CWG 2022: ಮುಂದುವರೆದ ಭಾರತದ ಪದಕ ಬೇಟೆ, ಪುರುಷರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ ಸಿಕ್ತು ಚಿನ್ನ-ಬೆಳ್ಳಿ

ಕಾಮನ್ವೆಲ್ತ್ ಗೇಮ್ಸ್‌ನ ಟ್ರಿಪಲ್‌ ಜಂಪ್‌ ವಿಭಾಗದಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ ಮತ್ತು ಬೆಳ್ಳಿ ಪದಕಗಳು ಬಂದಿವೆ. ಪುರುಷರ ವಿಭಾಗದಲ್ಲಿ ಇಬ್ಬರು ಬಂಗಾರ ಮತ್ತು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಎಲ್ದೋಸ್ ಪೌಲ್ ಮತ್ತು ಅಬ್ದುಲ್ಲಾ ಅಬೂಬಕರ್

ಎಲ್ದೋಸ್ ಪೌಲ್ ಮತ್ತು ಅಬ್ದುಲ್ಲಾ ಅಬೂಬಕರ್

  • Share this:
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಟ್ರಿಪಲ್ ಜಂಪ್ ವಿಭಾಗದಲ್ಲಿ (Triple jump) ಭಾರತಕ್ಕೆ ಐತಿಹಾಸಿಕ ಚಿನ್ನ ಮತ್ತು ಬೆಳ್ಳಿ ಪದಕಗಳು ಬಂದಿವೆ. ಪುರುಷರ ವಿಭಾಗದಲ್ಲಿ ಇಬ್ಬರು ಬಂಗಾರ ಮತ್ತು ಬೆಳ್ಳಿ  ಪದಕಕ್ಕೆ (Gold and Silver Medal) ಭಾಜನರಾಗಿದ್ದಾರೆ. ಪುರುಷರ ಟ್ರಿಪಲ್ ಜಂಪ್ನಲ್ಲಿ ಎಲ್ದೋಸ್ ಪೌಲ್ (Eldhose Paul) ಎಂಬ ಅಥ್ಲೆಟಿಕ್ 17.03 ಮೀಟರ್ ಜಿಗಿತದೊಂದಿಗೆ ಬಂಗಾರದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ (Abdulla Aboubacker) 17.02 ಮೀಟರ್ ಜಿಗಿದು ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ಚಿನ್ನ – ಬೆಳ್ಳಿ ಎರಡೂ ಭಾರತದ ಪಾಲಾಯಿತು. ಒಟ್ಟಾರೆ ಕಾಮನ್ವೆಲ್ತ್ ಕೂಟದಲ್ಲಿ ಇದುವರೆಗೆ ಭಾರತ ಆರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು ಸ್ಪರ್ಧೆಯಲ್ಲಿ ಮುನ್ನುಗ್ಗುತಿದೆ.

ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ಇತ್ತಾ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ, 16 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ. ಇತ್ತ ಭಾರತದ ಮಹಿಳಾ ಹಾಕಿ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಕಂಚು ಗೆದಿದ್ದು, ಪೆನಾಲ್ಟಿ ಶೂಟೌಟ್ ನಲ್ಲಿ 2-1 ಅಂತರದ ಗೋಲುಗಳನ್ನು ಹೊಡೆಯುವ ಮೂಲಕ ಹಾಕಿ ಪದಕ ಗೆದ್ದಿದೆ. ಸದ್ಯ ಇವಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಟ್ರಿಪಲ್ ಜಂಪ್ನಲ್ಲಿ ಪುರುಷರಿಬ್ಬರ ಅಸಾಧಾರಣ ಸಾಧನೆ.

ಟ್ರಿಪಲ್ಜಂಪ್ ನಲ್ಲಿ ಚಿನ್ನ-ಬೆಳ್ಳಿ ಎರಡೂ ಪದಕಗಳು ಭಾರತದ ತೆಕ್ಕೆಗೆ
ಹೌದು ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಗೆಲುವು ಎನ್ನಬಹುದು. ಟ್ರಿಪಲ್ ಜಂಪ್ನಲ್ಲಿ ಭಾರತದ ಪಟುಗಳು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಎಲ್ದೋಸ್ ಪೌಲ್ ತಂದು ಕೊಟ್ಟಿದ್ದಾರೆ. ಕೇವಲ 0.01 ಸೆಂಟಿಮೀಟರ್ ವ್ಯತ್ಯಾಸದಲ್ಲಿ ಕೇರಳದ ಸಹ ಆಟಗಾರ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಗೆದ್ದರೆ, ಪ್ರವೀಣ್ ಚಿತ್ರವೆಲ್ ಕಂಚಿನ ಪದಕದಿಂದ ವಂಚಿತರಾದರು.



ಇತ್ತ ಮಹಿಳಾ ಜಾವೆಲಿನ್‌ನಲ್ಲಿ ಅಣ್ಣು ರಾಣಿ ಅಭೂತಪೂರ್ವ ಕಂಚು ಗೆದ್ದರೆ, ಸಂದೀಪ್ ಕುಮಾರ್ 10,000 ಮೀಟರ್ ನಡಿಗೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.

ಟ್ರಿಪಲ್ ಜಂಪ್ ಗೆ ಇದೇ ಮೊದಲು ಚಿನ್ನದ ಪದಕ ಬಂದಿದ್ದು
ಕಳೆದ ಆವೃತ್ತಿಗಳಲ್ಲಿ ಭಾರತ ನಾಲ್ಕು ಟ್ರಿಪಲ್ ಜಂಪ್ ಪದಕಗಳನ್ನು ಗೆದ್ದಿದೆ ಆದರೆ ದೇಶದ ಇಬ್ಬರು ಅಥ್ಲೀಟ್‌ಗಳು ಪೋಡಿಯಂ ಫಿನಿಶ್‌ಗಳನ್ನು ಪಡೆದಿರುವುದು ಇದೇ ಮೊದಲು. ಮೊಹಿಂದರ್ ಸಿಂಗ್ ಗಿಲ್ 1970 ಮತ್ತು 1974 ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಗೆದ್ದಿದ್ದರೆ, ರೆಂಜಿತ್ ಮಹೇಶ್ವರಿ ಮತ್ತು ಅರ್ಪಿಂದರ್ ಸಿಂಗ್ 2010 ಮತ್ತು 2014 ಆವೃತ್ತಿಗಳಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಆದರೆ ಈ ಇಬ್ಬರು ಅಥ್ಲೆಟಿಕ್ ಗಳು ಭಾರತಕ್ಕೆ ಚಿನ್ನ-ಬೆಳ್ಳಿ ಎರಡನ್ನೂ ಸಹ ಗೆದ್ದಿರುವುದು ವಿಶೇಷವಾಗಿದೆ.

ಇದನ್ನೂ ಓದಿ:  CWG 2022: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಫೈಟಿಂಗ್! ಹೊಡೆದಾಡಿಕೊಂಡ ಹಾಕಿ ಆಟಗಾರರು

ಹೇಗಿತ್ತು ಇಬ್ಬರ ರೋಚಕ ಆಟ?
ಚಿನ್ನದ ಪದಕ ವಿಜೇತ ಎಲ್ದೋಸ್ ಪೌಲ್ ಕಾಮನ್ ವೆಲ್ತ್ ಗೇಮ್ಸ್ನಲ್ಲಿ 17 ಮೀಟರ್ ಮಾರ್ಕ್ ದಾಟಿದ ಮೊದಲ ಆಟಗಾರನಾದರು. ಮತ್ತು ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 17.03 ಮೀ. ಜಂಪ್ ಮಾಡುವ ಮೂಲಕ ಬಂಗಾರದ ಪದಕ ಜಯಿಸಿದರು.

ಎಲ್ದೋಸ್ ಪೌಲ್


ಅಬೂಬಕರ್ ಅವರು ತಮ್ಮ ಐದನೇ ಪ್ರಯತ್ನದಲ್ಲಿ 17.02 ಮೀ ಜಿಗಿತದೊಂದಿಗೆ ಬೆಳ್ಳಿ ಗೆದ್ದರು. ಬರ್ಮುಡಾದ ಜಾಹ್-ನ್ಹೈ ಪೆರಿಂಚಿಫ್ 16.92 ಮೀ ಜಿಗಿತದೊಂದಿಗೆ ಕಂಚು ಗೆದ್ದರು. ಮತ್ತೋರ್ವ ಭಾರತೀಯ ಪ್ರವೀಣ್ ಚಿತ್ರವೆಲ್ ನಾಲ್ಕನೇ ಸ್ಥಾನ ಪಡೆದರು. ಅವರು 0.03 ಮೀ. ಅಂತರದಲ್ಲಿ ಅವರು ಕಂಚಿನ ಪದಕದಿಂದ ವಂಚಿತರಾದರು. ಅವರು ಅಂತಿಮವಾಗಿ 16.89 ಮೀಟರ್ಗಳ ಅತ್ಯುತ್ತಮ ಜಿಗಿತದೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Kieron Pollard​ ಮನೆಗೆ ಭೇಟಿ ನೀಡಿದ ಹಾರ್ದಿಕ್​ ಪಾಂಡ್ಯ! ಪೊಲಾರ್ಡ್​ ಕುಟುಂಬ ಹೀಗಿದೆ ನೋಡಿ

ಅಬ್ದುಲ್ಲಾ ಅಬೂಬಕರ್


ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಟ್ರಿಪಲ್ ಜಂಪ್ನ ಫೈನಲ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾದ ಎಲ್ದೋಸ್ ಪೌಲ್ ಸದ್ಯ ದೇಶದ ಮುಕುಟಕ್ಕೆ ಮತ್ತೊಂದು ಗರಿ ಇಟ್ಟಿದ್ದಾರೆ.
Published by:Ashwini Prabhu
First published: