• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023 Closing Ceremony: ಐಪಿಎಲ್ ಅದ್ಧೂರಿ ಸಮಾರಂಭಕ್ಕೆ ಕೌಂಟ್‌ಡೌನ್, ಕಿಕ್ ಏರಿಸಲು ಯಾವೆಲ್ಲ ಸ್ಟಾರ್ಸ್ ಬರ್ತಿದ್ದಾರೆ?

IPL 2023 Closing Ceremony: ಐಪಿಎಲ್ ಅದ್ಧೂರಿ ಸಮಾರಂಭಕ್ಕೆ ಕೌಂಟ್‌ಡೌನ್, ಕಿಕ್ ಏರಿಸಲು ಯಾವೆಲ್ಲ ಸ್ಟಾರ್ಸ್ ಬರ್ತಿದ್ದಾರೆ?

ಐಪಿಎಲ್​ 2023

ಐಪಿಎಲ್​ 2023

IPL 2023 Closing Ceremony: ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ರ‍್ಯಾಪರ್ ಡಿವೈನ್ ಮತ್ತು ಖ್ಯಾತ ಗಾಯಕಿ ಜೋನಿತಾ ಗಾಂಧಿ ಹಾಡಲಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023 ರ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ದಾಖಲೆಯ 10 ನೇ ಬಾರಿಗೆ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದೆ, ಆದರೆ ಪ್ರಶಸ್ತಿ ಹಣಾಹಣಿಯಲ್ಲಿ ಚೆನ್ನೈನ ಎದುರಾಳಿ ಯಾರು? ಇದು ಇನ್ನೂ ಸ್ಪಷ್ಟವಾಗಿಲ್ಲ. ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (MI vs GT) ನಡುವೆ ನಡೆದ ಕ್ವಾಲಿಫೈಯರ್ 2ರ ವಿಜೇತರು ಫೈನಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೆಣಸಲಿದ್ದಾರೆ. ಇದರ ನಡುವೆ ಬಿಸಿಸಿಐ ಈ ಬಾರಿ ಐಪಿಎಲ್​ ಓಪನಿಂಗ್​ ಸೆರಮನಿಯನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ಅದೇ ರೀತಿ ಇದೀಗ ಐಪಿಎಲ್​ ಸಮಾರೋಪ ಸಮಾರಂಭವನ್ನು (IPL 2023 Closing Ceremony) ಇನ್ನಷ್ಟು ಗ್ರ್ಯಾಂಡ್​ ಆಗಿ ನಡೆಸಲು ಸಿದ್ಧತೆ ನಡೆಸಿದೆ. ಇಕ್ಕೆ ಯಾರೆಲ್ಲಾ ಬರಲಿದ್ದಾರೆ ಎಂದು ಬಿಸಿಸಿಐ ಘೊಷಿಸಿದೆ.


ಐಪಿಎಲ್​ನಲ್ಲಿ ರ‍್ಯಾಪರ್​ಗಳ ಕಲರವ:


ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ರ‍್ಯಾಪರ್ ಡಿವೈನ್ ಮತ್ತು ಖ್ಯಾತ ಗಾಯಕಿ ಜೋನಿತಾ ಗಾಂಧಿ ಹಾಡಲಿದ್ದಾರೆ. ಐಪಿಎಲ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ, ಡಿವೈನ್ ಮತ್ತು ಜನಿತಾ ಅವರಲ್ಲದೆ, ರ‍್ಯಾಪರ್ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಕೂಡ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.



ರಾಪರ್ ಕಿಂಗ್ ಮತ್ತು ನ್ಯೂಕ್ಲಿಯಸ್ ಶೋ:


ರಾಪರ್ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಅವರ ಪ್ರದರ್ಶನವು ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಪ್ರಾರಂಭವಾಗುತ್ತದೆ. ಇದಕ್ಕೂ ಮೊದಲು, 2023 ರ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ, ಗಾಯಕರಾದ ಅರಿಜಿತ್ ಸಿಂಗ್ ಮತ್ತು ಎಪಿ ಧಿಲ್ಲೋನ್ ಜೊತೆಗೆ, ರಶ್ಮಿಕಾ ಮಂಧಾನ ಮತ್ತು ನಟಿ ತಮನ್ನಾ ನೃತ್ಯದೊಂದಿಗೆ ಆರಂಭಿಸಲಾಗಿತ್ತು. ಕಿಂಗ್ ರೊಕ್ಕೊ ಎಂದೂ ಕರೆಯಲ್ಪಡುವ ರಾಪರ್ ಕಿಂಗ್ MTV 2019ರ ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.



ನ್ಯೂಕ್ಲಿಯ ಬಗ್ಗೆ ನೋಡುವುದಾದರೆ, ನ್ಯೂಕ್ಲಿಯಾ ಅವರು ಸಂಜೆ 6:30 ಕ್ಕೆ ಪ್ರದರ್ಶನ ನೀಡಲಿದ್ದಾರೆ. ಅವರು ಸಂಗೀತ ನಿರ್ಮಾಪಕರು ಆಗಿದ್ದಾರೆ. ಜೋನಿತಾ ಬಾಲಿವುಡ್ ನಲ್ಲಿ ಹಲವು ಸೂಪರ್ ಡೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಡಿವೈನ್ ರಾಪರ್ ಮತ್ತು ಗಾಯಕ ಕೂಡ. ಐಪಿಎಲ್‌ನ ಮಿಡ್ ಶೋನಲ್ಲಿ ಡಿವೈನ್ ಮತ್ತು ಜೊನಿಟಾ ಅವರ ಪ್ರದರ್ಶನವನ್ನು ಸಹ ಕಾಣಬಹುದು. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಆರಂಭವಾಗಲಿದೆ. ನ್ಯೂಕ್ಲಿಯಸ್ ಸಂಜೆ 6:30 ರಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.


ಇದನ್ನೂ ಓದಿ: IPL 2023: Sorry ವಿರಾಟ್ ಕೊಹ್ಲಿ ಸರ್, RCB ಪರ ಆಡ್ತಿನಿ ಅಂದ ನವೀಲ್​-ಉಲ್​-ಹಕ್​!


10ನೇ ಬಾರಿ ಚೆನ್ನೈ ಫೈನಲ್​ಗೆ:


ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿ ಕ್ವಾಲಿಫೈಯರ್-2 ಪ್ರವೇಶಿಸಿತು. ಅವರು ಚೆನ್ನೈ ವಿರುದ್ಧ ಸೋತ ಗುಜರಾತ್ ಅನ್ನು ಎದುರಿಸಲಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ 10ನೇ ಬಾರಿ ಫೈನಲ್ ತಲುಪಿದೆ. ಎರಡನೇ ಕ್ವಾಲಿಫೈಯರ್ ನಲ್ಲಿ ಗೆದ್ದ ತಂಡ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

First published: