IND vs PAK CWG 2022: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್, ಭಾರತಕ್ಕೆ ಭರ್ಜರಿ ಜಯ

ಇಂದು ಭಾರತ ಮತ್ತು ಪಾಕಿಸ್ತಾನ (IND vs PAk) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಪಾಕ್​ ಎದುರು ಭರ್ಜರಿ ಜಯ ದಾಖಲಿಸಿದೆ.

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

  • Share this:
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ (Commonwealth Games) ಇದೇ ಮೊದಲ ಬಾರಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಆಟವಾಡುತ್ತಿದೆ. ಹೀಗಾಗಿ ಕೋಟ್ಯಾಂತರ ಭಾರತೀಯರು ಮಹಿಳಾ ಕ್ರಿಕೆಟ್ (Womens Cricket) ತಂಡದ ಮೇಲೆ ನಿರೀಕ್ಷೆಯನ್ನಿಟ್ಟಿದ್ದು, ಪದಕ ಗೆಲ್ಲುವ ಆಸೆಯನ್ನು ತಂಡವೂ ಸಹ ಹೊಂದಿದೆ. ಇಂದು ಭಾರತ ಮತ್ತು ಪಾಕಿಸ್ತಾನ (IND vs PAk) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಭಾರತ ತಂಡ ಪಾಕ್​ ಎದುರು ಭರ್ಜರಿ ಜಯ ದಾಖಲಿಸಿದೆ.  ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡವು 18 ಓವರ್​ ಗಳಲ್ಲಿ 99 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೊತ್ತ ಬೆನ್ನತ್ತಿದ ಭಾರತ ತಂಡವು 11.4 ಓವರ್​ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ವಿಜಯದ ನಗೆ ಬೀರಿತು.

ಭಾರತೀಯರ ದಾಳಿಗೆ ತತ್ತರಿಸಿದ ಪಾಕ್:

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 18 ಓವರ್​ ಗಳಲ್ಲಿ 99 ರನ್ ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ಮುನೇಬಾ ಅಲಿ 32 ರನ್, ಬಿಸ್ಮಾ ಮಾರೂಫ್ 17 ರನ್, ಓಮೈನಾ 10 ರನ್, ಅಲಿಯಾ ನಾಸಿಮ್ 10 ರನ್, ಅಲಿಯಾ ರಿಯಾಝ್ 18 ರನ್ ಗಳಿಸುವ ಮೂಲಕ ಪಾಕಿಸ್ತಾನ ತಂಡವು ಅಲ್ಪಮೊತ್ತಕ್ಕೆ ಕುಸಿತಕಂಡಿತು.

ಸಂಘಟಿತ ಬೌಲಿಂಗ್ ಮಾಡಿದ ಟೀಂ ಇಂಡಿಯಾ ವನಿತೆಯರು:

ಇನ್ನು, ಟೀಂ ಇಂಡಿಯಾ ವನಿತೆಯರು ಸಂಘಟಿತ ಬೌಲಿಂಗ್ ಮಾಡುವ ಮೂಲಕ ಪಾಕ್​ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಸನ್ನೆ ರಾಣಾ ಮತ್ತು ರಾಧಾ ಯಾಧವ್ 2 ವಿಕೆಟ್​ ಪಡೆದರೆ, ಶ್ರಫಾಲಿ ವರ್ಮಾ, ಮೇಘನಾ ಸಿಂಗ್ ಮತ್ತು ರಿಂಕು ಸಿಂಗ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: CWG 2022: ಭಾರತಕ್ಕೆ 2ನೇ ಚಿನ್ನದ ಪದಕ, ವೇಟ್‌ಲಿಫ್ಟಿಂಗ್​ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಸಾಧನೆ

ಅಬ್ಬರಿಸಿದ ಸ್ಮೃತಿ ಮಂದಾನ:

ಇನ್ನು, ಪಾಕ್​ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 11.4 ಓವರ್​ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ವಿಜಯದ ನಗೆ ಬೀರಿತು. ಭಾರತದ ಪರ ಸ್ಮೃತಿ ಮಂದಾನ ಭರ್ಜರಿ ಪ್ರದರ್ಶನ ನೀಡಿದರು. ಅವರು 42 ಎಸೆತದಲ್ಲಿ 3 ಸಿಕ್ಸ್ ಮತ್ತು 8 ಪೋರ್​ಗಳ ನೆರವಿನಿಂದ 63 ರನ್ ಸಿಡಿಸಿದರು. ಉಳಿದಂತೆ ಶಫಾಲಿ ವರ್ಮಾ 16 ರನ್ ಮತ್ತು ಮೇಘನಾ 14 ರನ್ ಗಳಸಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್ 2022ರಲ್ಲಿ ಟೀಂ ಇಂಡಿಯಾ ವನಿತೆಯರ ತಂಡ ಗೆಲುವಿನ ಖಾತೆ ತೆರೆದಿದೆ.

ಇದನ್ನೂ ಓದಿ: CWG 2022: ಕಾಮನ್​ವೆಲ್ತ್ ​ನಲ್ಲಿ ಭಾರತಕ್ಕೆ ಮೊದಲ ಚಿನ್ನ, ವೇಟ್‌ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಸಾಧನೆ

ಭಾರತಕ್ಕೆ 2ನೇ ಚಿನ್ನದ ಪದಕ:
 ಇನ್ನು, ಭಾರತಕ್ಕೆ 2ನೇ ಚಿನ್ನದ ಪದಕ ಬಂದಂತಾಗಿದೆ. ಈಗಾಗಲೇ ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಕಾಮನ್​ವೆಲ್ತ್​ನ 3ನೇ ದಿನದ ಆರಂಭದಲ್ಲಿಯೇ ಭಾರತಕ್ಕೆ 2ನೇ ಚಿನ್ನ ಬಂದಿದೆ. ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರೆ, ಸಮೋವಾದ ನೆವೊ 293 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು, ಭಾರತಕ್ಕೆ ಈವರೆಗೆ ಬಂದಿರುವ ಎಲ್ಲಾ ಪದಕಗಳೂ ಸಹ ವೇಟ್‌ಲಿಫ್ಟಿಂಗ್‌ನಲ್ಲಿ ಮಾತ್ರ ಬಂದಿರುವುದಾಗಿದ್ದು ವಿಶೇಷವಾಗಿದೆ.
Published by:shrikrishna bhat
First published: