒಟ್ಟು 20 ಪದಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಉಳಿದಂತೆ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆಸೀಸ್​ 50 ಚಿನ್ನ, 42 ಬೆಳ್ಳಿ ಮತ್ತು 40 ಕಂಚು ಸೇರಿ ಒಟ್ಟು 132 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಇಂಗ್ಲೆಂಡ್​ 42 ಪದಕ 2ನೇ ಸ್ಥಾನ, ಕೆನಡಾ 59 ಪದಕದ ಜೊತೆ 3ನೇ ಸ್ಥಾನ, ನ್ಯೂಜಿಲ್ಯಾಂಡ್​ 37 ಪದಕದ ಜೊತೆ 4ನೇ ಸ್ಥಾನ ಮತ್ತು ಸ್ಕಾಟ್ಲೆಂಡ್​ 34 ಪದಕದ ಜೊತೆ 5ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಈ ಬಾರಿ ಭಾರತವು ಉತ್ತಮ ಪ್ರದರ್ಶನ ಣಿಡುತ್ತಿದ್ದು, ಮಹಿಳಾ ಕ್ರಿಕೆಟ್​ ತಂಡವೂ ಸಹ ಚಿನ್ನ ಗೆಲ್ಲುವ ನಿರೀಕ್ಷೆ ಹೊಂದಿದೆ.
Published by:shrikrishna bhat
First published: