• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs PAK CWG 2022: ನಾಳೆ ಭಾರತ-ಪಾಕ್​ ಮುಖಾಮುಖಿ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?

IND vs PAK CWG 2022: ನಾಳೆ ಭಾರತ-ಪಾಕ್​ ಮುಖಾಮುಖಿ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?

ND vs PAK CWG 2022

ND vs PAK CWG 2022

ನಾಳೆ ಭಾರತ ಮತ್ತು ಪಾಕಿಸ್ತಾನ (IND vs PAk) ತಂಡಗಳು ಸೆಣಸಾಡಲಿವೆ. ಅಲ್ಲದೇ ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ನಾಳಿನ ಪಂದ್ಯ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿದೆ.

  • Share this:

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ (Commonwealth Games) ಇದೇ ಮೊದಲ ಬಾರಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಆಟವಾಡುತ್ತಿದೆ. ಹೀಗಾಗಿ ಕೋಟ್ಯಾಂತರ ಭಾರತೀಯರು ಮಹಿಳಾ ಕ್ರಿಕೆಟ್ (Womens Cricket) ತಂಡದ ಮೇಲೆ ನಿರೀಕ್ಷೆಯನ್ನಿಟ್ಟಿದ್ದು, ಪದಕ ಗೆಲ್ಲುವ ಆಸೆಯನ್ನು ತಂಡವೂ ಸಹ ಹೊಂದಿದೆ. ಇದರ ಭಾಗವಾಗಿ ನಾಳಿನ ಪಂದ್ಯ ಟೀಂ ಇಂಡಿಯಾಗೆ (Team India) ಮಹತ್ವದ್ದಾಗಿದೆ. ಹೌದು, ನಾಳೆ ಭಾರತ ಮತ್ತು ಪಾಕಿಸ್ತಾನ (IND vs PAk) ತಂಡಗಳು ಸೆಣಸಾಡಲಿವೆ. ಅಲ್ಲದೇ ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ನಾಳಿನ ಪಂದ್ಯ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿದೆ. ಈಗಾಗಲೇ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ದುರ್ಬಲ ಬಾರ್ಬಡೋಸ್‌ ತಂಡದ ವಿರುದ್ಧ ಸೋತರೆ, ಭಾರತ ತಂಡ ಆಸ್ಟ್ರೇಲಿಯಾ ಎದುರು ಸೋತಿದೆ.


ನಾಳೆ ಭಾರತ-ಪಾಕಿಸ್ತಾನ ಪಂದ್ಯ:


ನಾಳೆ (ಜುಲೈ 31) ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ ಭಾರತ ಮಹಿಳೆಯ ತಂಡ ಪಾಕಿಸ್ತಾನ ಮಹಿಳೆಯ ತಂಡವನ್ನು ಎದುರಿಸಲಿದೆ.  ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ 11 ಟಿ20 ಪಂದ್ಯಗಳನ್ನು ಆಡಿದ್ದು, ಭಾರತ 9 ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನದ 2 ಗೆಲುವನ್ನು ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಫೆವರೇಟ್ ತಂಡವಾಗಿದೆ.


ಪಂದ್ಯದ ವಿವರ:


ಇನ್ನು, ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಭಾರತತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಲೈವ್ ಸ್ಟ್ರೀಮಿಂಗ್ ಸೋನಿ LIV ನಲ್ಲಿ ಇರುತ್ತದೆ. ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯಲಿದೆ.


ಇದನ್ನೂ ಓದಿ: Sanket Sargar: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಖಾತೆ ತೆರೆದ ಸಂಕೇತ್ ಸರ್ಗರ್; ವೇಟ್‌ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ


ಮಾಡು ಇಲ್ಲವೇ ಮಡಿ ಪಂದ್ಯ:


ಇನ್ನು, ನಾಳಿನ ಪಂದ್ಯ ಭಾರತ ಮತ್ತು ಪಾಕ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈಗಾಗಲೇ ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಉಭಯ ತಂಡಗಳೆರಡೂ ಸೋಲನ್ನಪ್ಪಿದ್ದು, ನಾಳಿನ ಪಂದ್ಯ ಎರಡೂ ತಂಡಗಳೀಗೂ ಮಹತ್ವದ್ದಾಗಿದೆ. ಭಾರತ ತಂಡವು ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಅದರಂತೆ ಪಾಕಿಸ್ತಾನ ತಂಡವೂ ಸಹ ಬಾರ್ಬಡೋಸ್‌ನಂತಹ ಹೊಸದಾಗಿ ಉದಯೋನ್ಮುಖ ತಂಡದ ಮುಂದೆ ಮಂಡಿಯೂರಿತ್ತು. ಇದರಿಂದಾಗಿ ನಾಳಿನ ಪಂದ್ಯ ಎರಡೂ ತಂಡಗಳಿಗೂ ಬಹಳ ಮಹತ್ವದ್ದಾಗಿದೆ.


ಇದನ್ನೂ ಓದಿ: Commonwealth Games 2022: ಪದಕಗಳ ಬೇಟೆಗೆ ಟೀಂ ಇಂಡಿಯಾ ಸಜ್ಜು, ಮೆಗಾ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ


IND vs PAK ಸಂಭಾವ್ಯ ಪ್ಲೇಯಿಂಗ್ 11:


ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (WK), ಹರ್ಮನ್‌ಪ್ರೀತ್ ಕೌರ್ (c), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ.


ಪಾಕಿಸ್ತಾನ ಮಹಿಳಾ ತಂಡ: ಇರಾಮ್ ಜಾವೇದ್, ಮುನೀಬಾ ಅಲಿ, ಒಮೈಮಾ ಸೊಹೈಲ್, ಬಿಸ್ಮಾ ಮರೂಫ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಯೀಮ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅಮಮ್ ಅಮೀನ್.


ಭಾರತದ ಪದಕಗಳ ಖಾತೆ ತೆರೆದ ಸಂಕೇತ್ ಸರ್ಗರ್:


ಕಾಮನ್​ವೆಲ್ತ್ ಗೇಮ್ಸ್​ 2022ರಲ್ಲಿ ಭಾರತದ ಸಂಕೇತ್ ಸರ್ಗರ್  ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ  ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ

top videos
    First published: