Gururaj Poojary: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕನ್ನಡಿಗನ ಸಾಧನೆ; ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಕಂಚು

ಈ ಮೂಲಕ ಭಾರತದ ಕಾಮನ್​ವೆಲ್ತ್ ಗೇಮ್ಸ್​ನ 2ನೇ ದಿನದಂದು (Commonwealth Games 2022 Day 2) ಸತತ ಎರಡನೇ ಪದಕ ಗೆಲ್ಲುವಂತಾಗಿದೆ. 

ಗುರುರಾಜ್ ಪೂಜಾರಿ

ಗುರುರಾಜ್ ಪೂಜಾರಿ

  • Share this:
    ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ (Gururaj Poojary) ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಗುರುರಾಜ್ ಪುಜಾರಿ ಪುರುಷರ 61 ಕೆಜಿ ವಿಭಾಗದಲ್ಲಿ  ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತದ ಕಾಮನ್​ವೆಲ್ತ್ ಗೇಮ್ಸ್​ನ 2ನೇ ದಿನದಂದು (Commonwealth Games 2022 Day 2) ಸತತ ಎರಡನೇ ಪದಕ ಗೆಲ್ಲುವಂತಾಗಿದೆ.  ಪುರುಷರ 61 ಕೆಜಿ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಗುರುರಾಜ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೇಯಲ್ಲಿ 118 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ಮ್ಮ ಮೂರನೇ ಪ್ರಯತ್ನದಲ್ಲಿ 151 ಕೆಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ .

    Commonwealth Games 2022 Day 2 Karnataka Gururaj Poojary won bronze in weight lifting
    ಗುರುರಾಜ್ ಪೂಜಾರಿ


    ಮಲೇಷ್ಯಾದ ಅಜ್ನಿಲ್ ಬಿನ್ ಬಿಡೀನ್ ಮುಹಮ್ಮದ್ 61 ಕೆಜಿಯ ವೇಟ್ ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಎರಡನೇ ಸ್ಥಾನಕ್ಕೆ ಭಾಜನರಾಗಿದ್ದರು. ಇತ್ತ ಗುರುರಾಜ್ ಪೂಜಾರಿ ಅವರಿಗೆ ಕೆನಡಾದ ಯೂರಿ ಸಿಮರ್ಡ್ ಭಾರೀ ಹಣಾಹಣಿ ನೀಡಿದರು. ಕಂಚಿನ ಪದಕಕ ಹೋರಾಟ ನಡೆಯಿತು. ಆದರೆ ಕೊನೆಗೂ ನಮ್ಮ ಹೆಮ್ಮೆಯ ಕನ್ನಡಿಗ ಕುಂದಾಪುರದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಟ್ಟರು.

    ಇದು ಎರಡನೇ ಪದಕ
    2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ ನಂತರ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಗುರುರಾಜ ಅವರ ಎರಡನೇ ಪದಕವಾಗಿದೆ.

    ಇಂದಷ್ಟೇ ಭಾರತದ ಖಾತೆ ತೆರೆದಿದ್ದ ಸಂಕೇತ್ ಸರ್ಗರ್
    ಕಾಮನ್​ವೆಲ್ತ್ ಗೇಮ್ಸ್​ 2022ರಲ್ಲಿ (CWG 2022 Live Updates From Day 2: ) ಭಾರತದ ಸಂಕೇತ್ ಸರ್ಗರ್ (Sanket Sargar) ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ. ಅವರು ಒಟ್ಟು 248 ಕೆಜಿ (113 ಸ್ನ್ಯಾಚ್, 135 ಕ್ಲೀನ್ & ಜರ್ಕ್) ಎತ್ತಿ ಎರಡನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. ಮಲೇಷ್ಯಾದ ಅನಿಕ್ ಕಸ್ಡಾನ್ಗೆ ಒಟ್ಟು 249 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಅಂದರೆ ಭಾರತದ ಪರ ಸಂಕೇತ್ ಸರ್ಗರ್ ಕೇವಲ ಒಂದೇ ಒಂದು ಕೆಜಿಯಿಂದ ಚಿನ್ನದ ಪದಕದಿಂದ ಮಿಸ್ ಆಗಿದ್ದಾರೆ. ಶ್ರೀಲಂಕಾದ ದಿಲಂಕಾ ಯೊಡಗೆ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

    ಸಂಕೇತ್ ಸರ್ಗರ್ ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯುನಿರ್ಸಿಟಿ ಗೇಮ್ಸ್​ಗಳಲ್ಲಿಯೂ ಪದಕಕ್ಕೆ ಈಮುನ್ನ ಮುತ್ತಿಟ್ಟಿದ್ದರು.

    ಇದನ್ನೂ ಓದಿ:Oneday Cricket: ಏಕದಿನ ಕ್ರಿಕೆಟಿನ ಭವಿಷ್ಯ ಅಳಿದು ಹೋಗುವ ಅಪಾಯದಲ್ಲಿದೆ, ಆತಂಕ ವ್ಯಕ್ತಪಡಿಸಿದ ಹಿರಿಯ ಕ್ರಿಕೆಟಿಗರು

    ಆಗಸ್ಟ್ 8ರ ವರೆಗೆ ನಡೆಯಲಿರುವ ಕ್ರೀಡಾಕೂಟ
    ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಿದೆ. ಆಗಸ್ಟ್ 8ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಪದಕ ಗೆಲ್ಲಲು ಸಿದ್ಧರಾಗಿದ್ದಾರೆ.

    ವಿವಿಧ ಆಟಗಾರರ ಮೇಲೆ ಹೆಚ್ಚಿದ ಭರವಸೆ
    ಭಾರತದ ಸ್ಟಾರ್ ಷಟ್ಲರ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

    ಇದನ್ನೂ ಓದಿ: Uttara Kannada: ಕಬಡ್ಡಿ, ಖೋ-ಖೋ ಆಡ್ತೀರಾ? ಈಗ್ಲೇ ಇಲ್ಲಿ ರಿಜಿಸ್ಟರ್ ಮಾಡ್ಕೊಳ್ಳಿ

    ಸಿಂಧು ತನ್ನ ಗುಣಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಿದರೆ ಚಿನ್ನದ ಪದಕ ಖಚಿತವಾಗಿದ್ದು, ಇವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಆದರೆ ವರದಿಗಳ ಪ್ರಕಾರ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರು ಐಸೋಲೇಷನ್​ಗೆ ಒಳಗಾಗಿದ್ದಾರೆ.
    Published by:guruganesh bhat
    First published: