ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

ಕಳೆದ ಕೆಲ ವರ್ಷಗಳಿಂದ ನ್ಯೂಜಿಲ್ಯಾಂಡ್​ ಕ್ಲಬ್ ಪರವಾಗಿ ಆಡುತ್ತಿರುವ 33ರ ಹರೆಯದ ಹರೀಶ್ ಗಂಗಾಧರನ್ ಸಾವಿಗೆ ಗ್ರೀನ್​ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್​ ಕಂಬನಿ ಮಿಡಿದಿದ್ದಾರೆ.

zahir | news18
Updated:February 5, 2019, 12:57 PM IST
ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ
ಹರೀಶ್ ಗಂಗಾಧರನ್
  • News18
  • Last Updated: February 5, 2019, 12:57 PM IST
  • Share this:
ನ್ಯೂಜಿಲ್ಯಾಂಡ್ ಕ್ಲಬ್​ ಪರ ಆಡುತ್ತಿದ್ದ ಭಾರತೀಯ ಮೂಲದ ಕ್ರಿಕೆಟಿಗ ಹರೀಶ್​ ಗಂಗಾಧರನ್ ಮೈದಾನದಲ್ಲೇ ಕುಸಿದು ಸಾವನ್ನಪ್ಪಿದ ದಾರುಣ ಘಟನೆ ಡುನೆಡಿನ್​ನಲ್ಲಿ ನಡೆದಿದೆ.  ಇವರು ಕಿವೀಸ್​ನ ಗ್ರೀನ್ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್ ತಂಡದ ಆಟಗಾರರಾಗಿದ್ದು, ಕೆಲ ವರ್ಷಗಳಿಂದ ಈ ತಂಡವನ್ನು​ ಪ್ರತಿನಿಧಿಸುತ್ತಿದ್ದರು.

ಶನಿವಾರ ಸಂಜೆ ಗ್ರೀನ್​ಲ್ಯಾಂಡ್​ ಸನ್ನಿವೇಲ್ ಸ್ಪೋರ್ಟ್ಸ್​ ಸೆಂಟರ್​ನಲ್ಲಿ ಆಡುತ್ತಿದ್ದ ವೇಳೆ ಉಸಿರಾಟದ ತೊಂದರೆಗೆ ಸಿಲುಕಿದ್ದರು. ಓವರ್ ಎಸೆದ ನಂತರ ಉಸಿರಾಟದ ಒತ್ತಡಕ್ಕೊಳಗಾಗಿ ಮೈದಾನದಲ್ಲೇ ಕುಸಿದು ಬಿದ್ದರು.  ಪ್ರಜ್ಞೆಯನ್ನು ಕಳೆದುಕೊಂಡಿದ್ದ ಹರೀಶ್ ಅವರಿಗೆ  ಸಹ ಆಟಗಾರರು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ಫಲಕಾರಿಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ನ್ಯೂಜಿಲ್ಯಾಂಡ್​ ಕ್ಲಬ್ ಪರವಾಗಿ ಆಡುತ್ತಿರುವ 33ರ ಹರೆಯದ ಹರೀಶ್ ಗಂಗಾಧರನ್ ಸಾವಿಗೆ ಗ್ರೀನ್​ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್​ ಕಂಬನಿ ಮಿಡಿದಿದ್ದಾರೆ. ಹಾಗೆಯೇ ನ್ಯೂಜಿಲ್ಯಾಂಡ್​  ಕ್ರಿಕೆಟ್​ ಅಧಿಕಾರಿ ರಿಚರ್ಡ್​ ಬೂಕ್ ಆಟಗಾರನ ದುರಂತ ಅಂತ್ಯಕ್ಕೆ ಸಂತಾಪ ಸೂಚಿಸಿದ್ದಾರೆ. ಕ್ಲಬ್​ ಕ್ರಿಕೆಟ್​ನಲ್ಲಿ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ ಹರೀಶ್ ಅವರು ಪತ್ನಿ ನಿಶಾ, ಮಗಳು ಗೌರಿ ಹಾಗೂ ಅಪಾರ ಕ್ರಿಕೆಟ್‌ ಅಭಿಮಾನಿಗಳನ್ನು ಹರೀಶ್‌ ಅಗಲಿದ್ದಾರೆ.

ಮೈದಾನದಲ್ಲಿ ಜೀವತೆತ್ತ ಕ್ರಿಕೆಟಿಗರ ಪಟ್ಟಿ 
-ಫಿಲ್ ಹ್ಯೂಸ್ (ಆಸ್ಟ್ರೇಲಿಯಾ, 25) -2014 - ಸೀನ್ ಅಬಾಟ್ ಅವರು ಎಸೆದ ಬೌನ್ಸರ್ ಹ್ಯೂಸ್ ತಲೆಗೆ ಬಡಿದು ಸಾವನ್ನಪ್ಪಿದ್ದರು.
-ಡರೇನ್ ರಾಂಡಲ್ (ದಕ್ಷಿಣ ಆಫ್ರಿಕಾ, 32)-2013 - ತಲೆಗೆ ಬಾಲ್​ ತಾಗಿ ಕ್ರೀಸ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.
-ಜುಲ್ಫಿಕರ್ ಭಟ್ಟಿ(ಪಾಕಿಸ್ತಾನ, 22) 2013- ಪಾಕಿಸ್ತಾನದ ದೇಶಿ ಕ್ರಿಕೆಟರ್ ಜುಲ್ಫಿಕರ್ ಭಟ್ಟಿ ಎದೆಗೆ ರಭಸವಾಗಿ ಚೆಂಡು ತಗುಲಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು.-ರಿಚರ್ಡ್ ಬಿಯೂಮೌಂಟ್ (ಇಂಗ್ಲೆಂಡ್, 33) 2012- ಆಟದ ನಡುವೆ ಬಳಲಿದ ರಿಚರ್ಡ್ ಹೃದಯಾಘಾತದಿಂದ ನಿಧನರಾಗಿದ್ದರು.
-ಅಲ್ಕ್ವೀನ್ ಜೆನ್ಕಿನ್ಸ್(ಇಂಗ್ಲೆಂಡ್, 72)-2009 - ಅಂಪೈರಿಂಗ್ ಮಾಡುವಾಗ ತಲೆಗೆ ಚೆಂಡಿನಿಂದ ಪೆಟ್ಟು ತಿಂದು ದುರಂತ ಅಂತ್ಯಕಂಡರು.
-ವಾಸೀಂ ರಾಜ (ಪಾಕಿಸ್ತಾನ, 54) 2006- ಕೌಂಟಿ ಕ್ರಿಕೆಟ್​ನಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.
-ರಮಣ್ ಲಂಬಾ (ಭಾರತ, 38) 1998- ಟೀಂ ಇಂಡಿಯಾ ಆಟಗಾರ ಲಂಬಾ ಶಾರ್ಟ್ ಲೆಗ್ ನಲ್ಲಿ ಹೆಲ್ಮೆಟ್ ಇಲ್ಲದೆ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡು ಹಣೆಗೆ ಬಡಿದಿದ್ದರಿಂದ ಅವರು ಸಾವನ್ನಪ್ಪಿದರು.

ಇದನ್ನೂ ಓದಿ: VIDEO: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ: ಹಾಗಿದ್ರೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ? ಅಂಬಿ ಅಭಿಮಾನಿಗಳ ಪಶ್ನೆ

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading