ಏಕದಿನ ಸರಣಿಯನ್ನೂ ಗೆದ್ದು ಬೀಗಿದ ಭಾರತ: ಕೆರಿಬಿಯನ್ನರಿಗೆ ಭಾರೀ ಮುಖಭಂಗ

Vinay Bhat | news18
Updated:November 1, 2018, 5:36 PM IST
ಏಕದಿನ ಸರಣಿಯನ್ನೂ ಗೆದ್ದು ಬೀಗಿದ ಭಾರತ: ಕೆರಿಬಿಯನ್ನರಿಗೆ ಭಾರೀ ಮುಖಭಂಗ
  • Advertorial
  • Last Updated: November 1, 2018, 5:36 PM IST
  • Share this:
ನ್ಯೂಸ್ 18 ಕನ್ನಡ

ತಿರುವನಂತಪುರಂ (ನ. 01): ಇಲ್ಲಿನ ಗ್ರೀನ್​ಫೀಲ್ಡ್​ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಬೌಲರ್​ಗಳ ದಾಳಿಗೆ ಬೆದರಿದ ಕೆರಿಬಿಯನ್ನರು ಹೀನಾಯವಾಗಿ ಸೋಲುಂಡು ಭಾರತಕ್ಕೆ ಶರಣಾಗಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-1 ಅಂತರದ ಮುನ್ನಡೆಯೊಂದಿಗೆ ಏಕದಿನ ಸರಣಿಯನ್ನೂ ಗೆದ್ದು ಬೀಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್ ಕೇವಲ 104 ರನ್​ಗೆ ಆಲೌಟ್ ಆಯಿತು. ಭಾರತೀಯ ಬೌಲರ್​ಗಳ ಸಂಘಟಿತ ಹೋರಾಟದ ನಡುವೆ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಒಬ್ಬರಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು. ತಂಡದ ಪರ ನಾಯಕ ಜೇಸನ್ ಹೋಲ್ಡರ್​​ 25, ಮಾರ್ಲನ್ ಸ್ಯಾಮ್ಯುಯೆಲ್ಸ್​ 24 ಹಾಗೂ ರೋಮನ್ ಪೋವೆಲ್ 16 ರನ್​​ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್​ಮನ್​​ಗಳ ಸ್ಕೋರ್ ಎರಡಂಕಿ ಗಡಿ ದಾಟಲಿಲ್ಲ. ಪರಿಣಾಮ 31.5 ಓವರ್​​ನಲ್ಲಿ 104 ರನ್​ಗೆ ಆಲೌಟ್ ಆಯಿತು. ಭಾರತ ಪರ ರವೀಂದ್ರ ಜಡೇಜಾ ಕೇವಲ 34 ರನ್​ ನೀಡಿ 4 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ ಹಾಗೂ ಖಲೀಲ್ ಅಹ್ಮದ್ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: (VIDEO): ವಿಚಿತ್ರ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಜಯ ತಂದುಕೊಟ್ಟ ಆಸೀಸ್ ಆಟಗಾರ

105 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ 2ನೇ ಓವರ್​ನಲ್ಲಿ ಶಿಖರ್ ಧವನ್(6) ವಿಕೆಟ್ ಕಳೆದುಕೊಂಡಿತಾದರು, ರೋಹಿತ್ ಶರ್ಮ ಹಾಗೂ ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ 99 ರನ್​ಗಳ ಕಾಣಿಕೆಯೊಂದಿಗೆ 14.5 ಓವರ್​​ನಲ್ಲೇ 105 ರನ್​ ಬಾರಿಸುವ ಮೂಲಕ 9 ವಿಕೆಟ್​​ಗಳ ಭರ್ಜರಿ ಗೆಲುವು ಕಂಡಿತು. ರೋಹಿತ್ ಶರ್ಮಾ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ ಅಜೇಯ 63 ಹಾಗೂ ಕೊಹ್ಲಿ 33 ರನ್ ಬಾರಿಸಿ ಅಜೇಯರಾಗಿ ಉಳಿದರು.

ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಅಂತರದಿಂದ ಸರಣಿ ವಶ ಪಡಿಸಿಕೊಂಡಿದೆ. ಅಲ್ಲದೆ ತವರಿನಲ್ಲಿ ಸತತ 6ನೇ ಬಾರಿ ಸರಣಿ ಗೆದ್ದ ಸಾಧನೆ ಮಾಡಿತು. ಇನ್ನು ವೆಸ್ಟ್​ ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ನಡೆಯಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್​​ನಲ್ಲಿ ನ. 4 ರಂದು ಮೊದಲ ಪಂದ್ಯ ಆಡಲಿದೆ.

LIVE BLOG: ಟೀಂ ಇಂಡಿಯಾ ಮಡಿಲಿಗೆ ಏಕದಿನ ಸರಣಿ
Loading...

ಸಂಕ್ಷಿಪ್ತ ಸ್ಕೋರ್:

ವೆಸ್ಟ್​ ಇಂಡೀಸ್: 104/10 (31.5 ಓವರ್​)

(ಜೇಸನ್ ಹೋಲ್ಡರ್​​ 25, ರವೀಂದ್ರ ಜಡೇಜಾ 34/4)

ಭಾರತ: 105/1 (14.5 ಓವರ್​​)

(ರೋಹಿತ್ ಶರ್ಮಾ 63*, ವಿರಾಟ್ ಕೊಹ್ಲಿ 33*, TOmsf 33/1)

ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜಾ

ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ
First published:November 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...